
ಕರ್ನಾಟಕ ಪಾಲಿಟಿಕ್ಸ್ ಹೈಪ್
ಕರ್ನಾಟಕದಲ್ಲಿ ಸದ್ಯ ನಡೆಯುತ್ತಿರುವ ಕುರ್ಚಿ ಕಿತ್ತಾಟದ ಬಹುತೇಕರಿಗೆ ಗೊತ್ತಿದೆ. ಹಾಲಿ ಸಿಎಂ ಹಾಗೂ ಡಿಸಿಎಂ ಮಧ್ಯೆ 'ಸಿಎಂ ಚೇರ್'ಗಾಗಿ ಕುರ್ಚಿ ಕಿತ್ತಾಟ ಈಗ ತಾರಕಕ್ಕೇರಿದ್ದು, ಇಬ್ಬರ ಬೆಂಬಲಿಗರೂ ಕೂಡ ಗಲಾಟೆ ಶುರುಮಾಡಿಕೊಂಡಿದ್ದಾರೆ. ಇದೀಗ ಸಿಎಂ ಕುರ್ಚಿ ಕಾದಾಟದ ಚೆಂಡು ಸಹಜವಾಗಿಯೇ ಹೈಕಮಾಂಡ್ ಅಂಗಳದಲ್ಲಿ ಓಡಾಡುತ್ತಿದೆ. ಮುಂದೇನು ಎಂದು ಕಾದು ನೋಡಲಾಗುತ್ತಿರುವ ಹೊತ್ತಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಈ ಬಗ್ಗೆ ಏಷ್ಯಾನೆಟ್ ಸುವರ್ಣ ಪ್ರತಿನಿಧಿ ಜೊತೆ ಮಾತನಾಡಿದ್ದಾರೆ. ಹಾಗಿದ್ದರೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಈ ಬಗ್ಗೆ ಅದೇನು ಹೇಳಿದ್ದಾರೆ ನೋಡಿ..
ಕಾಂಗ್ರೆಸ್ ಕುರ್ಚಿ ಕಿತ್ತಾಟಕ್ಕೆ ಸಂಬಂಧಿಸಿದಂತೆ, ಕೇಳಲಾದ ಪ್ರಶ್ನೆಗೆ ನಟಿ ರಮ್ಯಾ ರಮ್ಯಾ ಹೇಳಿಕೆ ನೀಡಿದ್ದಾರೆ. 'ಇದನ್ನ ನಾನು ಡಿಸೈಡ್ ಮಾಡೋದಲ್ಲ. ಹೈಕಮಾಂಡ್ ತೀರ್ಮಾನ ಮಾಡಲಿದೆ. ಸೀನಿಯರ್ ಲೀಡರ್ ಗಳು ನಿರ್ಧಾರ ಮಾಡ್ತಾರೆ. ಯಾರಾದ್ರು ನಗರ ಓಕೆ, ಒಟ್ಟಿನಲ್ಲಿ ರಾಜ್ಯಕ್ಕೆ ಒಳ್ಳೇಯದಾಗಬೇಕು.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ವೇಣುಗೋಪಾಲ್ ಇದ್ದಾರೆ ನಿರ್ಧಾರ ಮಾಡ್ತಾರೆ. ಯಾರನ್ನ ಮಾಡಿದ್ರು ಓಕೆ. 'ಪಕ್ಷದಲ್ಲಿ ಗೊಂದಲ ಹೆಚ್ಚಾಗಿದೆ ಯಾಕೆ' ಅನ್ನೋ ಪ್ರಶ್ನೆಗೆ, 'ಅದೇ ರಾಜಕೀಯ' ಎಂದು ನಕ್ಕ ನಟಿ ರಮ್ಯಾ 'ಎಲ್ಲಾ ನಾಯಕರಿಗೂ ಅರ್ಹತೆ ಇದೆ. ಯಾರಾದ್ರೂ ಓಕೆ , ಹೈಕಮಾಂಡ್ ತೀರ್ಮಾನ ಮಾಡಲಿದೆ.. 'ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಕರ್ನಾಟಕದಲ್ಲಿ ಸಿಎಂ ಹಾಗೂ ಡಿಸಿಎಂ ನಡುವೆ ಅಧಿಕಾರ ಸಂಘರ್ಷ ತಾರಕಕ್ಕೆ ಏರಿರುವ ನಡುವೆಯೇ ಇಂದು ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ತೀರ್ಮಾನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದೆಹಲಿಯಲ್ಲಿ ಇಂದು ನಡೆಯಲಿರುವ ಹೈವೋಲ್ಟೇಜ್ ಸಭೆಯಲ್ಲಿ ಡಿಸಿಎಂ ಅವರ ಸಿಎಂ ಭವಿಷ್ಯ ತೀರ್ಮಾನವಾಗಲಿದೆ. 28 ಅಥವಾ 29 ಕ್ಕೆ ಸಿಎಂ ಹಾಗೂ ಡಿಸಿಎಂಗೆ ದೆಹಲಿಗೆ ಹೈಕಮಾಂಡ್ ಬುಲಾವ್ ನೀಡುವ ಸಾಧ್ಯತೆ ಇದ್ದು, ಡಿಸೆಂಬರ್ ಅಧಿವೇಶನಕ್ಕೆ ಮುಂಚೆ ಹೈಕಮಾಂಡ್ ತನ್ನ ನಿರ್ಧಾರ ತಿಳಿಸಲಿದೆ ಎನ್ನಲಾಗಿದೆ.
ಇಬ್ಬರನ್ನೂ ಕೂಡ ಒಂದೇ ವೇದಿಕೆಗೆ ತಂದು ಮಾತುಕತೆ ನಡೆಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಇವತ್ತಿನ ಸಭೆಯಲ್ಲಿ ಕರ್ನಾಟಕ ವಿಚಾರ ಪ್ರಮುಖವಾಗಿ ಚರ್ಚೆ ಆಗಲಿದೆ. ಶಾಸಕರ ಪರೇಡ್, ನಾಯಕರ ವಿರುದ್ದ ಆರೋಪಗಳ, ಸಿಎಂ ಮತ್ತು ಡಿಸಿಎಂ ನಡುವಿನ ಅಸಮಧಾನ ಬಗ್ಗೆಯೂ ಚರ್ಚೆ ನಡೆಯಲಿದೆ. ರಾಹುಲ್ ಗಾಂಧಿ ಸಮ್ಮುಖದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ, ಕೆ ಸಿ ವೇಣುಗೋಪಾಲ ಚರ್ಚೆ ನಡೆಸಲಿದ್ದಾರೆ.
ಸಂಘರ್ಷಕ್ಕೆ ಇಂದು ಬೀಳುತ್ತಾ ತೆರೆ?
ಸಿಎಂ ಸ್ಪಷ್ಟತೆಯೋ ? ಅಥವಾ ಡಿಸಿಎಂ ಕೇಳುವ ಒಪ್ಪಂದವೋ? ಎನ್ನುವ ಬಗ್ಗೆ ನಿರ್ಧಾರವಾಗಲಿದೆ. ಸಂಘರ್ಷಕ್ಕೆ ಮದ್ದು ಅರೆಯುವ ಕೆಲಸಕ್ಕೆ ಹೈಕಮಾಂಡ್ ಸಿದ್ದತೆ ನಡೆದಿದೆ. ಕಾಂಗ್ರೆಸ್ ನ ಹೈಕಮಾಂಡ್ ಎಲ್ಲಾ ನಾಯಕರು ಇಂದು ದೆಹಲಿಯಲ್ಲಿ ಇರಲಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಯ ಮೇಲೆ ಬಿಹಾರ ಚುನಾವಣಾ ಸೋಲು ಕುರಿತು ಇಂದಿರಾಭವನದಲ್ಲಿ ಪರಾಮರ್ಶೆ ಸಭೆ ನಡೆಯಲಿದೆ. ಬಿಹಾರದ ಸಭೆಯ ಬಳಿಕ ಕರ್ನಾಟಕದ ವಿಚಾರವೂ ಚರ್ಚೆ ಆಗಲಿದೆ. ಕರ್ನಾಟಕ ಉಸ್ತುವಾರಿ ಸುರ್ಜೇವಾಲ ಕೂಡ ದೆಹಲಿಯಲ್ಲಿ ಇರಲಿದ್ದಾರೆ. ವಾಸ್ತವ ಸ್ಥಿತಿಯ ಬಗ್ಗೆ ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಡಲು ಸುರ್ಜೇವಾಲ ಸಿದ್ದತೆ ನಡೆಸಿದ್ದಾರೆ. ಮುಂದೇನು ಎಂದು ಕಾದು ನೋಡಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.