ಬಾಲಿವುಡ್ ಸ್ಟಾರ್ಸ್- ಮೋದಿ ಭೇಟಿ; ಪ್ರವಾಸೋದ್ಯಮ ಪ್ರೋತ್ಸಾಹಿಸಲು ಮನವಿ ಮಾಡಿದ ಪ್ರಧಾನಿ!

By Kannadaprabha NewsFirst Published Oct 20, 2019, 2:33 PM IST
Highlights

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ಮತ್ತಷ್ಟುಸ್ಮರಣೀಯವಾಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶಾರುಖ್‌ ಖಾನ್‌, ಅಮೀರ್‌ ಖಾನ್‌ ಸೇರಿದಂತೆ ಬಾಲಿವುಡ್‌ ನಟ- ನಟಿಯರು ಹಾಗೂ ನಿರ್ದೇಶಕರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದಾರೆ.

ನವದೆಹಲಿ (ಅ. 20): ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ಮತ್ತಷ್ಟುಸ್ಮರಣೀಯವಾಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶಾರುಖ್‌ ಖಾನ್‌, ಅಮೀರ್‌ ಖಾನ್‌ ಸೇರಿದಂತೆ ಬಾಲಿವುಡ್‌ ನಟ- ನಟಿಯರು ಹಾಗೂ ನಿರ್ದೇಶಕರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದಾರೆ.

ದೆಹಲಿಯ ತಮ್ಮ ನಿವಾಸದಲ್ಲಿ ಚಲನಚಿತ್ರ ಹಾಗೂ ಟೀವಿ ಉದ್ಯಮದ ಪ್ರಮುಖರನ್ನು ಭೇಟಿ ಮಾಡಿದ ಮೋದಿ ಅವರು, ಚಿತ್ರೋದ್ಯಮದ ಹಲವು ಮಂದಿ ಸಾಕಷ್ಟುಸಲಹೆಗಳೊಂದಿಗೆ ಬಂದಿದ್ದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

Latest Videos

ಕೇರಳ ಚಿತ್ರೋತ್ಸವಕ್ಕೆ ಬರಗೂರು ಸಿನಿಮಾ ' ಬಯಲಾಟದ ಭೀಮಣ್ಣ'

ದೇಶದಲ್ಲಿನ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವಂತೆ ಇದೇ ವೇಳೆ ಚಿತ್ರನಟರಲ್ಲಿ ಮನವಿ ಮಾಡಿದ ಮೋದಿ ಅವರು, ಗುಜರಾತ್‌ನಲ್ಲಿರುವ ದಂಡಿ ಮ್ಯೂಸಿಯಂ ಹಾಗೂ ಏಕತಾ ಪ್ರತಿಮೆಯನ್ನು ವೀಕ್ಷಿಸಲು ಸಲಹೆ ಮಾಡಿದರು. ತಮಿಳುನಾಡಿನ ಮಾಮಲ್ಲಪುರಂನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆ ಅನೌಪಚಾರಿಕ ಶೃಂಗ ಸಭೆ ನಡೆಸಿದ ತಾವು ಬಳಿಕ ಅಲ್ಲಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದನ್ನು ತಮಿಳುನಾಡಿನ ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ತಿಳಿಸಿದ್ದಾರೆ ಎಂದು ಮೋದಿ ವಿವರಿಸಿದರು.

ಈ ವೇಳೆ ಮಾತನಾಡಿದ ಅಮೀರ್‌ ಖಾನ್‌, ಸೃಜನಶೀಲ ವ್ಯಕ್ತಿಗಳಾಗಿ ನಾವು ಮಾಡುವುದು ಸಾಕಷ್ಟಿದೆ. ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ಭರವಸೆ ನೀಡುತ್ತೇನೆ ಎಂದು ಹೇಳಿದರು. ಗಾಂಧೀಜಿ ಅವರನ್ನು ಭಾರತ ಹಾಗೂ ಪ್ರಪಂಚಕ್ಕೆ ಮರುಪರಿಚಯಿಸುವ ಅಗತ್ಯವಿದೆ ಎಂದು ಶಾರುಖ್‌ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಪ್ರಧಾನಿ ಕಾರ್ಯಾಲಯ ಹೇಳಿಕೆ ಬಿಡುಗಡೆ ಮಾಡಿದೆ.

ದೆಹಲಿಯ ತಮ್ಮ ಅಧಿಕೃತ ನಿವಾಸಕ್ಕೆ ಚಿತ್ರೋದ್ಯಮದ ಗಣ್ಯರನ್ನು ಆಹ್ವಾನಿಸಿ ಗಾಂಧೀಜಿಯವರ ಕೆಲಸಗಳನ್ನು ಮತ್ತಷ್ಟುಜನಪ್ರಿಯಗೊಳಿಸಲು ಸಲಹೆಗಳನ್ನು ಪಡೆದಿದ್ದಾರೆ. ಭೇಟಿ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ಕಾರ್ಯಾಲಯ ತಾರೆಗಳು ವಿಭಿನ್ನ ಚಿಂತನೆಗಳಿಂದ ಬಂದಿದ್ದರು. ನಮ್ಮ ಚಲನಚಿತ್ರ ತಾರೆಗಳು ಮಾಡಿದ ಅದ್ಭುತ ಕೆಲಸಗಳು ಜನರಿಗೆ ಇಷ್ಟವಾಗಲಿದೆ ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಬಾಡಿಗಾರ್ಡ್ ಶಿವಸೇನೆಗೆ ಸೇರ್ಪಡೆ

ಅಲ್ಲದೇ ಗಾಂಧಿ ಮಾತನ್ನು ಉಲ್ಲೇಖಿಸಿ, ಸೃಜನಶೀಲತೆಯ ಶಕ್ತಿ ಅಪಾರವಾಗಿದ್ದು, ದೇಶ ಈ ಸೃಜನಶೀಲತೆಯ ಮನೋಭಾವವನ್ನು ಬಳಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದ್ದಾರೆ. ಸಭೆಯಲ್ಲಿ ಬಾಲಿವುಡ್‌ ನಟರಾದ ಶಾರುಖ್‌ ಖಾನ್‌, ಸಲ್ಮಾನ್‌ ಖಾನ್‌, ಸೋನಂ ಕಪೂರ್‌, ಕಂಗನಾ ರನೌತ್‌, ನಿರ್ದೇಶಕರಾದ ರಾಜ್‌ಕುಮಾರ್‌ ಹಿರಾನಿ, ರಾಜ್‌ಕುಮಾರ್‌ ಸಂತೋಶಿ, ಅಶ್ವಿನಿ ಅಯ್ಯರ್‌ ತಿವಾರಿ, ನಿತೇಶ್‌ ತಿವಾರಿ ಮತ್ತು ನಿರ್ಮಾಪಕರಾದ ಏಕ್ತಾ ಕಪೂರ್‌, ಬೋನಿ ಕಪೂರ್‌ ಮತ್ತು ಜಯಂತಿಲಾಲ್ ಗಡಾ ಉಪಸ್ಥಿತರಿದ್ದರು.

click me!