ಚಿನ್ನದ ಕಳ್ಳಿ ರನ್ಯಾ ರಾವ್‌ ಸ್ವಂತ ತಮ್ಮ ನಟಿ ಜಯಮಾಲಾ ಅಳಿಯ; ನವ ಜೋಡಿ ಮೇಲೆ ಬಿತ್ತು ಜನರ ಕಣ್ಣು!

Published : Mar 13, 2025, 11:40 AM ISTUpdated : Mar 13, 2025, 11:42 AM IST
ಚಿನ್ನದ ಕಳ್ಳಿ ರನ್ಯಾ ರಾವ್‌ ಸ್ವಂತ ತಮ್ಮ ನಟಿ ಜಯಮಾಲಾ ಅಳಿಯ; ನವ ಜೋಡಿ ಮೇಲೆ ಬಿತ್ತು ಜನರ ಕಣ್ಣು!

ಸಾರಾಂಶ

ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಬಂಧನ ಮತ್ತು ವಿಚಾರಣೆ ನಡೆಯುತ್ತಿದೆ. ರನ್ಯಾ ರಾವ್ ಸಹೋದರ, ನಟಿ ಜಯಮಾಲಾ ಅವರ ಅಳಿಯ ಅನ್ನೋದು ಬೆಳಕಿಗೆ ಬಂದಿದೆ. ಈ ಸಂಬಂಧವು ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದೆ.

ಬೆಂಗಳೂರು (ಮಾ.13): ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಬಂಧನಕ್ಕೆ ಒಳಗಾಗಿ ವಿಚಾರಣೆ ಎದುರಿಸುತ್ತಿರುವ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ ಹಾಗೂ ಸ್ಯಾಂಡಲ್‌ವುಡ್‌ ನಟಿ ಜಯಮಾಲಾ ಅವರ ನಂಟು ಕೂಡ ಬಹಿರಂಗವಾಗಿದೆ. ರನ್ಯಾ ರಾವ್‌ ಕೇಸ್‌ನಲ್ಲಿ ರಾಜಕಾರಣಿಗಳು  ಹಾಗೂ ಸ್ವಾಮೀಜಿಗಳ ಪಾತ್ರ ಇರುವ ನಡುವೆಯೇ, ಚಿನ್ನದ ಚೋರಿ ರನ್ಯಾ ರಾವ್‌ನ ಸ್ವಂತ ತಮ್ಮ ಹಿರಿಯ ನಟಿ ಜಯಮಾಲಾ ಅವರ ಅಳಿಯ ಅನ್ನೋದು ಗೊತ್ತಾಗಿದೆ. ಫೆಬ್ರವರಿ ತಿಂಗಳ ಆರಂಭದಲ್ಲಿ ಜಯಮಾಲಾ ಅವರ ಪುತ್ರಿ ಹಾಗೂ ನಟಿ ಸೌಂದರ್ಯ ಜಯಮಾಲಾ ಅವರ ವಿವಾಹ ನೆರವೇರಿತ್ತು. ಸೌಂದರ್ಯ ಅವರ ಪುತ್ರಿಯನ್ನು ಮದುವೆಯಾಗಿರುವುದು ರನ್ಯಾ ರಾವ್‌ ಅವರ ತಮ್ಮ ರಿಷಬ್‌ ರಾವ್‌ ಅನ್ನೋದು ಗೊತ್ತಾಗಿದೆ. ಜಯಮಾಲಾ ಅವರ ಮಗಳ ಮದುವೆ ಸಮಾರಂಭದಲ್ಲಿ ರನ್ಯಾ ರಾವ್‌ ಸಖತ್‌ ಆಗಿ ಮಿಂಚಿದ್ದರು.

ಫೆಬ್ರವರಿಯಲ್ಲಿ ಆರಂಭದಲ್ಲಿ ಸೌಂದರ್ಯ ಜಯಮಾಲಾ ಹಾಗೂ ರಿಷಬ್ ಮದುವೆಯಲ್ಲಿ ನಟಿ ರನ್ಯಾ ಮಿಂಚಿದ್ದರು. ಸಹೋದರನ ಮದುವೆಯಲ್ಲಿ ಆಕೆಯ ತಾಯಿ ರೋಹಿಣಿ ಜೊತೆ ಕಳಸ ಹಿಡಿದುಕೊಂಡು ರನ್ಯಾ ಓಡಾಡಿದ್ದರು. ಮದುವೆಯ ವಿಡಿಯೋದದಲ್ಲಿ ರನ್ಯಾ ರಾವ್‌ ಅವರೊಂದಿಗೆ ಅವರ ಪತಿ ಜತಿನ್‌ ಹುಕ್ಕೇರಿ ಕೂಡ ಇದ್ದಾರೆ. ಆದರೆ, ಕರ್ನಾಟಕ ಪೊಲೀಸ್‌ ಡಿಜಿಪಿ ರಾಮಚಂದ್ರರಾವ್‌ ಮಾತ್ರ ನನ್ನ ಮಗಳು ದೂರವಾಗಿ 4 ತಿಂಗಳಾಗಿದೆ. ಅಂದಿನಿಂದ ಆಕೆಯೊಂದಿಗೆ ಸಂಪರ್ಕವೇ ಇಲ್ಲ ಎಂದಿದ್ದರು. ಆದರೆ, ಮದುವೆಯಲ್ಲಿ ರನ್ಯಾ ರಾವ್‌ ಅವರನ್ನು ತಬ್ಬಿಕೊಂಡು ಸಂಭ್ರಮದಲ್ಲಿ ಫೋಟೋ ತೆಗೆಸಿಕೊಂಡಿರುವ ಚಿತ್ರಗಳ ವೈರಲ್‌ ಆಗಿವೆ. ಹಾಗಾಗಿ ರಾಮಚಂದ್ರರಾವ್‌ ಪುತ್ರಿಯ ವಿಚಾರವಾಗಿ ಸುಳ್ಳು ಹೇಳಿದರಾ ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ.

ಜಯಮಾಲಾ ಅವರ ಪುತ್ರಿ ಸೌಂದರ್ಯರನ್ನು ವಿವಾಹವಾಗಿದ್ದು ರನ್ಯಾ ರಾವ್‌ ಅವರ ಸಹೋದರ ರಿಷಬ್‌.KSIRODA ಕಂಪನಿಯ ಹೆಸರಿನಲ್ಲಿ ರನ್ಯಾ ರಾವ್‌ ತುಮಕೂರಿನ ಸಿರಾದಲ್ಲಿ 12 ಎಕರೆ ಕೆಐಎಡಿಜಿ ಜಮೀನು ಖರೀದಿ ಮಾಡಿದ್ದರು ಈ ಕಂಪನಿಗೆ ರನ್ಯಾ ರಾವ್‌ ಅವರೊಂದಿಗೆ ರಿಷಬ್‌ ಕೂಡ ನಿರ್ದೇಶಕರಾಗಿದ್ದರು. ರನ್ಯಾ ರಾವ್‌ ಆಗಲಿ, ರಿಷಬ್‌ ಆಗಲಿ ಐಪಿಎಸ್‌ ಅಧಿಕಾರಿ ರಾಮಚಂದ್ರ ರಾವ್‌ ಮಕ್ಕಳಲ್ಲ. ರನ್ಯಾ ರಾವ್‌ ಅವರ ತಾಯಿ ರೋಹಿಣಿ ಅವರ ಮೊದಲ ಪತಿಯ ಮಕ್ಕಳು. ಇನ್ನು ಸೌಂದರ್ಯ, ಜಯಮಾಲಾ ಹಾಗೂ ಟೈಗರ್‌ ಪ್ರಭಾಕರ್‌ ಅವರ ಪುತ್ರಿಯಲ್ಲ. ಸಿನಿಮಾಟೋಗ್ರಾಫರ್‌ ರಾಮಚಂದ್ರ ಅವರ ಪುತ್ರಿ ಸೌಂದರ್ಯ.

ಹೊಗೇನಕಲ್ ಜಲಪಾತದಲ್ಲಿ ಬಿದ್ದ ಜಯಮಾಲಾರನ್ನು ಉಳಿಸಿದ್ದು ರಾಜ್‌ಕುಮಾರ್

ಸಂಬಂಧದಲ್ಲಿ ರನ್ಯಾ ಹಾಗೂ ರಿಷನ್‌ ಸ್ವಂತ ಅಕ್ಕ-ತಮ್ಮ. ಇದೇ ಕಾರಣಕ್ಕೆ ರಿಷಬ್‌ ಹಾಗೂ ಸೌಂದರ್ಯ ಮದುವೆಯಲ್ಲಿ ವರನ ಪಕ್ಕದಲ್ಲಿ ಸೋದರಿಯಾಗಿ ಕಳಸ ಹೊತ್ತು ರನ್ಯಾ ಸಂಭ್ರಮಿಸಿದ್ದರು. ಈ ಮದುವೆ ಸಂಭ್ರಮದಲ್ಲಿ ರನ್ಯಾ ಅವರನ್ನು ತುಂಬಾ ಜನ ಅಷ್ಟಾಗಿ ಗಮನಿಸಿರಲಿಲ್ಲ. ಈಗ ರನ್ಯಾ ಚಿನ್ನದ ಕಳ್ಳಸಾಗಣೇ ಕೇಸ್‌ನಲ್ಲಿ ಸಿಕ್ಕಿಬಿದ್ದಾಗ ಅವರ ಪೂರ್ವಾಪರಗಳೆಲ್ಲ ಹೊರಬರುತ್ತಿವೆ. ಇನ್ನು ಸೌಂದರ್ಯ ಜಯಮಾಲಾ ಅವರ ಮದುವೆಯಲ್ಲಿ ಸ್ಯಾಂಡಲ್‌ವುಡ್‌ನ ಹಿರಿಯ ಹಾಗೂ ಕಿರಿಯ ನಟಿಯರು ಮೆಹಂದಿ ಶಾಸ್ತ್ರಸಲ್ಲಿ ಮಾಡಿದ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು.

ಪೋಲಿಗಳಿಂದ ಸೇಫ್‌ ಆಗಲು ಈ ಪಿನ್ ಬಳಸಬೇಕು ಎಂದು ನಟಿ ಜಯಮಾಲಾಗೆ ಟಿಪ್ಸ್‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಕನ್ನಡ ಬಿಗ್‌ಬಾಸ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ದೂರು ನೀಡಿದ ವೀಕ್ಷಕರು
BBK 12: ರೊಮ್ಯಾನ್ಸ್‌ ಎಂದ ರಜತ್;‌ ಎಪಿಸೋಡ್‌ನಲ್ಲಿ ಇಲ್ಲ ಅಂತ ವೀಕ್ಷಕರು ಅಂದ್ಕೊಂಡ್ರೆ ಏನ್‌ ಮಾಡಲಿ?: ರಾಶಿಕಾ