'ನನಗೆ ಮಾತ್ರವಲ್ಲ ಇನ್ನೂ ಮೂವರಿಗೆ ಇದೇ ರೀತಿ ಮೋಸ ಮಾಡಿದ್ದಾಳೆ..' ಸ್ಯಾಂಡಲ್‌ವುಡ್‌ ನಟಿ ವಿರುದ್ಧ ಅರವಿಂದ್‌ ರೆಡ್ಡಿ ಹೊಸ ಬಾಂಬ್‌!

Published : Nov 17, 2025, 06:57 PM IST
Arvind Reddy AVR Group

ಸಾರಾಂಶ

ಸ್ಯಾಂಡಲ್‌ವುಡ್ ನಟಿಯ ಕಿರುಕುಳ ಆರೋಪವನ್ನು ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ನಿರಾಕರಿಸಿದ್ದಾರೆ. ಇದು ಲೈಂಗಿಕ ಕಿರುಕುಳವಲ್ಲ ಎಂದ ಅವರು, ನಟಿ ತನಗೆ 3 ಕೋಟಿ ಹಾಗೂ ಇತರೆ ಮೂವರಿಗೆ ಮದುವೆ ಹೆಸರಲ್ಲಿ ವಂಚಿಸಿದ್ದಾಳೆ ಎಂದು ಆರೋಪಿಸಿದ್ದಾರೆ. 

ಬೆಂಗಳೂರು (ನ.17): ಸ್ಯಾಂಡಲ್‌ವುಡ್‌ ನಟಿಗೆ ಕಿರುಕುಳ ಆರೋಪ ವಿಚಾರದಲ್ಲಿ ಆರೋಪಿ ಹಾಗೂ ಉದ್ಯಮಿ ಅರವಿಂದ್‌ ವೆಂಕಟೇಶ್‌ ರೆಡ್ಡಿ ಸುದ್ದಿಗೋಷ್ಠಿ ನೀಡಿ ಮಾಹಿತಿ ನೀಡಿದ್ದಾರೆ. ಇಡೀ ಪ್ರಕರಣದಲ್ಲಿ ಇರುವ ಆರೋಪ ಕಿರುಕುಳ ಹಾಗೂ ಹಿಂಬಾಲಿಸಿರುವುದು. ಇಲ್ಲಿ ಲೈಂಗಿಕ ಕಿರುಕುಳ ಅನ್ನೋ ವಿಚಾರವೇ ಇಲ್ಲ. ಆದರೆ, ಮಾಧ್ಯಮಗಳು ಮಾತ್ರ ಇದನ್ನು ಲೈಂಗಿಕ ಕಿರುಕುಳ ಎಂದು ಬಿಂಬಿಸಿ ನನ್ನನ್ನು ಬೀದಿಗೆ ನಿಲ್ಲಿಸಿದೆ. ನಾನೂ ಕೂಡ ಹೆಣ್ಣುಮಕ್ಕಳ ಕುಟುಂಬದಲ್ಲಿ ಹುಟ್ಟಿದವನು. ನನಗೂ ಕೂಡ ಒಂದು ಮರ್ಯಾದೆ ಇದೆ. ಕಿರುಕುಳ ಅಂತಾ ಆಕೆ ನೀಡಿರುವ ಕೇಸ್‌ಅನ್ನು ಲೈಂಗಿಕ ಕಿರುಕುಳ ಎಂದು ಬಿಂಬಿಸಿದ್ದೀರಿ' ಎಂದು ಹೇಳಿದ್ದಾರೆ.

ಇನ್ನೂ ಮೂರು ಜನರಿಗೆ ಇದೇ ರೀತಿ ಮೋಸ..

ನನಗೆ ಮಾತ್ರವಲ್ಲ ಇದೇ ರೀತಿಯಲ್ಲಿ ಆಕೆ ಇನ್ನೂ ಮೂರು ಮಂದಿಗೆ ಮೋಸ ಮಾಡಿದ್ದಾಳೆ. ಪ್ರತಿ ಬಾರಿಯೂ ಆಕೆ ಮಾಡುತ್ತಿರುವ ರೀತಿ ಇದೇ ರೀತಿಯಲ್ಲಿದೆ. ಈ ಕೇಸ್‌ ಹೊರಗಡೆ ಬಂದ ಬಳಿಕ ಮೂವರು ನನ್ನನ್ನು ಸಂಪರ್ಕ ಮಾಡಿದ್ದರು. ಅವರಿಗೂ ಇದೇ ರೀತಿ ನಟಿ ಮೋಸ ಮಾಡಿದ್ದಾಳೆ. ಮದುವೆ ಆಗ್ತಿನಿ ಅಂತಾ ವಂಚನೆ ಮಾಡಿದ್ದಾಳೆ. ಕೆವಲರ ಬಳಿ 80 ಲಕ್ಷ, 90 ಲಕ್ಷ ಹಣ ಪಡೆದು ಮೋಸ ಮಾಡಿದ್ದಾಳೆ. ಅವರು ನನ್ನ ಸಂಪರ್ಕ ಮಾಡಿ ಈ ವಿಚಾರ ತಿಳಿಸಿದ್ದಾರೆ ಎಂದು ಅರವಿಂದ್‌ ರೆಡ್ಡಿ ಆರೋಪಿಸಿದ್ದಾರೆ.

ಕಾರು ಹಾಗೂ ಸೈಟ್‌ ಬಿಟ್ಟು ನಾನು ನಟಿಗೆ ಅಂದಾಜು 2 ಅಥವಾ 2.5 ಕೋಟಿ ಖರ್ಚು ಮಾಡಿದ್ದೇನೆ. ಅದನ್ನೂ ಸೇರಿದಂತೆ 3.25 ಅಥವಾ 3.5 ಕೋಟಿ ಆಗಬಹುದು. ಈ ವಿಚಾರ ಕೇಳಿಯೇ ಅವರು ನನ್ನ ಸಂಪರ್ಕ ಮಾಡಿದ್ದಾರೆ. ಈಕೆಯಿಂದ ಹಣ ವಾಪಾಸ್‌ ಬೇಕು ಅಂತಾ ಕೇಳಿದಾಗ ಆಗಲೂ ಈಗೆ ಆತ್ಮಹ*ತ್ಯೆ ಮಾಡಿಕೊಳ್ಳುವ ಬ್ಲ್ಯಾಕ್‌ ಮೇಲ್‌ ಮಾಡಿದ್ದರು. ಇದರಲ್ಲಿ ಒಬ್ಬನಿಗೆ ಈಗ ಎಂಗೇಜ್‌ಮೆಂಟ್‌ ಆಗಿದ್ದು ಆತ ಇದೇ ಊರಿನವನು, ಇನ್ನೊಬ್ಬರು ಅಮೆರಿಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ನನ್ನ ಮೇಲೆ ಒಂದು ಆರೋಪ ಬಂದಿದೆ. ನಾನು ಲೈಂಗಿಕ ಕಿರುಕುಳ ಕೊಟ್ಟಿದ್ದೀನಿ ಎಂದು ಆರೋಪ ಬಂದಿದೆ. ಈ ಕುರಿತು ನಾನು ಕ್ಲಾರಿಟಿ ಕೊಡಲು ಬಂದಿದ್ದೇನೆ. ಇದು ಎರಡು ವರ್ಷ ಹಿಂದಿನ ಕಥೆ. ಎರಡು ವರ್ಷದಿಂದ ಆಕೆಯ ಜೊತೆ ಸಂಪರ್ಕದಲ್ಲಿಲ್ಲ. ಅವರು ಕೊಟ್ಟಿರುವ ದೂರಿನಲ್ಲಿ ನಾನು ಮಾಡಿರಬಹುದು ಎಂದು ದೂರು ಕೊಟ್ಟಿದ್ದಾರೆ. FIR ಮಾಡೋಕು ಮುಂಚೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿದ್ದರೆ ಗೊತ್ತಾಗುತ್ತಿತ್ತು. ನಾನು ಪೊಲೀಸರಿಗೆ ಫೋನ್ ಕೂಡ ಮಾಡಿದ್ದೆ.

ಆದರೆ, ಪೊಲೀಸರು ಬಂಧನ ಮಾಡಿದ್ದಾರೆ. ಪ್ರಪಂಚಕ್ಕೆ ನಟಿ ಹೆಸರು ಗೊತ್ತು ನಾನು ಆ ಹೆಸರು ಹೇಳೋಕೆ ಇಷ್ಟಪಡಲ್ಲ ಎಂದು ಹೇಳಿದ್ದಾರೆ.

ಒಮ್ಮೆ ಆಫ್ರಿಕಾದ ಮಸಾಯಿ ಮಾರಾಗೆ ಹೋಗಿದ್ದರು. ಇನ್ನೊಬ್ಬನ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದರು. ತಾಂಜಾನಿಯಾ ಹೋಗಿ ಬಂದಮೇಲೆ ಆಕೆಯ ಮೊಬೈಲ್ ನಲ್ಲಿ ಹಲವಾರು ಪೋಟೋಗಳು ಇದ್ದವು. ಆಗಲೇ ನಾನು ಆಕೆಯನ್ನ ಪ್ರಶ್ನೆ ಮಾಡಿದ್ದೆ. ಕಾರು ನನ್ನ ಹೆಸರಿನಲ್ಲೇ ಇದೆ. ಆಕೆ ನನ್ನ ಹೆಸರಿನಲ್ಲಿ ಇಲ್ಲ ಅಂತ ಹೇಳಿದ್ದಾರೆ. ಆಕೆ ಯಾವುದೇ ವಸ್ತು ವಾಪಸ್ ಕೊಟ್ಟಿಲ್ಲ. ದಾಖಲೆ ಕೊಡಬೇಕಿತ್ತು ಆದರೆ ಇವತ್ತು ಹೋಗೋಕೆ ಆಗಿಲ್ಲ. ನಾಳೆ ಪೊಲೀಸ್ ಠಾಣೆಗೆ ಹೋಗಿ ಕೊಡುತ್ತೇನೆ. ನಾನು ಇದುವರೆಗೂ ಎಲ್ಲಿಯೂ ಹೇಳಿಕೊಂಡಿಲ್ಲ ಎಂದಿಲ್ಲ.

ನನ್ನ ಮೇಲೆ ದೂರು ಕೊಟ್ಟ ಮೇಲೆ ನಾನು ಮಾತನಾಡಿದ್ದೀನಿ. ಅದಕ್ಕೂ ಮುಂಚೆ ನಾನು ಎಲ್ಲೂ ಮಾತನಾಡಿಲ್ಲ. ಯಾರದ್ದೋ ಮನೆಗೆ ಯಾರೋ ಪತ್ರ ಬರೆದರೆ ನನ್ನ ಮೇಲೆ ಆರೋಪ ಮಾಡಿದರೆ ಏನು ಮಾಡೋದು. ವಕೀಲರೊಬ್ಬರ ಬಳಿ ಮಾತನಾಡಿ ಡಿಮ್ಯಾಂಡ್ ಮಾಡಿದ್ದಾರೆ. ನಾನು ಡಿಮ್ಯಾಂಡ್ ಗೆ ಒಪ್ಪೋಕೆ ರೆಡಿ ಇಲ್ಲ. ಇದಾದ ಮೇಲೆ ಕಮಿಷನರ್ ಮುಂದೆ ಕೂತು ಆತ್ಮಹ*ತ್ಯೆ ಮಾಡಿಕೊಳ್ತೀನಿ ಅಂದಮೇಲೆ FIR ಆಗಿದೆ. ಜಾಮೀನು ಇರುವ ಸೆಕ್ಷನ್‌ಗೆ ಏರ್ಪೋರ್ಟ್ ನಲ್ಲಿ ಬಂಧನ ಮಾಡೋದು ಏನಿದೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ.

2017ರಲ್ಲಿ ನಟಿ ಪರಿಚಯ

2017ರಲ್ಲಿ ಕಾಮನ್ ಫ್ರೆಂಡ್ ಮೂಲಕ ಪರಿಚಯ ಆಗಿದ್ದರು. ಮನೆ ಇಲ್ಲ ಅಂತ ನನ್ನ ಬಳಿ ಬಂದಿದ್ದರು. ಕಬ್ಬನ್ ಪಾರ್ಕ್ ಬಳಿ ಸ್ನೇಹಿತರ ಮನೆ ಬಾಡಿಗೆ ಕೊಡಿಸಿದ್ದೇ ಅದಾದ ಮೇಲೆ ಭೇಟಿಯಾಗಿರಲಿಲ್ಲ. ಶ್ರೀಲಂಕಾದಲ್ಲಿ ನಡೆದ ಕ್ರಿಕೆಟ್ ಟೂರ್ನಿಗೆ ಬಂದಾಗ ಮತ್ತೆ ಪರಿಚಯ ಆಗಿತ್ತು. 100 ಮಾತ್ರೆ ಕುಡಿದರೆ ಯಾರಾದರೂ ಬದುಕೋಕೆ ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!