
ಏಪ್ರಿಲ್ 3,2022ರಂದು ಎಮ್‌ಜಿಎಮ್ ಗ್ರ್ಯಾಂಡ್ ಗಾರ್ಡನ್ ಅರೇನಾ ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ ಗ್ರ್ಯಾಮಿ 2022 ಅವಾರ್ಡ್ ಕಾರ್ಯಕ್ರಮದಲ್ಲಿ ಭಾರತೀಯ ಸಂಗೀತ ಸಂಯೋಜಕ ರಿಕ್ಕಿ ಮತ್ತು ಸ್ಟೀವರ್ಟ್ ಕೋಪ್‌ಲ್ಯಾಂಡ್ ಅವರ ಡಿವೈನ್ ಟೈಡ್ಸ್ ಆಲ್ಬಂ ಆಯ್ಕೆ ಆಗಿತ್ತು. ಡಿವೈನ್ ಟೈಡ್ಸ್ ಹಾಡನ್ನು ಲಹರಿ ಮ್ಯೂಸಿಕ್ ಸಂಸ್ಥೆ ನಿರ್ಮಾಣ ಮಾಡಿತ್ತು. ಬೆಸ್ಟ್ ನ್ಯೂ ಏಜ್ ಆಲ್ಬಂ ಕ್ಯಾಟಗರಿಗೆ ಆಯ್ಕೆ ಆಗಿದ್ದು ರಿಕ್ಕಿ ಕೇಜ್ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ.
ರಿಕ್ಕಿ ಕೇಜ್ ಪೋಸ್ಟ್:
'ಡಿವೈನ್ ಟೈಡ್ಸ್ ಹಾಡಿಗೆ ನಾವು ಇಂದು ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದೀವಿ. ನಾನು ಸದಾ ಕೃತಜ್ಞತೆಯಿಂದ ತುಂಬಿದ್ದೇನೆ ಹಾಗೂ ನನ್ನ ಪಕ್ಕದಲ್ಲಿರುವ ಲೀವಿಂಗ್ ಲಜೆಂಡ್ ಸ್ಟೀವರ್ಟ್ ಕೋಪ್ಲ್ಯಾಂಡ್‌ಗೆ ನನ್ನ ತುಂಬು ಹೃದಯದ ಪ್ರೀತಿ ನೀಡುತ್ತೇನೆ. ನನಗಿದು ಎರಡನೇ ಗ್ರ್ಯಾಮಿ ಅವಾರ್ಡ್ ಮತ್ತು ಸ್ಟೀವರ್ಟ್ ಕೋಪ್ಲ್ಯಾಂಡ್ ಅವರಿಗೆ 6ನೇ ಗ್ರ್ಯಾಮಿ ಅವಾರ್ಡ್. ನನ್ನ ಜೊತೆ ಕೈ ಜೋಡಿಸಿದ ಪ್ರತಿಯೊಬ್ಬರಿಗೂ, ನನ್ನ ಹಾಡು ಕೇಳಿ ನನ್ನ ಸಂಗೀತ ಇಷ್ಟ ಪಟ್ಟವವರಿಗೆ ಧನ್ಯವಾದಗಳು. ನಾನು ಇಲ್ಲಿರುವುದೇ ನಿಮ್ಮಿಂದ' ಎಂದು ರಿಕ್ಕಿ ಕೇಜ್ ಬರೆದುಕೊಂಡಿದ್ದಾರೆ.
ಭಾರತೀಯ ಸಂಗೀತ ಸಂಯೋಜಕ ರಿಕ್ಕಿ ಕೇಜ್ ಜಗತ್ತಿನಾದ್ಯಂತ ಪ್ರಸಿದ್ಧರಾಗಿದ್ದು ಸಾವಿರಾರೂ ಕಾರ್ಯಕ್ರಮಗಳ್ನು ನೀಡಿದ್ದಾರೆ ಅದರಲ್ಲಿ ಪ್ರಮುಖವಾದದ್ದು United Nations Headquartersನಲ್ಲಿ ಕಾರ್ಯಕ್ರಮ ಕೊಟ್ಟಿದ್ದು. ಎಎನ್‌ಐ ನೀಡಿರುವ ಮಾಹಿತಿ ಪ್ರಕಾರ ರಿಕ್ಕಿ ತೇಜ್ ಸುಮಾರು 20 ದೇಶಗಳಲ್ಲಿ 100ಕ್ಕೂ ಹೆಚ್ಚು ಅವಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ಅವರ ಕೆಲಸ ಮತ್ತು ಪ್ರಶಸ್ತಿಗಳಿಂದೆ ರಿಕ್ಕಿ ಕೇಜ್‌ಗೆ United Nations Global Humanitarian Artist and Youth Icon of India ಎಂದು ಹೆಸರಿದಲಾಗಿದೆ.
2015ರಲ್ಲಿ ವಿಂಡ್ಸ್ ಆಫ್ ಸಂಸಾರ ಹಾಡಿಗೆ ಮೊದಲ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡರು. ನಿರೀಕ್ಷೆಗೂ ಮೀರಿದ ಜನಪ್ರಿಯತೆ ಪಡೆದುಕೊಂಡ ಈ ಹಾಡು ಯುಎಸ್ ಬಿಲ್ಬೋರ್ಡ್ ನ್ಯೂ ಆಲ್ಬ ಚಾರ್ಟ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು. ಇದೇ ಮೊದಲು ಭಾರತೀಯ ಮೂಲಕ ಸಂಗೀತ ಸಂಯೋಜಕ ಈ ರೀತಿ ಸಾಧನೆ ಮಾಡಿರುವುದು.
ಡಿವೈನ್ ಟೈಡ್ಸ್ ಆಲ್ಬಂನಲ್ಲಿ ಮಾನವಕುಲ ಮತ್ತು ಸುತ್ತಲಿನ ಪ್ರಪಂಚದ ಸ್ಥಿತಿಸ್ಥಾಪಕತ್ವಕ್ಕೆ ಗೌರವ ಸಲ್ಲಿಸಲು ಮಾಡಿರುವ ಹಾಡು. ಈ ಆಲ್ಬಂನಲ್ಲಿ ಒಟ್ಟು 9 ಹಾಡಿಗಳಿದೆ ಹಾಗೂ 8 ಮ್ಯೂಸಿಕ್ ವಿಡಿಯೋಗಳಿದೆ, ವಿಶ್ವಾದ್ಯಂತ ಚಿತ್ರೀಕರಣ ಮಾಡಲಾಗಿದೆ. ಕಣ್ಣು ಸೆಳೆಯುವ ದೃಶ್ಯ ಅಂದರೆ ಭಾರತದ ಹಿಮಾಲಯ ಮತ್ತು ಸ್ಪೇನ್‌ನ ಕಾಡುಗಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.