ತಂದೆಗೆ ಕೊರೋನಾ ನೆಗೆಟಿವ್, ಆರೋಗ್ಯ ಸ್ಥಿರವಾಗಿದೆ: ಎಸ್‌ಪಿಬಿ ಪುತ್ರನ ಸ್ಪಷ್ಟನೆ!

Published : Aug 24, 2020, 11:38 AM ISTUpdated : Aug 24, 2020, 11:46 AM IST
ತಂದೆಗೆ ಕೊರೋನಾ ನೆಗೆಟಿವ್, ಆರೋಗ್ಯ ಸ್ಥಿರವಾಗಿದೆ: ಎಸ್‌ಪಿಬಿ ಪುತ್ರನ ಸ್ಪಷ್ಟನೆ!

ಸಾರಾಂಶ

ಕಳೆದ 19 ದಿನಗಳಿಂದ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್‌ಪಿಬಿ| ಎಸ್‌. ಪಿ. ಬಾಲಸುಬ್ರಹ್ಮಣ್ಯಂ ಕೊರೋನಾ ವರದಿ ನೆಗೆಟಿವ್| ಮಾಹಿತಿಯನ್ನು ಖಚಿತಪಡಿಸಿದ ಪುತ್ರ

ಚೆನ್ನೈ(ಆ.24): ಕಳೆದ 19 ದಿನಗಳಿಂದ ಚೆನ್ನೈನ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆ ಪಡೆಯುತ್ತಿರುವ ಎಸ್‌. ಪಿ. ಬಾಲಸುಬ್ರಹ್ಮಣ್ಯಂ ವರದಿ ನೆಗೆಟಿವ್ ಬಂದಿದ್ದು, ಅಭಿಮಾನಿಗಳಿಗೆ ಸಂತಸ ನೀಡಿದೆ. ಸದ್ಯ ಎಸ್‌ಪಿಬಿ ಪುತ್ರ ಪುತ್ರರೂ ಮಾಧ್ಯಮ ಪ್ರಕಟಣೆ ಮೂಲಕ ಈ ಮಾಹಿತಿಯನ್ನು ಖಚಿತಪಡಿಸಿದ್ದು, ತಂದೆ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ.

"

ಹೌದು ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆ ಆಗಸ್ಟ್ 5ರಂದು ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ಎಸ್‌ಪಿಬಿ ಆರೋಗ್ಯ ಸ್ಥಿತಿ ದಿನೇ ದಿನೇ ಬಿಗಡಾಯಿಸಿತ್ತು. ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಇದು ಅವರ ಅಭಿಮಾನಿಗಳನ್ನು ಆತಂಕಕ್ಕೀಡು ಮಾಡಿತ್ತು. ಆದರೀಗ ವೈದ್ಯ ಲೋಕದ ಎಲ್ಲ ಪ್ರಯೋಗಗಳ ಮೂಲಕ ಎಸ್‌ಪಿಬಿ ಕೊರೋನಾ ನೆಗೆಟಿವ್ ಬಂದಿದೆ.

ಎಸ್‌ಪಿಬಿ ಕೊರೋನಾ ಮುಕ್ತ: ಮಹಾಮಾರಿ ಮಣಿಸಿದ ಸ್ವರ ಸಾಮ್ರಾಟ!

ಈ ಸಂಬಂಧ ಮಾಧ್ಯಮ ಪ್ರಕಟನೆ ಹೊರಡಿಸಿರುವ ಎಸ್‌ಪಿಬಿ ಪುತ್ರರಾದ ಚರಣ್ ಹಾಗೂ ನಿಕಿಲ್ 'ನನ್ನ ತಂದೆ ಪರವಾಗಿ ನೀವು ನೀಡಿದ ನಿರಂತರ ಬೆಂಬಲ ಹಾಗೂ ಪ್ರಾರ್ಥನೆಗೆ ಧನ್ಯವಾದಗಳು. ನನ್ನ ತಂದೆ ಆರೋಗ್ಯ ಈಗ ಸ್ಥಿರವಾಗಿದೆ. ಅವರ ಕೊರೋನಾ ವರದಿಯೂ ನೆಗೆಟಿವ್ ಬಂದಿದೆ. ಆರೋಗ್ಯ ಸಂಬಂಧಿತ ಮಾಹಿತಿಗಳನ್ನು ನಿಮಗೆ ನೀಡುತ್ತಿರುತ್ತೇವೆ' ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
BBK 12: ಟೈಮ್‌ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ಚಕ್ರಬಡ್ಡಿ ಸಮೇತ ವಾಪಸ್‌ ಕೊಟ್ಟ ಗಿಲ್ಲಿ ನಟ