ಶೂ ಹಾಕಿ ನಡೆದಾಡೋ ಹುಂಜ: ಊಟದ ಪಾತ್ರೆಗೆ ಮುಚ್ಚಿಡುವ ಶ್ವಾನ: ವೈರಲ್ ವೀಡಿಯೋ

By Suvarna News  |  First Published Sep 10, 2023, 6:10 PM IST

ಇಂಟರ್‌ನೆಟ್‌ನಲ್ಲಿ ತಮಾಷೆಯೆನಿಸುವ ವೀಡಿಯೋಗಳಿಗೆ ಲೆಕ್ಕವೇ ಇಲ್ಲ, ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್‌ ಫೇಸ್‌ಬುಕ್ ಟ್ವಿಟ್ಟರ್‌ ಮುಂತಾದೆಡೆ ನಕ್ಕು ನಗಿಸುವಂತಹ ಸಾವಿರಾರು ವಿಭಿನ್ನ ವಿಶೇಷ ವೀಡಿಯೋಗಳನ್ನು ನಾವು ನೋಡಬಹುದು.  ಅದೇ ರೀತಿ ಇಲ್ಲೊಂದು ಹುಂಜಕ್ಕೆ ಜನ ಶೂ ಧರಿಸಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಇಂಟರ್‌ನೆಟ್‌ನಲ್ಲಿ ತಮಾಷೆಯೆನಿಸುವ ವೀಡಿಯೋಗಳಿಗೆ ಲೆಕ್ಕವೇ ಇಲ್ಲ, ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್‌ ಫೇಸ್‌ಬುಕ್ ಟ್ವಿಟ್ಟರ್‌ ಮುಂತಾದೆಡೆ ನಕ್ಕು ನಗಿಸುವಂತಹ ಸಾವಿರಾರು ವಿಭಿನ್ನ ವಿಶೇಷ ವೀಡಿಯೋಗಳನ್ನು ನಾವು ನೋಡಬಹುದು.  ಅದೇ ರೀತಿ ಇಲ್ಲೊಂದು ಹುಂಜಕ್ಕೆ ಜನ ಶೂ ಧರಿಸಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಟ್ಟ ಮಕ್ಕಳು ಶೂ ಧರಿಸಿ ಹೆಜ್ಜೆ ಇಟ್ಟಂತೆ ಇಲ್ಲಿ ಕೋಳಿಯೊಂದು ಹೆಜ್ಜೆ ಇಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಸಾಕಷ್ಟು ವೈರಲ್ ಆಗಿದೆ. ವೀಡಿಯೋ ನೋಡಿದವರು ಕೋಳಿ ತುಂಬಾ ಸ್ಟೈಲಿಶ್ ಆಗಿದೆ. ಮಕ್ಕಳಂತೆ ಕಾಣಿಸುತ್ತಿದೆ ಎಂದು ವೀಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ. 

ನೇಚರ್ ಎಂಬ ಇನ್ಸ್ಟಾಗ್ರಾಮ್ (Instagram) ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಕೋಳಿ ಪುಟ್ಟ ಮಕ್ಕಳಂತೆ ಶೂ ಧರಿಸಿ ಹೆಜ್ಜೆ ಹಾಕುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ವೀಡಿಯೋ ನೋಡಿದ ಅನೇಕರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಇದು ಪ್ರಾಣಿ ಹಿಂಸೆ ಎಂದು ಹೇಳಿದರೆ ಮತ್ತೆ ಕೆಲವರು ನನ್ನ ಗೆಳತಿ ಶೂ ಧರಿಸಿ ಹೀಗೆಯೇ ನಡೆಯುತ್ತಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಗಲ್ಲಿ ಗಲ್ಲಿ ಕೇರಿ ಹೊಟ್ಟೆ ತುಂಬಿಸಿಕೊಳ್ಳುವ ಕೋಳಿಗೆ ಹೀಗೆ ಶೂ ಹಾಕಿದರೆ ಅದರ ಹೊಟ್ಟೆಯ ಗತಿಯೇನು ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಹೂಗಿಡ ತರಕಾರಿಗಳ ಬುಡಗಳೆನ್ನೆಲ್ಲಾ ಕೇರಿ ಗಿಡಗಳಿಗೆ ಹಾಕಿದ ಗೊಬ್ಬರವನ್ನೆಲ್ಲಾ ಮತ್ತೆಲ್ಲೋ ಎಸೆಯುವ ಕೋಳಿಗೆ ಈ ರೀತಿ ಉಪಾಯ ಮಾಡಿದರೆ ಚೆನ್ನಾಗಿರುತ್ತೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಶೂ ಧರಿಸಿ ಕೋಳಿ ಮಕ್ಕಳಂತೆ ಹೆಜ್ಜೆ ಇಡುವ ವೀಡಿಯೋ ನಕ್ಕು ನಗಿಸುತ್ತಿದ್ದು, ಇಂತಹ ಐಡಿಯಾಗಳೆಲ್ಲಾ ಭಾರತೀಯರಿಗೆ ಮಾತ್ರ ಬರಲು ಸಾಧ್ಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

Tap to resize

Latest Videos

ರಸ್ತೆಯಲ್ಲಿ ಫುಲ್ ಬಾಟಲ್ 'ಎಣ್ಣೆ' ಸಿಕ್ಕರೆ ಜನರ ರಿಯಾಕ್ಷನ್ ಹೇಗಿರುತ್ತೆ... ನೋಡಿ ಈ ವೈರಲ್ ವೀಡಿಯೋ

 

ಊಟದ ಪಾತ್ರೆಗೆ ಮುಚ್ಚಿಡುವ ಶ್ವಾನ 

ಮುನುಷ್ಯರು ನಾವು ಮಾತ್ರ ಬುದ್ಧಿವಂತರೆಂದು ಭಾವಿಸುತ್ತಾರೆ. ಆದರೆ ಪ್ರಾಣಿಗಳು ತೋರುವ ಬುದ್ಧಿವಂತಿಕೆ ಮನುಷ್ಯನಲ್ಲಿ ಅಚ್ಚರಿ ಮೂಡಿಸುತ್ತದೆ. ಅದರಲ್ಲೂ ಸ್ವಾಮಿನಿಷ್ಠ ಎನಿಸಿದ ನಾಯಿಗಳು ಬುದ್ಧಿವಂತಿಕೆಯಿಂದಲೇ ಮನುಷ್ಯರನ್ನು ಅಚ್ಚರಿಗೀಡು ಮಾಡುತ್ತವೆ. ಅದೇ ರೀತಿ ಇಲ್ಲೊಂದು ಶ್ವಾನ (Dog) ಬುದ್ಧಿವಂತಿಕೆ ತೋರಿದ ವೀಡಿಯೋವೊಂದು ವೈರಲ್ ಆಗಿದ್ದು, ನಕ್ಕು ನಗಿಸುವಂತಿದೆ. 

ವೀಡಿಯೋದಲ್ಲೇನಿದೆ. 

Thew Chanma ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಕಬ್ಬಿಣದ (Tawa) ಕಾವಲಿಯೊಂದರ ಮೇಲೆ ಆಹಾರವನ್ನು ಇರಿಸಲಾಗಿದ್ದು, ಅಲ್ಲಿಗೆ ಬಂದ ಕೋಳಿಯೊಂದು ಇದನ್ನು ನೋಡಿ ತನ್ನ ಕೊಕ್ಕಿನಿಂದ ಕುಕ್ಕಿ ಕುಕ್ಕಿ ಆಹಾರವನ್ನು ಸ್ವಲ್ಪಸ್ವಲ್ಪವೇ ತಿನ್ನುತ್ತಾ ದೂರ ಚಿಮ್ಮುತ್ತಿರುತ್ತದೆ. ಇದನ್ನು ನೋಡುವಷ್ಟು ನೋಡಿದ ಅಲ್ಲೇ ಇದ್ದ ಶ್ವಾನವೊಂದು ಈ ಆಹಾರದ ಮೇಲೆ ಪಾತ್ರವೊಂದನ್ನು ಮುಚ್ಚಿಟ್ಟು ಕೋಳಿ ಕೈಗೆ ಆಹಾರ ಸಿಗದಂತೆ ಮಾಡುತ್ತದೆ. ಕೋಳಿಯನ್ನು ದೂರ ಓಡಿಸದೇ ಕೇವಲ ಆಹಾರದ ಮೇಲೆ ಮುಚ್ಚಳವಿಟ್ಟು ಕೋಳಿ ಕೈಗೆ ಆಹಾರ ಸಿಗದಂತೆ ಮಾಡಿದ ಶ್ವಾನದ ಬುದ್ಧಿವಂತಿಕೆ ನೋಡಿ ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೀಡಿಯೋ ನೋಡಿದ ಅನೇಕರು ಶ್ವಾನ ಬಹಳ ಬುದ್ಧಿವಂತ ಶ್ವಾನದ ಬುದ್ದಿಯನ್ನು ಕಡೆಗಣನೆ ಮಾಡಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಅನೇಕರು ನಗುವಿನ ಇಮೋಜಿ ಕಾಮೆಂಟ್ ಮಾಡುವ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ.

ಲಿಫ್ಟ್‌ ಬಾಗಿಲಿಗೆ ಸಿಲುಕಿದ ಬೆಲ್ಟ್‌: ಪುಟ್ಟ ಬಾಲಕನ ಚಾಣಾಕ್ಷತೆಯಿಂದ ...

 

click me!