RRR Movie ರಿಲೀಸ್ ಡೇಟ್ ಬದಲಾವಣೆ ಸಾಧ್ಯತೆ, ಕೆಜಿಎಫ್‌ಗೆ ತರುತ್ತಾ ಸಂಕಷ್ಟ?

Published : Jan 01, 2022, 03:31 PM ISTUpdated : Jan 02, 2022, 11:45 AM IST
RRR Movie ರಿಲೀಸ್ ಡೇಟ್ ಬದಲಾವಣೆ ಸಾಧ್ಯತೆ, ಕೆಜಿಎಫ್‌ಗೆ ತರುತ್ತಾ ಸಂಕಷ್ಟ?

ಸಾರಾಂಶ

ಜನವರಿ 7ರಂದು ಬಿಡುಗಡೆಗೆ ಸಜ್ಜಾಗಿದ್ದ ಸ್ಟಾರ್ ನಟರನ್ನೊಳಗೊಂಡ ಬಹು ನಿರೀಕ್ಷಿತ ಸಿನಿಮಾ ಆರ್‌ಆರ್‌ಆರ್ ಕೋವಿಡ್ ಕೇಸ್‌ಗಳ ಹೆಚ್ಚಳ ಹಿನ್ನೆಲೆಯಲ್ಲಿ ಏಪ್ರಿಲ್‌ಗೆ ಪೋಸ್ಟ್‌ಪೋನ್ ಆಗುವ ಸಾಧ್ಯತೆ ಇದೆ. 

ಸಿನಿಮಾಸಕ್ತರು ಬೇಜಾರು ಮಾಡಿಕೊಳ್ಳುವಂಥ ಸುದ್ದಿಯೊಂದು ಇಲ್ಲಿದೆ. ಬಾಹುಬಲಿ ಖ್ಯಾತಿಯ ರಾಜಮೌಳಿ(Rajamouli) ನಿರ್ದೇಶನದ ಬಹುನಿರೀಕ್ಷಿತ ಬಿಗ್ ಬಜೆಟ್ ಚಿತ್ರ ಆರ್‍ಆರ್‍‌ಆರ್(RRR) ಬಿಡುಗಡೆ ಮುಂದೆ ಹೋಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಇನ್ನೇನು ಒಂದೇ ವಾರದಲ್ಲಿ ಅಂದರೆ, ಜನವರಿ 7ರಂದು ಆರ್‍ಆರ್‍‌ಆರ್ ಬಿಡುಗಡೆ ಎಂದು ವಿಶ್ವಾದ್ಯಂತ ಸಿನಿಮಾಸಕ್ತರು ಕಾದು ಕುಳಿತಿದ್ದರು. ಆದರೆ, ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್(Covid) ಕೇಸ್‌ಗಳ ಕಾರಣದಿಂದಾಗಿ ಚಿತ್ರ ಬಿಡುಗಡೆಗೆ ಸಿನಿಮಾ ತಂಡ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ. 

ಜನವರಿ 7ಕ್ಕೆ ಆರ್‍ಆರ್‍‌ಆರ್ ಚಿತ್ರ ಬಿಡುಗಡೆ ಇದ್ದಿದ್ದರಿಂದ ನಾಳೆ ಬೆಂಗಳೂರಿನಲ್ಲಿ ಪ್ರೀ ರಿಲೀಸ್ ಇವೆಂಟ(pre- release event)ನ್ನು ಥ್ರಿಬಲ್ ಆರ್ ಟೀಂ ಇಟ್ಟುಕೊಂಡಿತ್ತು. ಆದರೆ, ಇದ್ದಕ್ಕಿದ್ದಂತೆ ನಾಳೆ ನಡೆಯಬೇಕಿದ್ದ ಪ್ರೀ ರಿಲೀಸ್ ಈವೆಂಟ್ ರದ್ದಾಗಿದೆ. ಹೀಗಾಗಿ ಕೆಲವೇ ಕ್ಷಣಗಳಲ್ಲಿ ಥ್ರಿಬಲ್ ಆರ್ ಚಿತ್ರದ ರಿಲೀಸ್ ಡೇಟ್ ಪೋಸ್ಟ್‌ಪೋನ್(postpone) ಆಗಿರುವುದನ್ನು ಚಿತ್ರ ತಂಡ ಅಧಿಕೃತವಾಗಿ ಹಂಚಿಕೊಳ್ಳಲಿದೆ.

ದೇಶದಲ್ಲಿ ಒಮಿಕ್ರಾನ್ ಕೇಸ್‌ಗಳು ಹೆಚ್ಚುತ್ತಿವೆ. ಕೋವಿಡ್ ಕೇಸ್‌ಗಳು ಕೂಡಾ ಮತ್ತೆ ಏರಿಕೆಯಾಗುತ್ತಿವೆ. ಈಗಾಗಲೇ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಹೇರಲಾಗಿದೆ. ಈ ಎಲ್ಲ ಕಾರಣಗಳಿಂದ ಜನ ಚಿತ್ರಮಂದಿರಗಳಿಗೆ ಬರಲು ಹಿಂದೇಟು ಹಾಕಬಹುದು ಎಂಬ ಆತಂಕ ಚಿತ್ರತಂಡದ್ದು. ಅಲ್ಲದೆ, ಮತ್ತೆ ಲಾಕ್‌ಡೌನ್ ಮಾಡಿದರೆ ಏನು ಗತಿ ಎಂಬ ಭೀತಿ ಚಿತ್ರಕ್ಕೆ ಎದುರಾಗಿದೆ. 


RRR Production: ರಾಜಮೌಳಿ ಸಿನಿಮಾದ 1 ದಿನದ ಶೂಟ್ ಖರ್ಚು 75 ಲಕ್ಷ

ಯಾವಾಗ ರಿಲೀಸ್?
ಈಗ ಆರ್‌ಆರ್‌ಆರ್ ಚಿತ್ರದ ಬಿಡುಗಡೆಯನ್ನು ಏಪ್ರಿಲ್‍‌ಗೆ ಮುಂದೂಡಬಹುದು ಎಂದು ಮೂಲಗಳು ತಿಳಿಸಿವೆ. ಜನವರಿ 7ರ ಬದಲು ಏಪ್ರಿಲ್ 1ನೇ ತಾರೀಕಿನಂದು ಈ ಸ್ಟಾರ್ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ. 

ಕೆಜಿಎಫ್‌ಗೆ ಆತಂಕ
ಈಗಾಗಲೇ ಆರ್‌ಆರ್‌ಆರ್ ಸಿನಿಮಾ ಬಿಡುಗಡೆ ದಿನಾಂಕ ಜನವರಿಯಲ್ಲಿ ನಿಗದಿಯಾಗಿದ್ದರಿಂದ ಹಲವು ಸ್ಟಾರ್‌ಗಳ ಸಿನಿಮಾಗಳು ಜನವರಿಯಲ್ಲಿ ಬಿಡುಗಡೆಯಾಗದೆ ಮುಂದೆ ಹೋಗಿದ್ದವು. ಆದರೆ, ಈಗ ಥ್ರಿಬಲ್ ಆರ್ ಸಿನಿಮಾ ಏಪ್ರಿಲ್‌ಗೆ ಹೋದರೆ, ಈಗಾಗಲೇ ಏಪ್ರಿಲ್‌ನಲ್ಲಿ ರಿಲೀಸ್ ಆಗಲು ಸಜ್ಜಾಗಿರುವ ಕೆಜಿ‌ಎಫ್(KGF) ಹಾಗೂ ಅಮೀರ್‍ ಖಾನ್‌ನ ಲಾಲ್ ಸಿಂಗ್ ಚಡ್ಡಾ(Lal Singh Chadda) ಚಿತ್ರಗಳಿಗೆ ಹೊಡೆತ ಬೀಳುವ ಸಾಧ್ಯತೆಗಳಿವೆ. ಯಶ್ ನಟನೆಯ ಕೆಜಿಎಫ್ ಹಾಗೂ ಅಮೀರ್ ಖಾನ್‌ನ ಲಾಲ್ ‌ ಸಿಂಗ್ ಚಡ್ಡಾ ಚಿತ್ರಗಳು ಏಪ್ರಿಲ್ 14ರಂದು ಬಿಡುಗಡೆಗೆ ಸಜ್ಜಾಗಿದ್ದವು. ಆದರೆ, ಆರ್‌ಆರ್‌ಆರ್ ಸಿನಿಮಾ ಏಪ್ರಿಲ್ 1ರಂದು ಬಿಡುಗಡೆಯಾದರೆ ತಮ್ಮ ಚಿತ್ರದ ಕಲೆಕ್ಷನ್‌ಗೆ ಹೊಡೆತ ಬೀಳುವ ಆತಂಕ ಈ ಎರಡು ಚಿತ್ರತಂಡಗಳಲ್ಲಿ ಶುರುವಾಗಿದೆ. 

Director Rajamouli RRR Interview: ಕತೆ ವಾವ ಅನ್ನಿಸದೇ ಇದ್ದರೆ ನಾನು ಸಿನಿಮಾ ಮಾಡುವುದಿಲ್ಲ ಎಂದ ನಿರ್ದೇಶಕ

ಈಗಾಗಲೇ ಚಿತ್ರದ ಟ್ರೇಲರ್ ಧೂಳೆಬ್ಬಿಸಿದೆ. ಸಿನಿಮಾದ ಹಾಡುಗಳೂ ವೈರಲ್ ಆಗಿದ್ದು ರಾಜಮೌಳಿ ಸಿನಿಮಾವನ್ನು ಬೆಳ್ಳಿ ತೆರೆಯಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದರು. ರಾಮ್​ ಚರಣ್​ (Ram Charan), ಜ್ಯೂ. ಎನ್​ಟಿಆರ್ (Jr.NTR)​ ಅಭಿಮಾನಿಗಳು ಈ ಸಿನಿಮಾ ಮೇಲೆ ಸಖತ್​ ಭರವಸೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ನಟರಾದ ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. RRR 20ನೇ ಶತಮಾನದ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಕುರಿತ ಕಾಲ್ಪನಿಕ ಕಥೆಯನ್ನು ಚಿತ್ರ ಹೊಂದಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಗೆ ಚಿತ್ರ ಸಜ್ಜಾಗಿದೆ. 

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?