ರೀಲ್ಸ್ ರಾಣಿ ಎಂದೇ ಖ್ಯಾತಿ ಪಡೆದಿದ್ದ 9 ವರ್ಷದ ಬಾಲಕಿ ಪಾಲಕರ ನಿಂದನೆಗೆ ಬೇಸರ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆತಂಕಕಾರಿ ಘಟನೆ ಚೆನ್ನೈನಲ್ಲಿ ನಡೆದಿದೆ.
ಚೆನ್ನೈ: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ ಮಾಡುವ ಮೂಲಕ ಖ್ಯಾತಿ ಗಳಿಸಿದ್ದ ಚೆನ್ನೈನ ತಿರುವಳ್ಳೂರು ಜಿಲ್ಲೆಯ ಒಂಬತ್ತು ವರ್ಷದ ಬಾಲಕಿಯೊಬ್ಬಳು ಮಂಗಳವಾರ ರಾತ್ರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ. ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದ ಪ್ರತೀಕ್ಷಾ (Pratiksha) ಕಳೆದ ಆರು ತಿಂಗಳಲ್ಲಿ ಸುಮಾರು 70 ರೀಲ್‌ಗಳನ್ನು ಮಾಡಿ ಫೇಮಸ್ ಆಗಿದ್ದಳು. ಈ ಹಿನ್ನೆಲೆಯಲ್ಲಿ ಸ್ನೇಹಿತರು ಮತ್ತು ನೆರೆಹೊರೆಯವರು ಈಕೆಯನ್ನು 'ರೀಲ್ಸ್ ಕ್ವೀನ್' ಎಂದೇ ಕರೆಯುತ್ತಿದ್ದರು. ಪ್ರತೀಕ್ಷಾ ಚಿಕ್ಕಂದಿನಿಂದಲೂ ಸಿನಿಮಾದಲ್ಲಿ ಬರುವ ಹಾಸ್ಯ ದೃಶ್ಯಗಳಿಗೆ ಡೈಲಾಗ್‌ಗಳನ್ನು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕುತ್ತಿದ್ದಳು. ಸಿನಿಮಾ ಹಾಡುಗಳಿಗೆ ಅದೇ ರೀತಿಯ ಮುಖಭಾವದೊಂದಿಗೆ ನೃತ್ಯ ಮಾಡಿ ವಿಡಿಯೋ ಶೇರ್ ಮಾಡುತ್ತಿದ್ದಳು. ಇನ್‌ಸ್ಟಾಗ್ರಾಮ್‌ನಲ್ಲಿ (Instagram) ತನ್ನದೇ ಆದ ಪುಟ ಪ್ರಾರಂಭಿಸಿದ್ದಳು, ಅದರಲ್ಲಿ ಸಾಕಷ್ಟು ಅನುಯಾಯಿಗಳನ್ನು ಪಡೆದಿದ್ದಳು. ಚಲನಚಿತ್ರ ಹಾಡುಗಳು, ಹಳ್ಳಿಗಾಡಿನ ಹಾಡುಗಳು ಮತ್ತು ಪ್ರೇಮಗೀತೆಗಳಿಗೆ ನೃತ್ಯ ಮಾಡುವಲ್ಲಿ ಈಕೆಯ ಸಕತ್ ಹೆಸರುವಾಸಿಯಾಗಿದ್ದಳು.
ಆದರೆ ಕಳೆದ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಪ್ರತೀಕ್ಷಾ ಪಕ್ಕದ ಬೀದಿಯಲ್ಲಿರುವ ಅಜ್ಜಿಯ (Grandparents) ಮನೆಯ ಮುಂದೆ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಳು. ಆಕೆಯ ಪಾಲಕರಾದ ಕೃಷ್ಣಮೂರ್ತಿ ಮತ್ತು ಕರ್ಪಗಂ ಅಲ್ಲಿಗೆ ಬಂದರು. ರಾತ್ರಿಯಾದರೂ ಆಟವಾಡುತ್ತಿದ್ದುದನ್ನು ನೋಡಿ ಆಕೆಗೆ ಬೈದಿದ್ದಾರೆ. ಇದು ಪ್ರತೀಕ್ಷಾಳ ನೋವಿಗೆ ಕಾರಣವಾಗಿದೆ ಎನ್ನಲಾಗಿದೆ. ಆಕೆ ಸ್ನೇಹಿತರ ಜೊತೆ ಆಟವಾಡುತ್ತಿದ್ದಳು. ಅವರ ಎದುರೇ ಬೈದಿದ್ದಕ್ಕೆ ಪ್ರತೀಕ್ಷಾಗೆ ಇನ್ಸಲ್ಟ್ ಆಗಿದೆ. ಇದರಿಂದ ಆಕೆ ಖಿನ್ನತೆಗೆ ಜಾರಿದ್ದಾಳೆ. ಆದರೆ ಇದರ ಅರಿವು ಅಪ್ಪ-ಅಮ್ಮನಿಗೆ ಬರಲಿಲ್ಲ. ಅವರು ಮನೆಗೆ ಬಂದು ಓದುವಂತೆ ಹೇಳಿದ್ದಾರೆ. ಮನೆಯ ಕೀಲಿಕೈಯನ್ನು ಪ್ರತೀಕ್ಷಾಗೆ ಕೊಟ್ಟು ದ್ವಿಚಕ್ರವಾಹನದಲ್ಲಿ ಹೊರಟರು.
ಕಾರ್ಕಳ: ತಾಯಿ ನಿಧನದ ಸುದ್ದಿ ತಿಳಿದು ಪುತ್ರಿ ಆತ್ಮಹತ್ಯೆ
ಸುಮಾರು ಒಂದು ಗಂಟೆಯ ನಂತರ ಅಪ್ಪ-ಅಮ್ಮ ಇಬ್ಬರೂ ಮನೆಗೆ ಬಂದಾಗ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಆಗ ಕೃಷ್ಣಮೂರ್ತಿ ಬಾಗಿಲು ತಟ್ಟಿದರು. ಹಲವು ಬಾರಿ ಬಡಿದರೂ ಬಾಗಿಲು ತೆರೆದಿರಲಿಲ್ಲ. ಗಾಬರಿಗೊಂಡ ಕೃಷ್ಣಮೂರ್ತಿ ಮಲಗುವ ಕೋಣೆಯ ಕಿಟಕಿ ಒಡೆದು ಹೊರಗೆ ನೋಡಿದರು. ಆಗ ಬಾಲಕಿ ಪ್ರತೀಕ್ಷಾ ಕಿಟಕಿಯ ತಂತಿಗೆ ಬಿಳಿ ಬಟ್ಟೆಯ ಸಣ್ಣ ತುಂಡಿನಿಂದ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ. ತಕ್ಷಣ ಮನೆಯ ಮೇಲ್ಛಾವಣಿ ಮುರಿದು ಒಳ ನುಗ್ಗಿದ ಕೃಷ್ಣಮೂರ್ತಿ ಮಲಗುವ ಕೋಣೆಯ (Bed room) ಬಾಗಿಲು ಮುರಿದು ಬಾಲಕಿಯನ್ನು ರಕ್ಷಿಸಿ ತಕ್ಷಣ ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಬಾಲಕಿಗೆ ತೀವ್ರ ಚಿಕಿತ್ಸೆ ನೀಡಿದರಾದರೂ ಪ್ರತೀಕ್ಷಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಈ ನಡುವೆ 9 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ ಎಂದು ಅನುಮಾನಗೊಂಡ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆ ವೇಳೆ ಬಾಲಕಿ ಪ್ರತೀಕ್ಷಾ ಮಲಗುವ ಕೋಣೆಯಲ್ಲಿದ್ದ ಹಾಸಿಗೆ ಮೇಲೆ ಸಣ್ಣ ಸ್ಟೂಲ್ ಇಟ್ಟು ನೇಣು ಬಿಗಿದುಕೊಂಡಿದ್ದಾಳೆ. ಕಿಟಕಿಯ ತಂತಿಗೆ ಟವೆಲ್ ಕಟ್ಟಿಕೊಂಡು ಸ್ಟೂಲ್ನಿಂದ (Stool) ಜಿಗಿದಿದ್ದು, ಬಾಲಕಿ ಜೀವನ್ಮರಣ ಹೋರಾಟ ನಡೆಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.
ಬೆಂಗಳೂರು: ರಾಷ್ಟ್ರಪತಿಗೆ ಸುಳ್ಳು ದೂರು ಕೊಟ್ಟ ಪೇದೆ ತಲೆದಂಡ
ಹೊರಗೆ ಹೋಗಿದ್ದ ಕೃಷ್ಣಮೂರ್ತಿ (KrishnaMurthy) ತಕ್ಷಣ ಮನೆಗೆ ಬಂದಿದ್ದರೆ ಬಾಲಕಿಯನ್ನು ರಕ್ಷಿಸಬಹುದಿತ್ತು. ಆದರೆ ಒಂದು ಗಂಟೆಯ ನಂತರ ಬಂದಿದ್ದರಿಂದ ಬಾಲಕಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಸ್ನೇಹಿತರ ಜೊತೆ ಆಟವಾಡಿದ್ದಕ್ಕೆ ತಂದೆ ಛೀಮಾರಿ ಹಾಕಿದ್ದಕ್ಕೆ ಮನನೊಂದ ಬಾಲಕಿ ಪ್ರತೀಕ್ಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ.. ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆ ಬಂದಲ್ಲಿ ಕೂಡಲೇ 104 ಟೋಲ್ ಫ್ರೀ ಸಂಖ್ಯೆಗೆ ಸಂಪರ್ಕಿಸಿ. 9152987821 ರಲ್ಲಿ ಆತ್ಮಹತ್ಯೆ ತಡೆ ಕೇಂದ್ರ iCALL ಗೆ ಕರೆ ಮಾಡಿ ಎಂದು ಪೊಲೀಸರು ಹೇಳಿದ್ದಾರೆ.