ನಟಿ ಶೆರ್ಲಿನ್​ ಚೋಪ್ರಾ ವಿಡಿಯೋ ಲೀಕ್​ ಮಾಡಿದ ರಾಖಿ ಸಾವಂತ್​: ಹೈಕೋರ್ಟ್ ಹೇಳಿದ್ದೇನು?

By Suvarna News  |  First Published Mar 26, 2023, 1:10 PM IST

ಹಿಂದೊಮ್ಮೆ ಪತ್ರಿಕಾಗೋಷ್ಠಿಯಲ್ಲಿ ನಟಿ ಶೆರ್ಲಿನ್​ ಚೋಪ್ರಾ ಅವರ ಖಾಸಗಿ ವಿಡಿಯೋಗಳನ್ನು ನಟಿ ರಾಖಿ ಸಾವಂತ್​ ಬಿಡುಗಡೆ ಮಾಡಿದ್ದರು. ಇದರ ವಿಚಾರಣೆ ಕೈಗೆತ್ತಿಕೊಂಡ ಬಾಂಬೆ ಹೈಕೋರ್ಟ್​ ಹೇಳಿದ್ದೇನು? 
 


ನಗ್ನ ದೇಹ ಪ್ರದರ್ಶನದಿಂದಲೇ ಫೇಮಸ್​ ಆಗಿರುವ ನಟಿ  ಶೆರ್ಲಿನ್ ಚೋಪ್ರಾ (Sherlyn Chopra) ಗೊತ್ತಲ್ಲವೆ? ಈಕೆ ಮುನ್ನೆಲೆಗೆ ಬಂದದ್ದು ಡ್ರಾಮಾ ಕ್ವೀನ್​ ಖ್ಯಾತಿಯ ರಾಖಿ ಸಾವಂತ್ (Rakhi Sawant) ಅವರಿಂದಾಗಿ.  ರಾಖಿ ಮತ್ತು ಶೆರ್ಲಿನ್​ ಹಾವು- ಮುಂಗುಸಿ ಥರ ಇದ್ದು ಕೊನೆಗೊಂದು ದಿನ ಕ್ಲೋಸ್​ ಆಗಿದ್ದರು. ಆದರೆ ಇವರಿಬ್ಬರ ನಡುವೆ ಹಿಂದೊಮ್ಮೆ ಭಾರಿ ವಿವಾದವೇ ಸೃಷ್ಟಿಯಾಗಿ ಹೋಗಿತ್ತು. ಅದೇನೆಂದರೆ,  ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ಶೆರ್ಲಿನ್​ ಚೋಪ್ರಾ ಅವರು ತೊಡಗಿಕೊಂಡಿದ್ದರು ಎಂಬ ಆರೋಪ ಇದೆ. ಹಾಗೆಯೇ ಅವರು ಈ ಹಿಂದೆ ನಿರ್ದೇಶಕ ಸಾಜಿದ್​ ಖಾನ್​ ಮೇಲೆ ಮೀ ಟೂ ಆರೋಪ ಹೊರಿಸಿದ್ದರು. ಸಾಜಿದ್​ ಖಾನ್​ ಅವರನ್ನು ಸಲ್ಮಾನ್​ ಖಾನ್​ ರಕ್ಷಿಸುತ್ತಿದ್ದಾರೆ ಎಂದು ಶೆರ್ಲಿನ್​ ಚೋಪ್ರಾ ಹೇಳಿದ್ದರು. ಈ ವಿಚಾರದಲ್ಲಿ ತಲೆ ಹಾಕಿದ್ದ ರಾಖಿ ಸಾವಂತ್​ ಅವರು ಶೆರ್ಲಿನ್​ ವಿರುದ್ಧ ಮಾತನಾಡಿದ್ದರು. ಆಗ ರಾಖಿ ವಿರುದ್ಧ ಶೆರ್ಲಿನ್​ ಚೋಪ್ರಾ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ರಾಖಿ ಸಾವಂತ್​ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಶೆರ್ಲಿನ್​  ನೀಡಿದ್ದ ದೂರಿನ ಅನ್ವಯ ರಾಖಿ ಸಾವಂತ್​ ಅವರ ಬಂಧನ ಆಗಿತ್ತು.  

ಇವೆಲ್ಲವುಗಳ ನಡುವೆ ನಂತರ ನಾಟಕೀಯ ಬೆಳವಣಿಗೆ ನಡೆದಿತ್ತು. ಇಬ್ಬರೂ ಫ್ರೆಂಡ್ಸ್​ ಆಗಿದ್ದರು. ಇದಕ್ಕೆ ಕಾರಣ, ರಾಖಿ ಅವರು ತಮ್ಮ ಪತಿ ಆದಿಲ್​ ಖಾನ್​ (Adil Khan) ವಿರುದ್ಧ ದೂರು ದಾಖಲಿಸಿ ಅವರನ್ನು ಜೈಲಿಗೆ ಅಟ್ಟಿದ್ದು ಸರಿಯಿದೆ ಎಂದು  ಶೆರ್ಲಿನ್​ ಬೆಂಬಲಿಸಿದ್ದರು.  ಈ ಹಿನ್ನೆಲೆಯಲ್ಲಿ ಇವರಿಬ್ಬರು ಹಲವು ಬಾರಿ ಒಬ್ಬರನ್ನೊಬ್ಬರು ತಬ್ಬಿಕೊಂಡು, ಕೆನ್ನೆಗೆ ಮುತ್ತಿಟ್ಟು, ಕೇಕ್ ಕಟ್ ಮಾಡಿ ತಮ್ಮ ಸ್ನೇಹವನ್ನು ಸಂಭ್ರಮಿಸಿರುವ ವಿಡಿಯೋ ವೈರಲ್​ ಆಗಿತ್ತು. ಆದಿಲ್ ತನ್ನ ಒಪ್ಪಿಗೆಯಿಲ್ಲದೆ ತನ್ನ ಹಣವನ್ನು ತೆಗೆದುಕೊಂಡಿದ್ದಾನೆ, ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳವನ್ನು ಆರೋಪಿಸಿ ರಾಖಿ ಆದಿಲ್ ವಿರುದ್ಧ ಎಫ್ಐಆರ್ ದಾಖಲಿದ್ದು ಸರಿಯಿದೆ ಎಂದು ಶೆರ್ಲಿನ್​ ಹೇಳಿದ್ದಾರೆ.

Tap to resize

Latest Videos

ನೆನಪಿರಲಿ... ಇದೇ ಶೆರ್ಲಿನ್​, ಕೆಲ ದಿನಗಳ ಹಿಂದೆ  ರಾಖಿಯ ಚೇಷ್ಟೆಗಳಿಗೆ ಆದಿಲ್  ಬಲಿಯಾದ ಎಂದು ಹೇಳಿದ್ದರು.  ಇಬ್ಬರೂ ತಬ್ಬಿ ಮುದ್ದಾಡಿದ ಬಳಿಕ ರಾಖಿ,  'ಶೆರ್ಲಿನ್ ನನ್ನ ತುಂಬಾ ಹಳೆಯ ಸ್ನೇಹಿತೆ. ನಿಸ್ಸೇಂದಹವಾಗಿಯೂ ನಮ್ಮ ವಿರುದ್ಧ ಸ್ವಲ್ಪ ಸ್ವಲ್ಪ ಏನೋ ಭಿನ್ನಾಭಿಪ್ರಾಯ ಬಂದಿತ್ತು. ನಾನು ಈ ವಿಚಾರದಲ್ಲಿ ನನ್ನ ಸಹೋದರ ಬಳಿ ಕ್ಷಮೆ ಕೋರುತ್ತೇನೆ' ಎಂದಿದ್ದರು.

ಗಂಡ ಜೈಲಿಗೆ ಹೋಗ್ತಿದ್ದಂತೆ ಬದ್ಧ ವೈರಿಯನ್ನು ತಬ್ಬಿ ಮುದ್ದಾಡಿದ ರಾಖಿ ಸಾವಂತ್​!

ಇದೆಲ್ಲ ಬೆಳವಣಿಗೆಗೆ ನಡುವೆ ಈಗ ಇನ್ನೊಂದು ಕುತೂಹಲದ ಘಟನೆ ನಡೆದಿದೆ.  ಅದೇನೆಂದರೆ,  ಬಾಂಬೆ ಹೈಕೋರ್ಟ್ ಸಾರ್ವಜನಿಕರ ಬಳಿ ಲಭ್ಯವಿರುವ ಶೆರ್ಲಿನ್ (Sherlyn Chopra) ಅವರ ಎಲ್ಲಾ ಆಕ್ಷೇಪಾರ್ಹ ವೀಡಿಯೊಗಳನ್ನು ಅಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ.  ಇದರ ವಿಚಾರಣೆ ಇಂದು ಕೋರ್ಟ್​ ಮುಂದೆ ಬಂದಿತ್ತು. ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು, ರಾಖಿ ಅವರ ವಕೀಲರನ್ನು ಉದ್ದೇಶಿಸಿ ಈ ವಿಡಿಯೋಗಳನ್ನು ಮಾಧ್ಯಮಗಳಿಗೆ ತೋರಿಸಿದ್ದು ಸರಿಯಿಲ್ಲ.  

ನೈತಿಕ ಮಾನದಂಡಗಳನ್ನು ಕಾಯ್ದುಕೊಳ್ಳಬೇಕು ಎಂದಿದ್ದಾರೆ ಎನ್ನಲಾಗಿದೆ.  ಪ್ರೆಸ್ ಮೀಟ್‌ನಲ್ಲಿ ತೋರಿಸಿರುವ ಯಾವುದೇ ವೀಡಿಯೊಗಳು ಮಂಗಳವಾರದೊಳಗೆ ಯೂಟ್ಯೂಬ್‌ನಲ್ಲಿವೆಯೇ ಎಂಬ ಬಗ್ಗೆ ಅಪ್‌ಡೇಟ್ ನೀಡುವಂತೆ ಮುಂಬೈ ಪೊಲೀಸರಿಗೆ ಕೋರ್ಟ್​ ಸೂಚಿಸಿದೆ. ವಿಡಿಯೋ ಡಿಲೀಟ್​ ಮಾಡಲು  ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸುವಂತೆ ನಿರ್ದೇಶಿಸಲಾಗಿದೆ.

ವಿಚಾರಣೆಯ ವೇಳೆ ರಾಖಿ ಸಾವಂತ್ ಪರ ವಕೀಲರು, ವಿಚಾರಣಾ ನ್ಯಾಯಾಲಯವು (Trial Court) ಅಶ್ಲೀಲ ವೀಡಿಯೊಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ನಟಿಯ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 67 ಎ ಅನ್ನು ಮಾತ್ರ ವಿಧಿಸಿದೆ ಎಂದು ವಿವರಣೆ ನೀಡಿದ್ದಾರೆ.  ಈ ಸಂದರ್ಭದಲ್ಲಿ, ರಾಖಿ ಸಾವಂತ್ ಈ ವಿಡಿಯೋಗಳನ್ನು  ಮಾಧ್ಯಮಗಳಿಗೆ ಲೀಕ್ ಮಾಡಿದ್ದಾರೆಯೇ ಎಂದು ನ್ಯಾಯಾಲಯವು ಶೆರ್ಲಿನ್ ಅವರ ವಕೀಲರನ್ನು ಪ್ರಶ್ನಿಸಿದೆ.  

ಮೊದಲ ರೋಜಾದ ವೀಡಿಯೋ ಶೇರ್ ಮಾಡಿದ ರಾಖಿ ಸಾವಂತ್, ಕಾಲೆಳೆದ ನೆಟ್ಟಿಗರು!

ಮಾಧ್ಯಮಗಳು ಇದನ್ನೆಲ್ಲ ಪ್ರಸಾರ ಮಾಡಿವೆ ಎಂದು ಎಫ್‌ಐಆರ್‌ನಲ್ಲಿ ಹೇಳಿಲ್ಲ, ಎಫ್‌ಐಆರ್ ಪ್ರಕಾರ ಈ ಎಲ್ಲಾ ವಿಡಿಯೋಗಳು ಈಗಾಗಲೇ ಯೂಟ್ಯೂಬ್‌ನಲ್ಲಿ ಲಭ್ಯವಿದೆ ಎಂದು ಶೆರ್ಲಿನ್​ ಪರ ವಕೀಲರು ಕೋರ್ಟ್​ ಗಮನಕ್ಕೆ ತಂದಿದ್ದಾರೆ.  ರಾಖಿ ಸಾವಂತ್ ಅವರು ಶೆರ್ಲಿನ್​ ಅವರು ಖಾಸಗಿ ವಿಡಿಯೋವನ್ನು ತೋರಿಸಿದ್ದು, ಅದು ಯೂಟ್ಯೂಬ್‌ನಲ್ಲಿ ಲಭ್ಯವಿಲ್ಲ ಎಂದರು. ಆದರೂ ಎಲ್ಲಿಯಾದರೂ ಈ ವಿಡಿಯೋ ಲಭ್ಯವಿದ್ದರೆ ಅದನ್ನು ಡಿಲೀಟ್ (Delete)​ ಮಾಡುವಂತೆ ಸೂಚಿಸಿದ ಕೋರ್ಟ್​,  ಹೆಚ್ಚಿನ ವಿವರಗಳನ್ನು ಸಂಗ್ರಹಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 28 ರಂದು ನಡೆಯಲಿದೆ. 

click me!