
ಚೆನ್ನೈ(ಆ.24): ಖ್ಯಾತ ಗಾಯಕ ಎಸ್‌ಪಿಬಿ ಕೊರೋನಾ ಮುಕ್ತವಾಗಿದ್ದಾರೆ. ಮಹಾಮಾರಿ ಮಣಿಸಿದ ಸ್ವರ ಸಾಮ್ರಾಟನಿಗೆ ವೈದ್ಯ ಲೋಕದ ಎಲ್ಲ ಪ್ರಯೋಗಗಳ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.
"
ಕೊರೋನಾ ಹಿನ್ನೆಲೆ ಎಸ್‌ಪಿಬಿಯವರು ಆಗಸ್ಟ್ 5 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇಲ್ಲಿ ಎಸ್. ಪಿ ಬಾಲಸುಬ್ರಹ್ಮಣ್ಯಂರವರಿಗೆ ಕಳೆದ 19 ದಿನಗಳಿಂದ ನಿರಂತರ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದ ಹಿನ್ನೆಲೆ ಎಕ್ಸ್ ಕ್ಲ್ಯೂಸಿವ್ ಐಸಿಯು ವಾರ್ಡ್‌ನಲ್ಲಿ ಚಿಇತ್ಸೆ ನೀಡಲಾಗುತ್ತಿತ್ತು.
ಶ್ವಾಸಕೋಶ ತೀವ್ರ ಹಾನಿಗೊಳಗಾದ ಹಿನ್ನೆಲೆಯಲ್ಲಿ ಶ್ವಾಸಕೋಶಕ್ಕೆ ಅಳವಡಿಸಿರುವ ಎಕ್ಮೋ ಮೆಷಿನ್ ಮೂಲಕ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೀಗ ಆಗಾಗ ವೆಂಟಿಲೇಟರ್ ತೆಗೆದು ಸ್ವತಹ ಉಸಿರಾಟಕ್ಕೆ ಅವಕಾಶ ಮಾಡಲಾಗ್ತಿದೆ. ಇದಕ್ಕೆ ಎಸ್. ಪಿ ಬಿ ಸ್ಪಂದಿಸ್ತಾ ಇದ್ದಾರೆ. ವೈದ್ಯರ ನಿರಂತರ ಚಿಕಿತ್ಸೆಯಿಂದ ನಿನ್ನೆಗಿಂತ ಇವತ್ತು ಎಸ್.ಪಿ.ಬಿ ಆರೋಗ್ಯ ಚೇತರಿಸಿದೆ ಎಂದು ಗೀತ ಸಾಹಿತಿ ಕೆ ಕಲ್ಯಾಣ್ ತಿಳಿಸಿದ್ದಾರೆ.
ಕೆ.ಕಲ್ಯಾಣ್ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಆತ್ಮೀಯ ಸ್ನೇಹಿತ. ಎಸ್. ಪಿ.ಬಿ ಕುಟುಂಬದ ಜೊತೆ ಸದಾ ಒಡನಾಟದಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.