
ಜೀ ಕನ್ನಡದಲ್ಲಿ ಮಹಾನಟಿ ರಿಯಾಲಿಟಿ ಷೋ ನಡೆಯುತ್ತಿದ್ದು, ಇದಾಗಲೇ ಕರ್ನಾಟಕದ ಮೂಲೆಮೂಲೆಗಳಿಂದ ಹಲವು ಯುವತಿಯರು ಪ್ರತಿಭೆ ಪ್ರದರ್ಶನ ಮಾಡುತ್ತಿದ್ದಾರೆ. ಸಹಸ್ರಾರು ಮಂದಿಯ ನಟನೆಯನ್ನು ನೋಡಿದ ಬಳಿಕ ಕೆಲವರನ್ನು ಈ ಸ್ಪರ್ಧೆಗೆ ಆಯ್ಕೆ ಮಾಡಲಾಗಿದ್ದು, ತಮ್ಮ ಅದ್ಭುತ ಪ್ರತಿಭೆಯಿಂದ ಅವರು ಗಮನ ಸೆಳೆಯುತ್ತಿದ್ದಾರೆ. ಇವರಲ್ಲಿ ಆಯ್ಕೆಯಾದವರಿಗೆ ಸಿನಿಮಾದಲ್ಲಿಯೂ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆಯನ್ನು ಹೊತ್ತು ಬಂದವರೇ ಹಲವರು. ಇದಾಗಲೇ ಕಳೆದ ಸೀಸನ್ನಲ್ಲಿ ಮಹಾನಟಿಯಾಗಿ ಆಯ್ಕೆಯಾಗಿದ್ದರು ಮೈಸೂರಿನ ಪ್ರಿಯಾಂಕಾ. ಇದೀಗ ಸೀಸನ್-2 ಇನ್ನೇನು ಮುಗಿಯುವ ಹಂತದಲ್ಲಿದೆ. ಇದೀಗ ಸೀಸನ್ 2ರಲ್ಲಿ ಕೂಡ ಯುವತಿಯರು ತಮ್ಮ ಪ್ರತಿಭೆಗಳಿಂದ ಮಿಂಚುತ್ತಿದ್ದಾರೆ. ಅವರಿಗೆ ಕೆಲವು ವಿಷಯಗಳನ್ನು ನೀಡಲಾಗುತ್ತದೆ. ಅದರ ಆಧಾರದ ಮೇಲೆ ಅವರು ನಟಿಸಬೇಕಾಗುತ್ತದೆ. ಹಲವು ರೌಂಡ್ಗಳಲ್ಲಿ ಅವರು ಪಾಸ್ ಆಗಬೇಕಾಗುತ್ತದೆ.
ಈ ವೇದಿಕೆಯಲ್ಲಿ ಇದೀಗ ತೀರ್ಪುಗಾರರಾಗಿರುವ ನಟ ತರುಣ್ ಸುಧೀರ್ ಮತ್ತು ನಟಿ ನಿಶ್ವಿಕಾ ನಾಯ್ಡು ಅವರು 1986ರಲ್ಲಿ ಬಿಡುಗಡೆಗೊಂಡ ವಿಷ್ಣುವರ್ಧನ್, ಸುಮಲತಾ ಅಭಿನಯದ ಕರ್ಣ ಚಿತ್ರದ ಸೂಪರ್ಹಿಟ್ ಸಾಂಗ್ ಪ್ರೀತಿಯೇ ನನ್ನುಸಿರುಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ತರುಣ್ ಅವರು ವಿಷ್ಣುವರ್ಧನ್ ಅವರ ಸ್ಟೈಲ್ ಮಾಡುವಲ್ಲಿ ಎತ್ತಿದ ಕೈ. ಇನ್ನು ಸುಮಲತಾ ರೀತಿಯಲ್ಲಿಯೇ ನಿಶ್ವಿಕಾ ನಾಯ್ಡು ಡಾನ್ಸ್ ಮಾಡಿದ್ದು, ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಅಷ್ಟಕ್ಕೂ ವಿಷ್ಣುವರ್ಧನ್ ಅವರ ನಟನೆ, ಅವರ ಡಾನ್ಸ್, ಅವರ ಅಭಿನಯ ಎಲ್ಲವೂ ವಿಭಿನ್ನವಾಗಿತ್ತು. ಕೆಲವೊಂದು ಐಕಾನಿಕ್ ಸ್ಟೈಲ್ಗೆ ಅವರು ಹೆಸರುವಾಸಿಯಾಗಿದ್ದಾರೆ. ಅವರ ಒಂದಿಷ್ಟು ಚಿಕ್ಕ ಸ್ಟೈಲ್ ಮಾಡಿದ್ರೂ ಸಾಕು, ಅದು ವಿಷ್ಣುದಾದಾ ಸ್ಟೈಲ್ ಎಂದೇ ಎನ್ನಿಸಿಕೊಳ್ಳುತ್ತದೆ. ಹೀಗೆ ಅವರ ಸ್ಟೈಲ್ನಲ್ಲಿಯೇ ಸೊಗಸಾಗಿ ವಿಷ್ಣುವರ್ಧನ್ ಅವರ ಅಭಿನಯವನ್ನು ಮಾಡಿದ್ದಾರೆ ತರುಣ್.
ಅಷ್ಟಕ್ಕೂ, ಸ್ಯಾಂಡಲ್‌ವುಡ್ ಬೆಡಗಿ ನಿಶ್ವಿಕಾ ನಾಯ್ಡು ಕುರಿತು ಹೇಳುವುದಾದರೆ, ಅವರು ಟಾಲಿವುಡ್ಗೆ ಹಾರುತ್ತಿದ್ದಾರೆ. ಟಾಲಿವುಡ್ನಲ್ಲಿಯೂ ತಮಗೆ ಯಶಸ್ಸು ಸಿಗಲಿ ಎಂದು ಇದಾಗಲೇ ಮನೆಯಲ್ಲಿ ಮಾಂಸ, ಮದ್ಯವನ್ನೆಲ್ಲ ಇಟ್ಟು ಜ್ಯೂತಿಷಿ ವೇಣು ಸ್ವಾಮಿ ಅವರಿಂದ ವಿಶೇಷ ಪೂಜೆ ಮಾಡಿಸಿದ್ದಾರೆ. ಅಷ್ಟಕ್ಕೂ ನಿಶ್ವಿಕಾ ಸಿಕ್ಕಾಪಟ್ಟೆ ಫಿಟ್‌ನೆಸ್ ಫ್ರೀಕ್. ಇತ್ತೀಚೆಗೆ ತನ್ನ ಆಬ್ಸ್ ಮೂಲಕವೂ ಗಮನ ಸೆಳೆದಿದ್ದರು. ಅಂದ ಹಾಗೆ ಕನ್ನಡ ಚಿತ್ರರಂಗದ ಈ ನಟಿ 1996ರ ಮೇ 19ರಂದು ಬೆಂಗಳೂರಿನಲ್ಲಿ ಜನಿಸಿದರು. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಃಶಾಸ್ತ್ರದಲ್ಲಿ ಪದವಿ ಮುಗಿಸಿರುವ ಇವರು, ಮಾಡೆಲಿಂಗ್ ಕ್ಷೇತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. 2018ರಲ್ಲಿ ತೆರೆಕಂಡ ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿದ್ದ 'ಅಮ್ಮ ಐ ಲವ್ ಯೂ' ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದರು. ಅವರು ಇದಕ್ಕೂ ಮುನ್ನ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದಲ್ಲಿ ನಟಿಸಿದ್ದರು.
ಆದರೆ, ಇವರ ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ಎರಡನೇ ಚಿತ್ರ 'ಅಮ್ಮಾ ಐ ಲವ್ ಯು' ಚಿತ್ರ ಬಿಡುಗಡೆಯಾಯಿತು. ನಂತರ ಪಡ್ಡೆಹುಲಿ, ಜೆಂಟಲ್‌ಮೆನ್, ಕಾಳಿದಾಸ ಕನ್ನಡ ಮೇಷ್ಟ್ರು, ಸಖತ್, ರಾಮಾರ್ಜುನ, ಗಾಳಿಪಟ 2, ದಿಲ್ ಪಸಂದ್, ಗುರು ಶಿಷ್ಯರು ಸಿನಿಮಾಗಳಲ್ಲಿ ನಟಿಸಿದರು. ಇತ್ತೀಚೆಗೆ ಶಿವರಾಜ್‌ಕುಮಾರ್ ಹಾಗೂ ಪ್ರಭುದೇವ ನಟನೆಯ ' ಕರಟಕ ದಮನಕ' ಸಿನಿಮಾ ಮೂಲಕ ಗಮನ ಸೆಳೆದಿದ್ದರು. ಇನ್ನು ನಿರ್ದೇಶಕ ತರುಣ್ ಸುಧೀರ್ ಕುರಿತು ಹೇಳುವುದಾದರೆ, ಈಚೆಗೆ ಇವರು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹವಾಗಿದ್ದಾರೆ. ರಿಯಾಲಿಟಿ ಷೋಗಳಲ್ಲಿಯೂ ಕಾಣಿಸಿಕೊಳ್ತಿರೋ ತರುಣ್ ಅವರು ಒಳ್ಳೆಯ ನಟ ಕೂಡ, ಜೊತೆಗೆ ಡಾನ್ಸರ್ ಕೂಡ. ಇವರು ವಿಶೇಷವಾಗಿ ವಿಷ್ಣುವರ್ಧನ್ ಅವರ ಶೈಲಿಯನ್ನು ಚೆನ್ನಾಗಿ ಅನುಕರಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.