ಯೂಟ್ಯೂಬ್ ನಲ್ಲಿ ಸದ್ದು ಮಾಡ್ತಿದೆ ‘ಸಾರ್ವಜನಿಕರಲ್ಲಿ ವಿನಂತಿ’ ಟ್ರೇಲರ್

Published : Jun 16, 2019, 09:00 PM IST
ಯೂಟ್ಯೂಬ್ ನಲ್ಲಿ ಸದ್ದು ಮಾಡ್ತಿದೆ ‘ಸಾರ್ವಜನಿಕರಲ್ಲಿ ವಿನಂತಿ’ ಟ್ರೇಲರ್

ಸಾರಾಂಶ

‘ಸಾರ್ವಜನಿಕರಲ್ಲಿ ವಿನಂತಿ’ ಚಿತ್ರದ ಟ್ರೇಲರ್ ಯು ಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಅಪಾರ ಮೆಚ್ಚುಗೆ ಗಳಿಸಿಕೊಂಡಿದೆ. ಟ್ರೇಲರ್ ಯುಟ್ಯೂಬ್ ನಲ್ಲಿ ಹವಾ ಎಬ್ಬಿಸಿದೆ.

ಬೆಂಗಳೂರು[ಜೂ. 16]  ಸ್ಯಾಂಡಲ್ ವುಡ್‌ನಲ್ಲಿ ಹೊಸಬರ ಪ್ರವೇಶ ದಿನೇ ದಿನೇ ಆಗುತ್ತಲೇ ಇರುತ್ತದೆ. ಗಾಂಧಿನಗರದಲ್ಲಿ ಸದ್ಯ ‘ಸಾರ್ವಜನಿಕರಲ್ಲಿ ವಿನಂತಿ’ಯೂ  ಎಂಬ ವಿಶಿಷ್ಟ ತಲೆಬರಹದ ಸಿನಿಮಾ ಸದ್ದು ಮಾಡುತ್ತಿದೆ.

ಎಆರ್ ಬಾಬು, ನಂದ ಕಿಶೋರ್ ಹಾಗೂ ಬಹದ್ದೂರ್ ಚೇತನ್ ಜೊತೆ ಕೆಲಸ ಮಾಡಿದ ಕೃಪಾಸಾಗರ್ ಯುವ ನಿರ್ದೇಶಕನಾಗಿ ‘ಸಾರ್ವಜನಿಕರಲ್ಲಿ ವಿನಂತಿ’  ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. 

‘ಸಾರ್ವಜನಿಕರಲ್ಲಿ ವಿನಂತಿ’ ರಿಲೀಸ್‌ಗೆ ಮುಹೂರ್ತ ಫಿಕ್ಸ್!

ಎರಡು ಕೊಲೆ ಮಾಡಿದ್ದೇವೆ ಸಾರ್.. ಎಂಬ ಡೈಲಾಗ್ ಟ್ರೇಲರ್ ನಲ್ಲಿಯೇ ಚಿತ್ರದ ತಾಕತ್ತನ್ನು ಹೇಳುತ್ತದೆ. ಮದನ್ ರಾಜ್ ಮತ್ತು ಅಮೃತಾ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ.

ರಂಗಭೂಮಿ ಕಲಾವಿದರು ಸೇರಿ ಮಾಡಿರುವ ಚಿತ್ರ‘ಸಾರ್ವಜನಿಕರಲ್ಲಿ ವಿನಂತಿ’. ಎಲ್ಲರೂ ನೋಡಿ ಆಶೀರ್ವದಿಸಬೇಕೆಂದು ನಿರ್ದೇಶಕರು ವಿನಂತಿಸಿದ್ದಾರೆ. ಇದೇ ತಿಂಗಳ 21ಕ್ಕೆ ರಾಜ್ಯಾದ್ಯಂತ ತೆರೆಕಾಣುತ್ತಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌