ಲೀಗಲ್ ನೋಟಿಸ್‌ಗೆ ಉತ್ತರಿಸಿದ್ದೇನೆ, ವಿಚ್ಛೇದನ ಅರ್ಜಿ ನನಗೆ ಇನ್ನೂ ತಲುಪಿಲ್ಲ: ಶ್ರೀದೇವಿ ಭೈರಪ್ಪ!

Published : Jun 10, 2024, 05:43 PM ISTUpdated : Jun 10, 2024, 05:45 PM IST
ಲೀಗಲ್ ನೋಟಿಸ್‌ಗೆ ಉತ್ತರಿಸಿದ್ದೇನೆ, ವಿಚ್ಛೇದನ ಅರ್ಜಿ ನನಗೆ ಇನ್ನೂ ತಲುಪಿಲ್ಲ: ಶ್ರೀದೇವಿ ಭೈರಪ್ಪ!

ಸಾರಾಂಶ

ಯುವ ರಾಜ್‌ಕುಮಾರ್ ಕಡೆಯಿಂದ  ವಿಚ್ಚೇದನಕ್ಕೆ ಪಿಟಿಷನ್ ಅರ್ಜಿ ಸಲ್ಲಿಸಲಾಗಿದೆ. ಯುವ ಸಿನಿಮಾದ ಮುಹೂರ್ತದ ವೇಳೆಯಲ್ಲಿ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಯುವ ಸಿನಿಮಾ ರಿಲೀಸ್ ಸಮಯದಲ್ಲಿ ಶ್ರೀದೇವಿ ಒಟ್ಟಿಗೆ ಇರಲಿಲ್ಲ.

ಕನ್ನಡ ಚಿತ್ರರಂಗದ ಮೇರು ನಟ, ಅಣ್ಣಾವರು ಖ್ಯಾತಿಯ ಡಾ ರಾಜ್‌ಕುಮಾರ್ ಕುಟುಂಬದ ನಟ ಯುವ ರಾಜ್‌ಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಎಂ ಸಿ ಆಕ್ಟ್  ಸೆಕ್ಷನ್ (13 (1) (ia) ಅಡಿಯಲ್ಲಿ ಫ್ಯಾಮಿಲಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಜೂನ್ 6 ರಂದು ವಿಚ್ಛೇದನಕ್ಕೆ ನಟ ಯುವ ರಾಜ್‌ಕುಮಾರ್ ಅವರು ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ಬೆಳವಣಿಗೆ ಏನಾಗಬಹುದು ಎಂಬ ಕುತೂಹಲಕ್ಕೆ ಈ ಘಟನೆ ಎಡೆ ಮಾಡಿಕೊಟ್ಟಿದೆ. 

ಸದ್ಯ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಅವರು ದೊಡ್ಮನೆಯಿಂದ ದೂರವಾಗಿದ್ದಾರೆ ಎನ್ನಲಾಗಿದೆ. ಸಿಕ್ಕ ಮಾಹಿತಿ ಪ್ರಕಾರ ಶ್ರೀದೇವಿ ಭೈರಪ್ಪ ಅವರು ವಿದೇಶದಲ್ಲಿ ಇದ್ದಾರೆ. ಕಳೆದ 6 ತಿಂಗಳಿಂದ  ದೊಡ್ಮನೆ ಕುಟುಂಬದಿಂದ ದೂರ ಉಳಿದಿರುವ ಶ್ರೀದೇವಿ ಭೈರಪ್ಪ ಅವರು ಯುವ ರಾಜ್‌ಕುಮಾರ್ ಜತೆ ಸಂಸಾರ ಮಾಡಿಕೊಂಡಿಲ್ಲ ಎನ್ನಲಾಗಿದೆ. ಒಂದು ವರ್ಷದಿಂದ  ದಂಪತಿ ನಡುವೆ ಕಲಹ ಇತ್ತು ಎನ್ನಲಾಗಿದೆ. ಯುವ ರಾಜ್‌ಕುಮಾರ್ ಹಾಗು ಶ್ರೀದೇವಿ ದಾಂಪತ್ಯದಲ್ಲಿ ಮೂಡಿರುವ ಕಲಹವನ್ನು ಎರಡೂ ಕುಟುಂಬಗಳು ಪರಿಹರಿಸಲು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ. 

ವಿಚ್ಚೇದನದ ವಿಷಯವಾಗಿ ಶ್ರೀದೇವಿ ಭೈರಪ್ಪಾ ಅವರು ನಮ್ಮ ಏಷ್ಯಾನೆಟ್ ಸುವರ್ಣಗೆ ಪ್ರತಿಕ್ರಿಯೆ ನೀಡಿದ್ದಾರೆ. ಲೀಗಲ್ ನೋಟೀಸ್ ಗೆ ಉತ್ತರಿಸಿದ್ದೇನೆ.ವಿಚ್ಚೇದನದ ಅರ್ಜಿ ಇನ್ನೂ ತಲುಪಿಲ್ಲ. ನನಗೆ ವಿಚ್ಚೇದನದ ಅರ್ಜಿ ಸಿಕ್ಕಾಗ ನ್ಯಾಯಾಲಯಕ್ಕೆ ಉತ್ತರಿಸುತ್ತೇನೆ' ಎಂದಿದ್ದಾರೆ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ. 

'ಏನಾಗಿದೆ ಎಂಬ ವಿಷಯ ಚಿತ್ರರಂಗ ಹಾಗು ಮಾಧ್ಯಮದಲ್ಲಿ ಅನೇಕರಿಗೆ ತಿಳಿದಿದೆ. ವಿಚ್ಛೇದನದ ಅರ್ಜಿ ಇನ್ನೂ ನನ್ನ ತಲುಪಿಲ್ಲ. ನಾನು ಈಗಾಗಲೇ ಲೀಗಲ್ ನೋಟಿಸ್‌ಗೆ ಉತ್ತರಿಸಿದ್ದೇನೆ. ವಿಚ್ಛೇದನದ ಅರ್ಜಿಯು ಇನ್ನೂ ನನ್ನನ್ನು ತಲುಪಿಲ್ಲ. ನನಗೆ ಸಿಕ್ಕಾಗ ನ್ಯಾಯಾಲಯಕ್ಕೆ ಉತ್ತರಿಸುತ್ತೇನೆ. ಸದ್ಯಕ್ಕೆ ನಾನು ಬೇರೇನೂ ಮಾತನಾಡುವ ಮಾನಸಿಕ ಪರಿಸ್ಥಿತಿಯಲ್ಲಿ ಇಲ್ಲ' ಎಂದಿದ್ದಾರೆ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ.  

ಯುವ ರಾಜ್‌ಕುಮಾರ್ ಕಡೆಯಿಂದ  ವಿಚ್ಚೇದನಕ್ಕೆ ಪಿಟಿಷನ್ ಅರ್ಜಿ ಸಲ್ಲಿಸಲಾಗಿದೆ. ಯುವ ಸಿನಿಮಾದ ಮುಹೂರ್ತದ ವೇಳೆಯಲ್ಲಿ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಯುವ ಸಿನಿಮಾ ರಿಲೀಸ್ ಸಮಯದಲ್ಲಿ ಶ್ರೀದೇವಿ ಒಟ್ಟಿಗೆ ಇರಲಿಲ್ಲ.

ಅಚ್ಚರಿ ಸಂಗತಿ ಎಂಬಂತೆ, 7 ವರ್ಷಗಳಿಂದ ಪ್ರೀತಿಸಿ ಮದುವೆಯಾಗಲು ಹೊರಟಿದ್ದ ಯುವ-ಶ್ರೀದೇವಿ ಮದುವೆಗೆ ರಾಘವೇಂದ್ರ ದಂಪತಿಯ ವಿರೋದ ಇತ್ತು. ಆದರೆ, ನಟ ಪುನೀತ್ ರಾಜ್ ಕುಮಾರ್ ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿಸಿದ್ದರು. ಕಳೆದ ಆರೇಳು ತಿಂಗಳಿಂದ ಶ್ರೀದೇವಿ ಬೈರಪ್ಪ ದೊಡ್ಮನಡಯಿಂದ ದೂರವಾಗಿದ್ದಾರೆ ಎಂಬ ಮಾಹಿತಿಯಿದೆ. ಯುವ ರಾಜ್‌ಕುಮಾರ್ ಪತ್ನಿ ವಿರುದ್ಧ ಕ್ರೌರ್ಯದ ಆರೋಪ ಮಾಡಿದ್ದಾರೆ ಎನ್ನಲಾಗಿದೆ. 

ಒಟ್ಟಿನಲ್ಲಿ, ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಡಿವೋರ್ಸ್ ಪಡೆದ ಸುದ್ದಿ ಇನ್ನೂ ಬಿಸಿಯಾಗಿರುವಾಗಲೇ ಚಂದನವನದಲ್ಲಿ ಮತ್ತೊಂದು ವಿಚ್ಛೇದನದ ಸುದ್ದಿ ಎದುರಾಗಿದೆ. ಕಾಕತಳೀಯ ಎಂಬಂತೆ, ಚಂದನ್-ನಿವೇದಿತಾ ಡಿವೋರ್ಸ್ ಅರ್ಜಿ ಸಲ್ಲಿಕೆಯಾಗಿರುವ ದಿನವೇ ಯುವ ರಾಜ್‌ಕುಮಾರ್ ಕೂಡ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅದು ಸುದ್ದಿಯಾಗಿದ್ದು ಇಂದು. ಒಟ್ಟಿನಲ್ಲಿ, ಸ್ಯಾಂಡಲ್‌ವುಡ್ ಅಂಗಳದಲ್ಲಿ ಒಂದು ಕಡೆ ಮದುವೆ ಪರ್ವ ನಡೆಯುತ್ತಿದ್ದರೆ ಮತ್ತೊಂದು ಕಡೆ ವಿಚ್ಛೇದನದ ಪರ್ವ ಶುರುವಾದಂತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?