ಯಶ್ ಸ್ಟಾರ್ ಆಗಿದ್ದಾಯ್ತು, ಈಗ 'ರಾಕಿ' ಅಮ್ಮ ಪುಷ್ಪಾ ಚಿತ್ರರಂಗಕ್ಕೆ ಬರ್ತಿದಾರೆ; ದಾರಿಬಿಡಿ..!

Published : Apr 28, 2025, 07:36 PM ISTUpdated : Apr 28, 2025, 07:53 PM IST
ಯಶ್ ಸ್ಟಾರ್ ಆಗಿದ್ದಾಯ್ತು, ಈಗ 'ರಾಕಿ' ಅಮ್ಮ ಪುಷ್ಪಾ ಚಿತ್ರರಂಗಕ್ಕೆ ಬರ್ತಿದಾರೆ; ದಾರಿಬಿಡಿ..!

ಸಾರಾಂಶ

ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್, 'ಪಿಎ' (ಪುಷ್ಪಾ-ಅರುಣ್) ಪ್ರೊಡಕ್ಷನ್ ಹೌಸ್ ಆರಂಭಿಸಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಏಪ್ರಿಲ್ ೨೯ ರಂದು ಪೃಥ್ವಿ ಅಂಬಾರ್ ನಾಯಕತ್ವದ ಚಿತ್ರ ಘೋಷಣೆಯಾಗಲಿದೆ. ಕಾವ್ಯಾ ಶೈವ್, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.

ಹೌದು, ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Rocking Star Yash) ಅವರ ಅಮ್ಮ ಪುಷ್ಪಾ ಅರುಣ್ ಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಸದ್ಯದಲ್ಲೇ ಅವರು ಒಂದು ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡ ಧಾರಾವಾಹಿಯಲ್ಲಿ ಸಣ್ಣಪುಟ್ಟ ಪಾತ್ರಗಳ ಮೂಲಕ ಬಣ್ಣ ಹಚ್ಚಿ, ಬಳಿಕ ಕನ್ನಡ ಸಿನಿಮಾಗಳಲ್ಲಿ ಹೀರೋ ಅಗಿ ಸದ್ಯ ಭಾರತದ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರೋದು ಎಲ್ಲರಿಗೂ ಗೊತ್ತು. ಈಗ ಯಶ್ ಅಮ್ಮ ಪುಷ್ಪಾ (Pushpa Arun Kumar) ಸರದಿ, ಹೌದು ಅವರು ಸ್ಯಾಂಡಲ್‌ವುಡ್ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ, ಸ್ವಲ್ಪ ಸೈಡ್‌ಗೆ ಹೋಗಿ..

ನಟ ಯಶ್ ಅವರ ಅಮ್ಮ ಪುಷ್ಪಾ ಇದೇ ತಿಂಗಳು ಕನ್ನಡ ಚಿತ್ರರಂಗಕ್ಕೆ ಬಲಗಾಲಿಟ್ಟು ಬರಲಿದ್ದಾರೆ. ಪುಷ್ಪಾ ಅವರು ಹೊಸ ಪ್ರೊಡಕ್ಷನ್ ಹೌಸ್ ತೆರೆಯಲಿದ್ದಾರೆ. ಅದಕ್ಕೆ 'ಪಿಎ' (PA) ಎಂದು ಹೆಸರಿಡಲಾಗಿದೆ. ಯಶ್ ಅಮ್ಮನ ನಿರ್ಮಾಣ ಸಂಸ್ಥೆ ಹೆಸರು PA. ಅಂದ್ರೆ ಪುಷ್ಪಾ ಹಾಗೂ ಅರುಣ್ ಕುಮಾರ್ (Arun Kumar) ಪ್ರೊಡಕ್ಷನ್ ಹೌಸ್, ಸದ್ಯ ಈ ವಿಷಯ ತಿಳಿದ ಯಶ್ ಅಭಿಮಾನಿಗಳು ಆಕಾಶದಲ್ಲಿ ಹಾರಾಡತೊಡಗಿದ್ದಾರೆ. ಏಕೆಂದರೆ, ನಟ ಯಶ್ ಅವರು ಈಗಾಗಲೇ 'ರಾಮಾಯಣ' ಚಿತ್ರಕ್ಕೆ ನಿರ್ಮಾಪಕ ಆಗಿದ್ದಾರೆ. ಇದೀಗ, ಸ್ವಂತ ನಿರ್ಮಾಣ ಸಂಸ್ಥೆ ಸಹ ಹುಟ್ಟುಹಾಕಿದ್ದಾರೆ. 

ಶ್ರೀಲೀಲಾ ಮನೆಗೆ ಬಂತು ಹೆಣ್ಣುಮಗು; ಭಾರೀ ವೈರಲ್ ಆಯ್ತು ನಟಿಯ ಈ ನ್ಯೂಸ್!

ನಾಳೆ, ಅಂದರೆ 29 ಏಪ್ರಿಲ್ 2025ರ ಮಂಗಳವಾರ ಬೆಳಿಗ್ಗೆ ಈ ಪಿಎ ಪ್ರೊಡಕ್ಷನ್‌ ಹೌಸ್‌ನ ಮೊದಲ ಚಿತ್ರದ ಘೋಷಣೆ ಆಗಲಿದೆ. ಈ ಚಿತ್ರದಲ್ಲಿ ದಿಯಾ ಸಿನಿಮಾದ ಖ್ಯಾತಿಯ ನಟ ಪೃಥ್ವಿ ಅಂಬಾರ್ ನಾಯಕರಾಗಿ ನಟಿಸಲಿದ್ದಾರೆ. ಕಾವ್ಯಾ ಶೈವ, ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರವನ್ನು ಉತ್ತಮ ಕಥೆಯೊಂದಿಗೆ ಸಿದ್ಧಪಡಿಸಲಿದ್ದು, ಮೊಟ್ಟಮೊದಲ ಚಿತ್ರವನ್ನು 'ಧಾಂಧೂಂ' ಎನ್ನುವಂತೆ ನಿರ್ಮಾಣ ಮಾಡಲು ಯಶ್ ಪೋಷಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಯಶ್ ಪೋಷಕರು, ಅಂದರೆ ರಾಕಿಂಗ್ ಸ್ಟಾರ್ ಅಮ್ಮ ಪುಷ್ಪಾ ಅವರು ಸ್ವಂತ ನಿರ್ಮಾಣ ಸಂಸ್ಥೆ ಓಪನ್ ಮಾಡುತ್ತಿರುವ ಸುದ್ದಿ ಸಕತ್ ವೈರಲ್ ಆಗಿದೆ. ಸದ್ಯ ಟಾಕ್ಸಿಕ್ ಹೆಸರಿನ ಪ್ಯಾನ್ ವರ್ಲ್ಡ್ ಸಿನಿಮಾ ಹಾಗೂ ರಾಮಾಯಣ ಹೆಸರಿನ ಬಿಗ್ ಬಜೆಟ್ ಬಾಲಿವುಡ್ ಸಿನಿಮಾಗಳಲ್ಲಿ ಯಶ್ ನಟಿಸುತ್ತಿದ್ದಾರೆ. ರಾಮಾಯಣ ಚಿತ್ರಕ್ಕೆ ಯಶ್ ಬಂಡವಾಳ ಹೂಡಿದ್ದು, ಈ ಮೂಲಕ ಅವರು ಈಗಾಗಲೇ ನಿರ್ಮಾಪಕ ಎಂಬ ಪಟ್ಟ ಗಿಟ್ಟಿಸಿದ್ದಾರೆ. ಯಶ್ ಪತ್ನಿ ರಾಧಿಕಾ ಪಂಡಿತ್‌ (Radhika Pandit) ಅವರು ಸಿನಿಮಾ ನಿರ್ಮಾಪಕಿ ಆಗಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಈಗ ಯಶ್ ಅಮ್ಮ ಪುಷ್ಪಾ ಅವರು 'ಪಿಎ' ಪ್ರೊಡಕ್ಷನ್ ಹೌಸ್ ತೆರೆದಿದ್ದಾರೆ. 

ರಾಜಮೌಳಿ ಕನಸಿನ ಸಿನಿಮಾದಲ್ಲಿ ನಟ ನಾನಿ; ಯಾರೂ ಗೆಸ್ ಮಾಡಿರ್ಲಿಲ್ಲ!

ಪೃಥ್ವಿ ಅಂಬರ್ ನಟನೆಯಲ್ಲಿ, ಯಶ್ ಅಮ್ಮ ಪುಷ್ಪಾ ನಿರ್ಮಾಣ ಸಂಸ್ಥೆಯಿಂದ ಹೊರಬರಲಿರುವ ಸಿನಿಮಾ ಹೆಸರು ಏನು ಎಂಬುದು ಇನ್ನಷ್ಟೇ ಬಹಿರಂಗ ಆಗಬೇಕಿದೆ. ನಾಳೆ, 29 ಎಪ್ರಿಲ್ 2025 ರಂದು ನಿರ್ಮಾಣ ಸಂಸ್ಥೆ ಹಾಗೂ ಮೊದಲ ಸಿನಿಮಾ ಘೋಷಣೆ ಆಗಲಿರುವ ಸುದ್ದಿ ಈಗ ಕರ್ನಾಟಕದ ತುಂಬಾ ಬಿರುಗಾಳಿಯಂತೆ ಹಬ್ಬತೊಡಗಿದೆ. ಮಿಕ್ಕ ಮಾಹಿತಿ ಮುಂದೆ ಬಹಿರಂಗವಾಗಲಿದ್ದು ಅದಕ್ಕಾಗಿ ಯಶ್ ಅಭಿಮಾನಿಗಳು ಕಾಯುತ್ತಿದ್ದಾರೆ. ನಾಳೆ ನಿರ್ಮಾಣ ಸಂಸ್ಥೆ ಓಪನಿಂಗ್‌ಗೆ ಯಾರೆಲ್ಲಾ ಬರಬಹುದು ಎಂಬ ಕುತೂಹಲ ಹಲವರಲ್ಲಿ ಮನೆಮಾಡಿದೆ. ಎಲ್ಲವೂ ಟೈಮ್ ಬಂದಾಗ ಗೊತ್ತಾಗಲಿದೆ, ಸ್ವಲ್ಪ ಕಾಯಬೇಕು ಅಷ್ಟೇ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Viral Video: 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್‌ ಬ್ಯೂಟಿ ಮಹಿಮಾ ಚೌಧರಿ?
ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ