
ಮುಂಬೈ (ಆ.20): 4ನೇ ಹಂತದ ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ನಟ ಸಂಜಯ್ ದತ್ ಅವರನ್ನು ಮಂಗಳವಾರ ತಡರಾತ್ರಿ ಇಲ್ಲಿನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ಚಿಕಿತ್ಸೆಗಾಗಿ ದತ್ ದಾಖಲಾಗಿದ್ದು, ಶೀಘ್ರವೇ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. ಮಂಗಳವಾರ ರಾತ್ರಿ ಆಸ್ಪತ್ರೆಗೆ ತೆರಳುವ ಸಲುವಾಗಿ ಮನೆಯಿಂದ ನೀಲಿ ಬಣ್ಣದ ಕುರ್ತಾದೊಂದಿಗೆ ಹೊರಬಂದ ದತ್ ಜೊತೆಗೆ ಅವರ ಪತ್ನಿ ಮಾನ್ಯತಾ ಅವರು ಸಹ ಕಾಣಿಸಿಕೊಂಡರು.
ಸಂಜು ಹೆಲ್ತ್ ಮುಖ್ತ: ಚಿತ್ರೀಕರಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದ ಕೆಜಿಎಫ್ 2 ಚಿತ್ರತಂಡ...
ಈ ವೇಳೆ ಮಾನ್ಯತಾ ಅವರು ಪತಿ ಸಂಜಯ್ ದತ್ ಅವರನ್ನು ಆಲಂಗಿಸಿಕೊಂಡು ಧೈರ್ಯ ತುಂಬಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಸಣ್ಣ ಪ್ರಮಾಣದ ಉಸಿರಾಟ ಸಮಸ್ಯೆಯಿಂದ ಆಗಸ್ಟ್ 8ರಂದು ಇಲ್ಲಿನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ದತ್ ಆಗಸ್ಟ್ 10ರಂದು ಡಿಸ್ಚಾರ್ಜ್ ಆಗಿದ್ದರು.
ಸಂಜಯ್ ದತ್ ವಿಚಾರದಲ್ಲಿ ಕೆಜಿಎಫ್ ಚಾಪ್ಟರ್ 2ಗೆ ಕಂಟಕ ದೂರ!.
ಬಳಿಕ ವೃತ್ತಿ ಜೀವನದಿಂದ ಅಲ್ಪಕಾಲ ವಿರಾಮ ತೆಗೆದುಕೊಳ್ಳುವುದಾಗಿ ಟ್ವೀಟ್ ಮಾಡಿದ್ದರು. ಅದರ ಬೆನ್ನಲ್ಲೇ ಅವರಿಗೆ ಶ್ವಾಸಕೋಶ ಕ್ಯಾನ್ಸರ್ ಇದೆ ಎಂಅದು ವರದಿಯಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.