
ಮುಂಬೈ[ಡಿ.12]: ಹಿಂದಿ ಬಿಗ್‌ಬಾಸ್ ರಿಯಾಲಿಟಿ ಶೋ ನಡೆಸಿಕೊಡುತ್ತಿರುವ ನಟ ಸಲ್ಮಾನ್ ಖಾನ್, ಶೀಘ್ರವೇ ಶೋಗೆ ಗುಡ್‌ಬೈ ಹೇಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಶೋದಲ್ಲಿ ಕೆಲ ಸ್ಪರ್ಧಿಗಳ ವರ್ತನೆಯಿಂದ ತೀರಾ ನೊಂದಿರುವ ಸಲ್ಮಾನ್, ತಕ್ಷಣದಿಂದಲೇ ಕಾರ್ಯಕ್ರಮದಿಂದ ಹೊರ ಸರಿಯುತ್ತಿರುವುದಾಗಿ ಕಾರ್ಯಕ್ರಮ ಪ್ರಸಾರಕರಿಗೆ ನೇರ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಟನೆ ಮತ್ತು ಸೆಕ್ಸ್ ಎರಡನ್ನೂ ಬಿಟ್ಟಿರಲಾರೆ; ಹುಬ್ಬೇರುವಂತೆ ಮಾಡಿದೆ ನಟನ ಹೇಳಿಕೆ
ಏಕಾಏಕಿ ನಡೆದ ಈ ಬೆಳವಣಿಗೆಯಿಂದ ಕಂಗೆಟ್ಟಿರುವ ಕಾರ್ಯಕ್ರಮ ನಿರ್ಮಾಪಕರು, ಈ ಹೊಣೆಯನ್ನು ನಿರ್ದೇಶಕಿ ಫರ್ಹಾ ಖಾನ್‌ಗೆ ವಹಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ವರ್ಷ ಕಾರ್ಯಕ್ರಮ ಭಾರೀ ಜನಪ್ರಿಯತೆ ಪಡೆದಿದ್ದ ಕಾರಣ, ಪ್ರತಿ ಎಪಿಸೋಡ್‌ಗೆ ಹೆಚ್ಚುವರಿ 2 ಕೋಟಿ ರು. ಕೊಟ್ಟು 5 ವಾರ ಕಾರ್ಯಕ್ರಮ ವಿಸ್ತರಣೆಗೆ ನಿರ್ಮಾಪಕರು ಚಿಂತಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.