suhani bhatnagar dermatomyositis ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾದ 'ಹಾನಿಕಾರಕ್ ಬಾಪು..' ಹಾಡು ನೋಡಿದಾಗಲೆಲ್ಲಾ ಈ ಪುಟ್ಟ ಹುಡುಗಿಯ ನಟನೆ ನೆನಪಾಗುತ್ತಿತ್ತು. ಚಿತ್ರದಲ್ಲಿ ಬಾಲಕಿ ಬಬಿತಾ ಪೋಗಟ್ ಪಾತ್ರದಲ್ಲಿ ನಟಿಸಿದ್ದ ನಟಿ ಸುಹಾನಿ ಭಟ್ನಾಗರ್ ತಮ್ಮ 19ನೇ ವಯಸ್ಸಿನಲ್ಲಿಯೇ ಸಾವು ಕಂಡಿದ್ದಾರೆ. ಈ ನಡುವೆ ಆಕೆಗೆ ಇದ್ದ ಕಾಯಿಲೆಯ ಬಗ್ಗೆ ಅವರ ತಂದೆಯೇ ಮಾತನಾಡಿದ್ದಾರೆ.
ಅಮೀರ್ ಖಾನ್ ನಟನೆಯ ದಂಗಲ್ ಸಿನಿಮಾದಲ್ಲಿ ಒಂದು ಹಾಡಿದೆ. 'ಬಾಹು ಸೇಹತ್ ಕೇ ಲೀಯೆ.. ತು ತೋ ಹಾನಿಕಾರಕ್ ಹೇ.. ಹಮ್ ಪೇ ತೋಡಿ ದಯಾ ಕರೋ.. ಹಮ್ ನನ್ಹೇ ಬಾಲಕ್ ಹೇ..' (ಕನ್ನಡದ ಅರ್ಥ, ತಂದೆ ಆರೋಗ್ಯಕ್ಕೆ ನೀವು ಹಾನಿಕಾರಕ, ನಮ್ಮ ಮೇಲೆ ಸ್ವಲ್ಪ ಕರುಣೆ ತೋರಿ, ನಾವಿನ್ನೂ ಪುಟ್ಟ ಬಾಲಕರು). ಈ ಹಾಡಿನಲ್ಲಿ ಬಾಲಕಿ ಬಬಿತಾ ಪೋಗಟ್ ಪಾತ್ರದಲ್ಲಿ ನಟಿಸಿದ್ದು ಸುಹಾನಿ ಭಟ್ನಾಗರ್. ಆದರೆ, ಯುವ ನಟಿ ತನ್ನ 19ನೇ ವರ್ಷಕ್ಕೆ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸುಹಾನಿ ಭಟ್ನಾಗರ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ತೀರಾ ವಿಚಿತ್ರ ಕಾಯಿಲೆಯಿತ್ತು ಎನ್ನುವುದು ಬಹಿರಂಗವಾಗಿದೆ. ಇದನ್ನು ಸ್ವತಃ ಸುಹಾನಿ ಭಟ್ನಾಗರ್ ಅವರ ತಂದೆ ತಾಯಿಯೇ ಖಚಿತಪಡಿಸಿದ್ದಾರೆ. ತಮ್ಮ ಮಗಳ ಬಗ್ಗೆ ಮಾತನಾಡಿರುವ ತಾಯಿ ಪೂಜಾ ಭಟ್ನಾಗರ್, ದಂಗಲ್ ಸಿನಿಮಾಗೆ 25 ಸಾವಿರ ಬಾಲಕಿಯರು ಆಡಿಷನ್‌ಗೆ ಬಂದಿದ್ದರು. ಆದರೆ, ಈಕೆ ಸೆಲೆಕ್ಟ್ ಆಗಿದ್ದಳು. ಈಕೆ ದೇವರ ಮಗುವಾಗಿತ್ತು ಎಂದು ಹೇಳಿದ್ದಾರೆ.
ಇನ್ನು 19ನೇ ವರ್ಷಕ್ಕೆ ಸುಹಾನಿ ಭಟ್ನಾಗರ್ ಸಾವು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ನವದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಸುಹೇಲಿ ಸಾವು ಕಂಡಿದ್ದಾರೆ. ಕಳೆದ ಮಂಗಳವಾರ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಫೆ.16ರಂದು ನಟಿ ಸಾವು ಕಂಡಿದ್ದು, ಶನಿವಾರ ಅಂತ್ಯಕ್ರಿಯೆ ನಡೆದಿದೆ. ಅಂತ್ಯಸಂಸ್ಕಾರವೆಲ್ಲ ಮುಗಿದ ಬಳಿಕ ಮಾತನಾಡಿದ ಸುಹೇಲಿ ಭಟ್ನಾಗರ್ ತಂದೆ, ಎರಡು ತಿಂಗಳ ಹಿಂದೆ ಆಕೆಯ ಒಂದು ಹಸ್ತ ಬೀಗಿಕೊಳ್ಳಲು ಆರಂಭವಾಗಿತ್ತು. ಮೊದಮೊದಲು ಇದು ಸಾಮಾನ್ಯ ಎಂದುಕೊಂಡಿದ್ದೆವು. ಕೊನೆಗೆ ಇನ್ನೊಂದು ಹಸ್ತ ಕೂಡ ಊದಿಕೊಳ್ಳಲು ಆರಂಭಿಸಿತು. ಕೊನೆಗೆ ಆಕೆಯ ಇಡೀ ದೇಹ ಊದಿಕೊಂಡಿತ್ತು ಎಂದು ಹೇಳಿದ್ದಾರೆ.
ಈ ಹಂತದಲ್ಲಿ ಸಾವು ಸಾಕಷ್ಟು ವೈದ್ಯರನ್ನು ಸಂಪರ್ಕ ಮಾಡಿದ್ದೆವು. ಆದರೆ, ಯಾವ ವೈದ್ಯರೂ ಕೂಡ ಈಕೆಗೆ ಇದ್ದ ಕಾಯಿಲೆಯೇನು ಅನ್ನೋದನ್ನು ತಿಳಿಸಲಿಲ್ಲ. 11 ದಿನಗಳ ಹಿಂದೆ ಅಂದರೆ, ಕಳೆದ ವಾರದ ಮಂಗಳವಾರ ಈಕೆಯನ್ನು ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದೆವು. ಸಾಕಷ್ಟು ಪರೀಕ್ಷೆಗಳು ನಡೆದ ಬಳಿಕ ಆಕೆಗೆ ಇರುವುದು ಡರ್ಮಟೊಮಿಯೊಸಿಟಿಸ್ (dermatomyositis) ಹೆಸರಿನ ಕಾಯಿಲೆ ಎಂದು ತಿಳಿಸಿದ್ದರು. ಇದು ಬಹಳ ಅಪರೂಪದಲ್ಲಿ ಅಪರೂಪದ ಕಾಯಿಲೆ ಎಂದು ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಏಕೈಕ ಚಿಕಿತ್ಸೆ ಎಂದರೆ ಅದು ಸ್ಟೀರಾಯ್ಡ್. ಆಕೆಗೆ ಸಾಕಷ್ಟು ಸ್ಟೀರಾಯ್ಡ್‌ಗಳನ್ನೂ ಕೂಡ ನೀಡಿದ್ದೆವು. ಇದರಿಂದಾಗಿ ಆಕೆಯ ದೇಹದಲ್ಲಿನ ಸ್ವಯಂ ನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತು. ಇದರಿಂದಾಗಿ ಆಕೆಯ ದೇಹದಲ್ಲಿದ್ದ ರೋಗ ನಿರೋಧಕ ಶಕ್ತಿ ಬಹಳ ದುರ್ಬಲವಾಗಿತ್ತು ಎಂದು ಸುಹೇಲಿ ಭಟ್ನಾಗರ್ ತಿಳಿಸಿದ್ದಾರೆ.
ವೈದ್ಯರು ಹೇಳಿರುವ ಪ್ರಕಾರ, ಈ ಕಾಯಿಲೆಯಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ, ಆಕೆಯ ರೋಗ ನಿರೋಧಕ ಶಕ್ತಿ ಕಡಿಮೆ ಆಗಿದ್ದರಿಂದ, ಆಸ್ಪತ್ರೆಯಲ್ಲಿಯೇ ಆಕೆಗೆ ಸೋಂಕು ತಗುಲಿತ್ತು. ಇದರಿಂದ ಆಕೆಯ ಶ್ವಾಸಕೋಶಗಳು ಬಹಳ ದುರ್ಬಲವಾಗಿದ್ದವು. ಈ ಕಾರಣದಿಂದಾಗಿ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳಲು ಆರಂಭವಾಯಿತು. ಇದು ಉಸಿರಾಟದ ಮೇಲೆ ಪರಿಣಾಮ ಬೀರಿತು. ಕೊನೆಗೆ ಶುಕ್ರವಾರ ಸಂಜೆ ಆಕೆ ಜಗತ್ತಿಗೆ ಗುಡ್‌ಬೈ ಹೇಳಿ ಹೋಗಿದ್ದಾಳೆ ಎಂದು ತಿಳಿಸಿದ್ದಾರೆ.
Suhani Bhatnagar: ಆಮೀರ್ ಖಾನ್ 'ದಂಗಲ್' ನಟಿ ಸಾವು..ಔಷಧಿಯ ಅಡ್ಡ ಪರಿಣಾಮ ಕಾರಣ?
ಮಗಳ ಬಗ್ಗೆ ಮಾತನಾಡುವ ಪೂಜಾ, ನನ್ನ ಮಗಳ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಆಕೆಗೆ ಜೀವನದಲ್ಲಿ ಏನನ್ನಾದರೂ ಸಾಧಿಸುವ ಹಂಬಲವಿತ್ತು. 25 ಸಾವಿರ ಮಕ್ಕಳ ನಡುವೆ ಆಕೆ ದಂಗಲ್ ಸಿನಿಮಾಗೆ ಆಯ್ಕೆಯಾಗಿದ್ದಳು. ಚಿಕ್ಕಂದಿನಿಂದಲೂ ಸ್ನೇಹಪರ ಸ್ವಭಾವ ಅಕೆಯದಾಗಿತ್ತು. ಆಕೆ, ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದಲ್ಲಿ 2ನೇ ವರ್ಷದ ಪದವಿ ಓದುತ್ತಿದ್ದಳು. ವಿದ್ಯಾಭ್ಯಾಸ ಮುಕ್ತಾಯವಾದ ಬಳಿಕ ಸಿನಿಮಾದಲ್ಲಿ ನಟಿಸುವ ಅಭಿಲಾಷೆ ಆಕೆಗಿತ್ತು ಎಂದು ಹೇಳಿದ್ದಾರೆ.
ಮೀನಾ ಪತಿ ವಿದ್ಯಾಸಾಗರ್ ಸಾವಿಗೆ ಕಾರಣವಾಯ್ತು ಪಾರಿವಾಳದ ಹಿಕ್ಕೆ?
ದಂಗಲ್ ಸಿನಿಮಾದಲ್ಲಿ ಬಾಲಕಿ ಬಬಿತಾ ಪೋಗಟ್ ಪಾತ್ರದಲ್ಲಿ ಸುಹಾನಿ ನಟಿಸಿದ್ದರು. ಗೀತಾ ಪೋಗಟ್ ಪಾತ್ರದಲ್ಲಿ ನಟಿ ಫಾತಿಮಾ ಸನಾ ಶೇಖ್ ನಡಿಸಿದ್ದರು. ಇದೇ ಸಿನಿಮಾದಲ್ಲಿ ಸಾಕ್ಷಿ ತನ್ವರ್ ಹಾಗೂ ಜೈರಾ ವಾಸೀಮ್ ಕೂಡ ನಟಿಸಿದ್ದರಯ. ತಮ್ಮ ಅಭಿನಯಕ್ಕಾಗಿ ಸುಹೇಲಿ ಭಟ್ನಾಗರ್ ದೊಡ್ಡ ಮಟ್ಟದ ಮೆಚ್ಚುಗೆ ಸಂಪಾದಿಸಿದ್ದರು. ಅದಾದ ಬಳಿಕ ಕೆಲವು ಜಾಹೀರಾತುಗಳಲ್ಲಿಯೂ ನಟಿಸಿದ್ದ ಸುಹಾನಿ, ಬಳಿಕ ವಿದ್ಯಾಭ್ಯಾಸದತ್ತ ಗಮನ ನೀಡುವ ಸಲುವಾಗಿ ಮರೆಯಾಗಿದ್ದರು. ಓದು ಮುಗಿದ ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಕೆಯ ಆಸೆ ಕೊನೆಗೂ ಈಡೇರಲಿಲ್ಲ.