
ಬೆಂಗಳೂರು (ನ. 15): ವರನಟ ಡಾ.ರಾಜಕುಮಾರ್ ಸಹೋದರಿ ನಾಗಮ್ಮ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ನಗರದ ಜೆಎಸ್ಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅನಾರೋಗ್ಯದ ವಿಚಾರ ತಿಳಿಯುತ್ತಿದ್ದಂತೆ ನಟ ರಾಘವೇಂದ್ರ ರಾಜ್ ಕುಮಾರ್ ಪತ್ನಿ ಆಸ್ಪತ್ರೆಗೆ ಭೇಟಿ ನೀಟಿ ಆರೋಗ್ಯ ವಿಚಾರಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಇಂದು ಬೆಂಗಳೂರಿಗೆ ಶೀಫ್ಟ್ ಮಾಡುವ ಸಾಧ್ಯತೆ ಇದೆ.
'ತಲೈವಿ'ಯಾಗಲು 'ಕ್ವೀನ್' ರೆಡಿ; ತಮಿಳು ಕಲಿಯಲು ಶುರು ಮಾಡಿದ್ದಾರೆ ಕಂಗನಾ!
ನಾಗಮ್ಮ ಚಾಮರಾಜನಗರ-ತಮಿಳುನಾಡು ಗಡಿ ಭಾಗದಲ್ಲಿರುವ ಗಾಜನೂರಿನಲ್ಲಿ ವಾಸವಿದ್ದರು. ರಾಜ್‌ಗೆ ಬೆನ್ನೆಲುಬಾಗಿ ನಿಂತಿದ್ದು ಸಹೋದರಿ ನಾಗಮ್ಮ. ರಾಜ್ ಅವರದ್ದು ತುಂಬು ಕುಟುಂಬ. ಪಾರ್ವತಮ್ಮ ಸಿನಿಮಾ ಶೂಟಿಂಗ್, ಗಂಡನನ್ನು ನೋಡಿಕೊಳ್ಳುವುದು, ಬೇರೆ ವ್ಯವಹಾರಗಳನ್ನು ನಿಭಾಯಿಸುವುದರಲ್ಲಿ ಬ್ಯುಸಿಯಾಗಿದ್ದರೆ ತಂಗಿ ನಾಗಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.