50 ಸೆಕೆಂಡ್‌ ನಟಿಸೋದಕ್ಕೆ 5 ಕೋಟಿ ಕೇಳಿಬಿಟ್ರಲ್ಲಾ ದಕ್ಷಿಣ ಭಾರತದ ಈ ನಟಿ!

By Santosh Naik  |  First Published Mar 16, 2024, 6:05 PM IST

ಒಂದು ಕಾಲದಲ್ಲಿ ಟಿವಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದ ನಟಿ ಈಗ ದಕ್ಷಿಣ ಭಾರತದ ಪ್ರಖ್ಯಾತ ನಟಿ. ಇತ್ತೀಚೆಗೆ 50 ಸೆಕೆಂಡ್‌ನ ಒಂದು ಜಾಹೀರಾತಿನಲ್ಲಿ ನಟಿಸೋದಕ್ಕೆ ಈಕೆ 5 ಕೋಟಿ ರೂಪಾಯಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ.
 


ಸಿನಿಮಾಗಳಲ್ಲಿ ನಟಿಸಲು ಪ್ರಖ್ಯಾತ ನಾಯಕಿಯರ ಸಂಭಾವನೆ ಆಕಾಶ ಮುಟ್ಟಿದೆ. ಆದರೆ, ಇತ್ತೀಚೆಗೆ ಜಾಹೀರಾತುಗಳಲ್ಲಿ ನಟಿಸೋದಕ್ಕೂ ಅವರು ದುಬಾರಿ ಮೊತ್ತದ ಅಮೌಂಟ್‌ಅನ್ನು ಚಾರ್ಜ್‌ ಮಾಡುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಗರಿಷ್ಠ ಸಂಭಾವನೆ ಪಡೆದುಕೊಳ್ಳುವ ನಟಿಯೊಬ್ಬರು. ಕೇವಲ 50 ಸೆಕೆಂಡ್‌ನ ಒಂದು ಜಾಹೀರಾತಿಗೆ ಬರೋಬ್ಬರಿ 5 ಕೋಟಿ ರೂಪಾಯಿ ಚಾರ್ಜ್‌ ಮಾಡಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ನಾವು ಮಾತನಾಡುತ್ತಿರುವ ನಟಿ ತನ್ನ ಅಭಿನಯದಿಂದ ಈಗಾಗಲೇ ಸಾಕಷ್ಟು ಜನಪ್ರಿಯರಾಗಿದ್ದಾರೆ. ಸಿನಿಮಾರಂಗದಲ್ಲಿ ತಮ್ಮ ಛಾಪು ಮೂಡಿಸುವ ಮುನ್ನ ಆಕೆ ಟಿವಿಯಲ್ಲಿ ಅರೆಕಾಲಿಕ ಮಾಡೆಲ್‌ ಆಗಿದ್ದು ಮಾತ್ರವಲ್ಲದೆ ಟಿವಿಯಲ್ಲಿ ನಿರೂಪಕಿಯೂ ಆಗಿದ್ದರು. ಈ ನಟಿ ಬೇರೆ ಯಾರೂ ಅಲ್ಲ ನಯನತಾರಾ.

ಮಾಧ್ಯಮ ವರದಿಗಳ ಪ್ರಕಾರ ನಟಿ ನಯನತಾರಾ ಟಾಟಾ ಸ್ಕೈನ 50 ಸೆಕೆಂಡ್‌ ಜಾಹೀರಾತಿಗೆ 5 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ. ಎರಡು ದಿನಗಳ ಕಾಲ ಶೂಟಿಂಗ್‌ ನಡೆದ ಈ ಜಾಹೀರಾತು ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಪ್ರಸಾರವಾಗಲಿದೆ. ನಯನತಾರಾ ಒಂದು ಸಿನಿಮಾಗೆ ಅಂದಾಜು 10 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಾರೆ ಎಂದು ವರದಿಯಾಗಿದೆ. ಈಕೆ ದಕ್ಷಿಣ ಭಾರತದಲ್ಲಿ ಮಾತ್ರಲ್ಲ ಇಡೀ ದೇಶದಲ್ಲಿಯೇ ಅಪಾರ ಪ್ರಮಾಣದ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಮಲಯಾಳಂನಲ್ಲಿ ಟಿವಿ ನಿರೂಪಕಿಯಾಗಿ ಕೆಲಸ ಆರಂಭಿಸಿದ್ದ ನಯನತಾರಾ, ಚಮಯಂ ಎನ್ನುವ ಶೋ ಮೂಲಕ ಜನರಿಗೆ ಕನೆಕ್ಟ್‌ ಆಗಿದ್ದರು. ಫ್ಯಾಶನ್‌ ಹಾಗೂ ಲೈಫ್‌ಸ್ಟೈಲ್‌ ಕುರಿತಾಗಿ ಇದ್ದ ಶೋನಲ್ಲಿ ನಯನತಾರಾ ತಮ್ಮ ಮೂಲ ಹೆಸರಿನಲ್ಲಿ ನಡೆಸಿಕೊಡುತ್ತಿದ್ದರು. ನಯನತಾರಾ ಅವರ ಮೂಲ ಹೆಸರು ಡಯಾನಾ. ಆ ಬಳಿಕ ಮಲಯಾಳಂ ಚಿತ್ರ ಮನಸಿನಕ್ಕರೆ ಸಿನಿಮಾದ ಮೂಲಕ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ಈ ಚಿತ್ರ ಮಲಯಾಳಂನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.

ಇಂದು ನಯನತಾರಾ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಮುಂಬೈ ಸೇರಿದಂತೆ ವಿವಿಧ ನಗರದಲ್ಲಿ 4 ಐಷಾರಾಮಿ ಮನೆಗಳನ್ನು ಅವರು ಹೊಂದಿದ್ದಾರೆ. ಮುಂಬೈನಲ್ಲಿಪತಿ ವಿಘ್ನೇಶ್‌ ಶಿವನ್‌ ಹಾಗೂ ತನ್ನ ಇಬ್ಬರು ಮಕ್ಕಳೊಂದಿಗೆ ನಯನತಾರಾ ವಾಸವಿದ್ದು, 4 ಬಿಎಚ್‌ಕೆಯ ಈ ಮನೆಯ ಮೌಲ್ಯ 100 ಕೋಟಿ ರೂಪಾಯಿ ಎನ್ನಲಾಗಿದೆ. ಅದರೊಂದಿಗೆ ಸಾಕಷ್ಟು ಕಾರ್‌ ಕಲೆಕ್ಷನ್‌ಗಳನ್ನೂ ನಯನತಾರಾ ಹೊಂದಿದ್ದಾರೆ. ಅದರೊಂದಿಗೆ ಖಾಸಗಿ ಜೆಟ್‌ ಕೂಡ ಇವರು ಹೊಂದಿದ್ದಾರೆ.

Tap to resize

Latest Videos

ಅಟ್ಲೀ ನಿರ್ದೇಶನದ ಹಾಗೂ ಶಾರುಖ್‌ ಖಾನ್‌ ನಟನೆಯ ಜವಾನ್‌ ಚಿತ್ರದೊಂದಿಗೆ ನಯನತಾರಾ ಬಾಲಿವುಡ್‌ಗೆ ಭರ್ಜರಿ ಪಾದಾರ್ಪಣೆ ಮಾಡಿದ್ದಾರೆ. ನಯತನಾರಾ ಅವರ ಅದ್ಭುತ ಆಕ್ಷನ್‌ ನಿರ್ವಹಣೆ ಅಭಿಮಾನಿಗಳ ಗಮನಸೆಳೆದಿದೆ. ಸಿನಿಮಾದಲ್ಲಿ ಶಾರುಖ್‌ ಖಾನ್‌ ಅವರ ಪ್ರೇಯಸಿ ಹಾಗೂ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಇವರು ನಟಿಸಿದ್ದರು.

ನಯನತಾರಾ- ವಿಘ್ನೇಶ್‌ ದಾಂಪತ್ಯಕ್ಕೆ ತೆರೆ ಬಿತ್ತಾ? ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ, ಭಾವುಕ ಪೋಸ್ಟ್‌!

ಒಟಿಟಿಯಲ್ಲಿ ಬಿಡುಗಡೆಯಾದ ಅನ್ನಪೂರಣಿ: ದಿ ಗಾಡೆಸ್ ಆಫ್ ಫುಡ್ ಚಿತ್ರದಲ್ಲಿ ನಯನತಾರಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಆದಾಗ್ಯೂ, ಚಿತ್ರವು ದೊಡ್ಡ ವಿವಾದದಲ್ಲಿ ಸಿಲುಕಿತು. ನಟಿ ಈಗ ಎಸ್ ಶಶಿಕಾಂತ್ ಅವರ ತಮಿಳು ಚಲನಚಿತ್ರ ದಿ ಟೆಸ್ಟ್‌ನಲ್ಲಿ ನಟಿಸುತ್ತಿದ್ದಾರೆ ಇದರಲ್ಲಿ ಆರ್ ಮಾಧವನ್, ಸಿದ್ಧಾರ್ಥ್ ಮತ್ತು ಮೀರಾ ಜಾಸ್ಮಿನ್ ಇತರರೊಂದಿಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಅನ್ನಪೂರ್ಣಿ 'ಫುಡ್​ ಜಿಹಾದ್'​: ಜೈ ಶ್ರೀ ರಾಮ್​ ಎನ್ನುತ್ತಲೇ ಬಹಿರಂಗ ಕ್ಷಮಾಪಣಾ ಪತ್ರ ಬರೆದ ನಯನತಾರಾ..

click me!