ಖ್ಯಾತ ನಟ, ಎಂಪಿ, ಕೋಟಿ ಕೋಟಿ ಇದ್ರೂ, ತಳ್ಳೋ ಗಾಡೀಲಿ ಊಟ ಸವಿದ ಜಗ್ಗೇಶ್!

Published : Dec 15, 2025, 12:16 PM IST
ವActor Jaggesh

ಸಾರಾಂಶ

ಖ್ಯಾತ ನಟ ಹಾಗೂ ಸಂಸದ ಜಗ್ಗೇಶ್ ಅವರು ತಡರಾತ್ರಿ ಬೆಂಗಳೂರಿನ ಬಸವನಗುಡಿಯಲ್ಲಿ ತಳ್ಳುಗಾಡಿಯ ತಿಂಡಿ ಸವಿದಿದ್ದಾರೆ. ಈ ಅನುಭವವನ್ನು 'ಅಮ್ಮನ ಕೈತುತ್ತು' ಎಂದು ಬಣ್ಣಿಸಿ ಅವರು ಹಂಚಿಕೊಂಡ ವಿಡಿಯೋ, ಅವರ ಸರಳತೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಂಗಳೂರು (ಡಿ.15): ಖ್ಯಾತ ನಟ, ರಾಜ್ಯಸಭಾ ಸಂಸದ ಜಗ್ಗೇಶ್ ಅವರು ಸಾರ್ವಜನಿಕ ಜೀವನದಲ್ಲಿ ತಮ್ಮ ಸರಳತೆ ಮತ್ತು ನೇರ ನಡೆ-ನುಡಿಗಳಿಂದಲೇ ಗಮನ ಸೆಳೆಯುತ್ತಾರೆ. ಇದೀಗ ಅವರು ತಮ್ಮ 'ಎಕ್ಸ್' (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಜನರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಕೋಟಿ ಕೋಟಿ ಸಂಪಾದನೆ ಇದ್ದರೂ, ಅಧಿಕಾರದ ಉನ್ನತ ಸ್ಥಾನದಲ್ಲಿದ್ದರೂ, ರಸ್ತೆ ಬದಿಯ ತಳ್ಳುವ ಗಾಡಿಯ ತಿಂಡಿಯನ್ನು ಸವಿಯುವ ಮೂಲಕ ಅವರು 'ನವರಸ ನಾಯಕ' ಎನ್ನುವ ಬಿರುದಿನ ಜೊತೆಗೆ 'ಸರಳತೆಯ ನಾಯಕ' ಎನಿಸಿಕೊಂಡಿದ್ದಾರೆ.

ರಾತ್ರಿ 11 ಗಂಟೆಗೆ ತಳ್ಳುವ ಗಾಡಿಯಲ್ಲಿ ಭೋಜನ:

ಇತ್ತೀಚೆಗೆ ತಡರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ನಟ ಜಗ್ಗೇಶ್ ಅವರು ಬೆಂಗಳೂರಿನ ಬಸವನಗುಡಿಯಲ್ಲಿರುವ ರಾಮಕೃಷ್ಣ ಆಶ್ರಮದ ಮೂಲೆಯ ಬಳಿ ಇರುವ ಒಂದು ಸಣ್ಣ ತಳ್ಳುವ ಗಾಡಿಯ ಬಳಿ ಹೋಗಿ ತಿಂಡಿ ಸವಿದಿದ್ದಾರೆ. ಅವರು ಸಾಮಾನ್ಯ ಜನರಂತೆ ಗಾಡಿಯ ಹಿಂದೆ ನಿಂತು, ಅಲ್ಲಿ ಮಾರಾಟ ಮಾಡುತ್ತಿದ್ದ ತಿಂಡಿಯನ್ನು ಅತ್ಯಂತ ಆನಂದದಿಂದ ಸೇವಿಸಿದ್ದು, ಈ ವಿಡಿಯೋವನ್ನು ಅವರೇ ತಮ್ಮ X (ಹಳೆಯ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಮ್ಮನ ಕೈತುತ್ತನ್ನು ನೆನೆದ ಜಗ್ಗೇಶ್:

ಈ ಸರಳ ಭೋಜನದ ಕುರಿತು ಜಗ್ಗೇಶ್ ಅವರು ಹಂಚಿಕೊಂಡಿರುವ ಮಾತುಗಳು ಎಲ್ಲರ ಹೃದಯವನ್ನು ಗೆದ್ದಿವೆ. ಅವರು ತಮ್ಮ ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ‘ಬಡವರ ಕೈ ರುಚಿಗೆ ಸಾಟಿ ಇಲ್ಲಾ! 11ಘಂಟೆ ರಾತ್ರಿಯಲ್ಲಿ ಹಸಿದ ಹೊಟ್ಟೆಗೆ ಮೃಷ್ಟಾನ್ನ ಭೋಜನ ಸವಿದ ಆನಂದ ಅಮ್ಮನ ಕೈತುತ್ತಿನ ಅನುಭವವಾಯಿತು.. ಬಸವನಗುಡಿ ರಾಮಕೃಷ್ಣ ಆಶ್ರಮದ ಮೂಲೆಯ ಈ ತಳ್ಳೋಗಾಡಿ ತಿಂಡಿ ಅದ್ಭುತ’ ಎಂದು ಅವರು ಹೇಳಿದ್ದಾರೆ.

ಒಬ್ಬ ಪ್ರಭಾವಿ ರಾಜಕಾರಣಿ ಮತ್ತು ಖ್ಯಾತ ನಟನಾಗಿ, ಅವರು ಐಷಾರಾಮಿ ಹೋಟೆಲ್‌ಗಳನ್ನು ಬಿಟ್ಟು, ಬಡವರ ಕೈತುತ್ತಿನ ರುಚಿ ಕಂಡು, ತಮ್ಮ ತಾಯಿಯನ್ನು ನೆನೆದಿರುವುದು ಅವರ ಸಂಸ್ಕಾರ ಮತ್ತು ಬೇರುಗಳೊಂದಿಗಿನ ಬಾಂಧವ್ಯವನ್ನು ತೋರಿಸುತ್ತದೆ. ಬಡವರ ಕೈ ರುಚಿಗೆ ಸಾಟಿ ಇಲ್ಲ ಎಂದು ಹೇಳುವ ಮೂಲಕ ಅವರು ಬೀದಿಬದಿ ವ್ಯಾಪಾರಿಗಳ ಶ್ರಮ ಮತ್ತು ಅವರ ಆಹಾರದ ಗುಣಮಟ್ಟವನ್ನು ಗೌರವಿಸಿದ್ದಾರೆ.

ವೈರಲ್ ಆದ ವಿಡಿಯೋಗೆ ಭಾರೀ ಮೆಚ್ಚುಗೆ:

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಜಗ್ಗೇಶ್ ಅವರ ಸರಳತೆಗೆ ಎಲ್ಲರೂ ಶಹಬ್ಬಾಸ್ ಗಿರಿ ನೀಡಿದ್ದಾರೆ. 'ನಿಜವಾದ ಸ್ಟಾರ್ ಅಂದರೆ ಹೀಗಿರಬೇಕು, ಸಂಸದ ಸ್ಥಾನದಲ್ಲಿದ್ದರೂ ಇಂತಹ ಸರಳತೆ ಅಪರೂಪ, ನಿಮ್ಮ ನಡೆ ಅನೇಕರಿಗೆ ಸ್ಫೂರ್ತಿ' ಎಂದು ಅಭಿಮಾನಿಗಳು ಮತ್ತು ಸಾರ್ವಜನಿಕರು ಕಾಮೆಂಟ್ ಮಾಡಿದ್ದಾರೆ. ಕೋಟಿ ಕೋಟಿ ಗಳಿಸಿದರೂ, ತಮ್ಮ ಹಳೆಯ ದಿನಗಳನ್ನು ಮರೆಯದೆ, ಸಾಮಾನ್ಯ ಜನರ ನಡುವೆ ಬೆರೆಯುವ ನಟ ಜಗ್ಗೇಶ್ ಅವರ ಈ ನಡೆ ಕೇವಲ ಮೆಚ್ಚುಗೆಯಷ್ಟೇ ಅಲ್ಲದೆ, ಪ್ರಸ್ತುತ ಸಮಾಜಕ್ಕೆ ಒಂದು ದೊಡ್ಡ ಸಂದೇಶವನ್ನೂ ನೀಡಿದೆ. ಜನಸಾಮಾನ್ಯರ ಜೀವನ ಶೈಲಿ ಮತ್ತು ರುಚಿಯ ಬಗ್ಗೆ ಅವರು ಇಟ್ಟುಕೊಂಡಿರು ಗೌರವವು ಅವರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!
ಬಿದ್ದುಬಿದ್ದೂ ನಗುವಂತೆ 'ಆಭಾಸ' ಸೃಷ್ಟಿಸಿದ ತೆಲುಗು ಸಿನಿಮಾದಿಂದ ಕನ್ನಡಕ್ಕೆ 'ಡಬ್' ಆಗಿರೋ ಹಾಡು; ಏನ್ ಗುರೂ ಇದೂ..!?