
ನವದೆಹಲಿ (ನ. 07): ಅಬಿಶ್ ಮ್ಯಾಥ್ಯು ನಡೆಸಿಕೊಡುವ ‘ಯೂಟ್ಯೂಬ್ ಚಾಟ್ ಶೋ’ ವೇಳೆ ಮಗುವಿನ ಕುರಿತಾದ ಅವಹೇಳನಾಕಾರಿ ಹೇಳಿಕೆ, ನಟಿ ಸ್ವರಾ ಭಾಸ್ಕರ್‌ರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ವರಾ ವಿರುದ್ಧ 2 ಪ್ರತ್ಯೇಕ ದೂರುಗಳು ದಾಖಲಾಗಿವೆ.
ಛೀ.. ಛೀ.. ಈ ಆಂಟಿ ಅಂದವನಿಗೆ 'ಆ' ಪದ ಬಳಸಿದ ಸ್ವರಾಗೆ ಮಂಗಳಾರತಿ!
ಚಾಟ್ ಶೋ ವೇಳೆ ಸ್ವರಾ ಭಾಸ್ಕರ್ ಅವರು, ತಾವು ಜಾಹೀರಾತು ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದ ದಿನಗಳನ್ನು ಮೆಲುಕು ಹಾಕುತ್ತಿದ್ದರು. ಈ ವೇಳೆ, 4 ವರ್ಷದ ಮಗುವಿನ ಜೊತೆ ಸೋಪ್ ಜಾಹೀರಾತಿನ ಶೂಟಿಂಗ್‌ನಲ್ಲಿ ಭಾಗವಹಿಸಬೇಕಿತ್ತು. ಈ ಸಂದರ್ಭದಲ್ಲಿ ಆ ಮಗು ತಮ್ಮನ್ನು ಉದ್ದೇಶಿಸಿ ಆಂಟಿ ಎಂದು ಕರೆಯಿತು. ಇದು ತಮಗೆ ತೀರಾ ಇರಿಸು-ಮುರಿಸು ಮಾಡಿತ್ತು. ಅಲ್ಲದೆ, ಮಕ್ಕಳ ಈ ರೀತಿಯ ವರ್ತನೆಯು ಪೀಡೆ ಮತ್ತು ಅಪಶಕುನಗಳಾಗಿವೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಸ್ವರ ವಿರುದ್ಧ ಕೇಸ್ ದಾಖಲಾಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.