ಪತ್ನಿಗೆ ಡೈವೋರ್ಸ್‌ ಕೊಟ್ಟ 'ಮಹಾಭಾರತದ ಯುಧಿಷ್ಠಿರ', 16 ವರ್ಷದ ದಾಂಪತ್ಯ ಬದುಕು ಅಂತ್ಯ!

Published : Apr 03, 2022, 06:00 AM ISTUpdated : Apr 03, 2022, 07:55 AM IST
ಪತ್ನಿಗೆ ಡೈವೋರ್ಸ್‌ ಕೊಟ್ಟ 'ಮಹಾಭಾರತದ ಯುಧಿಷ್ಠಿರ', 16 ವರ್ಷದ ದಾಂಪತ್ಯ ಬದುಕು ಅಂತ್ಯ!

ಸಾರಾಂಶ

* ಪ್ರಸಿದ್ಧ ಧಾರಾವಾಹಿ 'ಮಹಾಭಾರತ'ದಲ್ಲಿ 'ಯುಧಿಷ್ಠಿರ' ಪಾತ್ರವನ್ನು ನಿರ್ವಹಿಸಿದ ನಟ ರೋಹಿತ್ ಭಾರದ್ವಾಜ್ * ಪತ್ನಿಗೆ ವಿಚ್ಛೇದನ ನೀಡಿದ ರೋಹಿತ್ * ತನ್ನ ಹೆಂಡತಿ ಪೂನಂ ಭಾರದ್ವಾಜ್‌ರಿಂದ ಬೇರ್ಪಡುತ್ತಿರುವುದಾಗಿ ಹೇಳಿದ ನಟ

ಮುಂಬೈ(ಏ.03): ಪ್ರಸಿದ್ಧ ಧಾರಾವಾಹಿ 'ಮಹಾಭಾರತ'ದಲ್ಲಿ 'ಯುಧಿಷ್ಠಿರ' ಪಾತ್ರವನ್ನು ನಿರ್ವಹಿಸಿದ ನಟ ರೋಹಿತ್ ಭಾರದ್ವಾಜ್ ಪ್ರಸ್ತುತ ಹೊರ ಜಗತ್ತಿನಿಂದ ನಾಪತ್ತೆಯಾದಂತಿದ್ದಾರೆ, ಆದರೆ ಅವರ ಅಭಿಮಾನಿಗಳು ಅವರನ್ನು ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ. ಅಷ್ಟಕ್ಕೂ ರೋಹಿತ್ ಪ್ರೊಫೆಷನಲ್ ಲೈಫ್ ನಲ್ಲಿ ಅಪ್ ಡೇಟ್ ಆಗದೇ ಇರುವುದಕ್ಕೆ ಕಾರಣವೇನು? ಬಂದಿರುವ ಮಾಹಿತಿ ಪ್ರಕಾರ ರೋಹಿತ್ ಜೀವನದಲ್ಲಿ ದಾಂಪತ್ಯ ಮುರಿದು ಬಿದ್ದಿದೆ. ಹೌದು ಖ್ಯಾತ ಕಿರುತೆರೆ ನಟ ತನ್ನ ಹೆಂಡತಿ ಪೂನಂ ಭಾರದ್ವಾಜ್‌ರಿಂದ ಬೇರ್ಪಡುತ್ತಿರುವುದಾಗಿ ಹೇಳಿದ್ದಾರೆ. ಈ ಮೂಲಕ ಹದಿನಾರು ವರ್ಷಗಳ ಇವರ ದಾಂಪತ್ಯ ಜೀವನ ಕೊನೆಯಾಗಿದೆ.

ಬಾಂಬೆ ಟೈಮ್ಸ್‌ನ ವರದಿಯ ಪ್ರಕಾರ, ರೋಹಿತ್ ಫೆಬ್ರವರಿ 2021 ರಲ್ಲಿ ತನ್ನ ತಾಯಿಯನ್ನು ಕಳೆದುಕೊಂಡಿದ್ದರು. ತನ್ನ ತಾಯಿಯ ಹಠಾತ್ ನಿಧನದ ದುಃಖದಲ್ಲಿದ್ದಾಗಲೇ ತನ್ನ ವಿಚ್ಛೇದನದ ಪ್ರಕ್ರಿಯೆಗಳೂ ಮುಂದುವರೆದಿವೆ. ವರದಿಯ ಪ್ರಕಾರ, ರೋಹಿತ್ 2017 ರಲ್ಲಿ ಇಂಡೋನೇಷ್ಯಾದಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಕೆಲವು ಯೋಜನೆಗಳಲ್ಲಿ ಕೆಲಸ ಮಾಡಿದರು. ಆದಾಗ್ಯೂ, ಅವರು ಹಿಂದಿರುಗಿದ ನಂತರ ವಿಷಯಗಳು ವಿಕೋಪಕ್ಕೆ ತಿರುಗಿದ್ದವೆನ್ನಲಾಗಿದೆ.

Mahabharata: ಮಹಾಭಾರತದ ರಹಸ್ಯಗಳು 100 ಎಪಿಸೋಡ್.. ಸಂಪ ಸಂವಾದ 

ಕಳೆದ ನಾಲ್ಕೈದು ವರ್ಷಗಳಿಂದ ಏಕಾಂಗಿಯಾಗಿದ್ದೇನೆ ಮತ್ತು ಆರಂಭದಿಂದಲೂ ಭಿನ್ನಾಭಿಪ್ರಾಯಗಳಿದ್ದವು, ಅದು ಉಲ್ಬಣಗೊಳ್ಳುತ್ತಲೇ ಇತ್ತು ಎಂದು ನಟ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಮಗಳಿಂದಲೂ ದೂರ

ರೋಹಿತ್ ಭಾರದ್ವಾಜ್  ತನ್ನ ಹೆಂಡತಿ ಜೊತತೆ ಮಾತನಾಡಿ ತಮ್ಮ ನಡುವಿನ ಭಿನ್ನಾಭಿಪ್ರಾಯ ಸರಿಪಡಿಸಲು ಯತ್ನಿಸಿದೆ. ಆದರೀ ಈ ಮದುವೆಯನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಸದ್ಯ ವಿಚ್ಚೇದನ ಪ್ರಕ್ರಿಯೆ ನಡೆಯುತ್ತಿದೆ ಎರಡು ತಿಂಗಳಲ್ಲಿ ಎಲ್ಲವೂ ಮುಗಿಯಲಿದೆ ಎಂದಿದ್ದಾರೆ. ದಂಪತಿಗೆ 10 ವರ್ಷದ ಮಗಳಿದ್ದು, ಇಬ್ಬರೂ ಬೇರ್ಪಟ್ಟ ನಂತರ ರೋಹಿತ್ ಮಗಳಿಂದಲೂ ದೂರವಾಗಿದ್ದರು ಎನ್ನಲಾಗಿದೆ. ಕಳೆದೆರಡು ವರ್ಷದಿಂದ ತಂದೆ ಮಗಳನ್ನು ಭೇಟಿಯಾಗಿಲ್ಲ ಎನ್ನಲಾಗಿದೆ. ತನ್ನ ತಾಯಿಯ ನಿಧನದ ನಂತರ ಒಬ್ಬಂಟಿಯಾಗಿರುವ ರೋಹಿತ್ ತಂದೆಯೊಂದಿಗೆ ಸಮಯ ಕಳೆಯಲು ಮುಂಬೈ ಮತ್ತು ದೆಹಲಿಗೆ ಓಡಾಟ ನಡೆಸುತ್ತಿರುತ್ತಾರೆ.

Curses of Mahabharata: ಮಹಾಭಾರತದ ನಾಲ್ಕು ಶಾಪಗಳು ಇಂದಿಗೂ ಇವೆಯಂತೆ! ಯಾವುವು ಗೊತ್ತೆ?

2021 ರಲ್ಲಿ ತಾಯಿಯ ಸಾವಿನಿಂದ ರೋಹಿತ್ ಕುಸಿದಿದ್ದರು

ರೋಹಿತ್‌ನ ಜೀವನದಲ್ಲಿ ಮದುವೆ ಮುರಿದುಬಿದ್ದ ನೋವು ಸಾಲಲಿಲ್ಲ ಎಂಬಂತೆ, 2021 ರಲ್ಲಿ ಅವರು ತನ್ನ ತಾಯಿಯನ್ನೂ ಕಳೆದುಕೊಂಡರು. ಇದರಿಂದ ಇನ್ನಷ್ಟು ಛಿದ್ರಗೊಂಡಿದ್ದೇನೆ ಎಂದು ರೋಹಿತ್ ಹೇಳಿದ್ದಾರೆ. ಅವರ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅದಕ್ಕೆ ರೋಹಿತ್, 'ನಾನು ಇನ್ನೂ ಈ ಆಘಾತದಿಂದ ಹೊರಬರುತ್ತಿದ್ದೇನೆ. ಈಗ ಒಂಟಿಯಾಗಿರುವ ನನ್ನ ತಂದೆಯೊಂದಿಗೆ ಸಮಯ ಕಳೆಯಲು ನಾನು ಮುಂಬೈ ಮತ್ತು ದೆಹಲಿ ನಡುವೆ ಪ್ರಯಾಣಿಸುತ್ತಿದ್ದೇನೆ. ”ವೈಯಕ್ತಿಕ ಜೀವನದಿಂದಾಗಿ ಇಂದು ತನ್ನ ವೃತ್ತಿಪರ ಜೀವನವೂ ಹಾಳಾಗಿದೆ ಎಂದು ನಟ ಹೇಳಿದರು. ಕೆಲವು ಒಳ್ಳೆ ಆಫರ್‌ಗಳಿದ್ದರೂ, ಕೊರೋನಾದಿಂದ ಒಪ್ಪಿಕೊಳ್ಳಲು ಆಗಲಿಲ್ಲ ಎಂದಿದ್ದಾರೆ. ಆದರೆ ರೋಹಿತ್ ಆತ್ಮವಿಶ್ವಾಸದಿಂದ ಮತ್ತು ಶೀಘ್ರದಲ್ಲೇ ದೊಡ್ಡ ಪ್ರಾಜೆಕ್ಟ್‌ನೊಂದಿಗೆ ಹಿಂತಿರುಗಗುವ ಭರವಸೆ ವ್ಯಕ್ತಪಡಿಸಿದ್ದಾರೆ. 

ರೋಹಿತ್ 'ನಾ ಬೋಲೆ ತುಮ್ ನಾ ಮೈನೆ ಕುಚ್ ಕಹಾ', 'ಲಾಲ್ ಇಷ್ಕ್', 'ಬಾತ್ ಹಮಾರಿ ಪಕ್ಕಿ ಹೈ' ಮುಂತಾದ ಕಾರ್ಯಕ್ರಮಗಳ ಭಾಗವಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!