ಮೊಬೈಲ್ ಡಯಲ್ ಪ್ಯಾಡ್ ಬಳಸಿ ಮ್ಯೂಸಿಕ್: ಯುವ ಕಲಾವಿದನ ಮ್ಯಾಜಿಕ್!

By Govindaraj S  |  First Published Nov 5, 2022, 8:16 PM IST

ಮೊಬೈಲ್ ಹಿಡ್ಕೊಂಡ್ರೆ ಸಾಕು ಗಂಟೆ ಗಟ್ಟಲೆ ಸೋಮಾರಿಯಾಗಿ ಕುಳಿತುಕೊಳ್ಳುತ್ತಾರೆ ಈಗಿನ ಹುಡುಗರು ಅಂತ ಬಯ್ಯೋದು ಸಾಮಾನ್ಯ. ಆದರೆ ಇಲ್ಲೊಬ್ಬ ಇಂಜಿನಿಯರಿಂಗ್ ಮುಗಿಸಿದ ಯುವಕ, ಮೊಬೈಲ್​​​ ಮೂಲಕವೇ ಸಂಗೀತದಲ್ಲಿ  ಏನಾದರೂ ವಿಭಿನ್ನವಾಗಿ ಮಾಡ್ಬೇಕು, ಸಾಧಿಸಬೇಕು ಎಂದು ಪ್ರಯತ್ನಿಸಿ ಯಶಸ್ವಿಯಾಗಿದ್ದಾನೆ.


ಮೊಬೈಲ್ ಹಿಡ್ಕೊಂಡ್ರೆ ಸಾಕು ಗಂಟೆ ಗಟ್ಟಲೆ ಸೋಮಾರಿಯಾಗಿ ಕುಳಿತುಕೊಳ್ಳುತ್ತಾರೆ ಈಗಿನ ಹುಡುಗರು ಅಂತ ಬಯ್ಯೋದು ಸಾಮಾನ್ಯ. ಆದರೆ ಇಲ್ಲೊಬ್ಬ ಇಂಜಿನಿಯರಿಂಗ್ ಮುಗಿಸಿದ ಯುವಕ, ಮೊಬೈಲ್​​​ ಮೂಲಕವೇ ಸಂಗೀತದಲ್ಲಿ  ಏನಾದರೂ ವಿಭಿನ್ನವಾಗಿ ಮಾಡ್ಬೇಕು, ಸಾಧಿಸಬೇಕು ಎಂದು ಪ್ರಯತ್ನಿಸಿ ಯಶಸ್ವಿಯಾಗಿದ್ದಾನೆ. ಕೈಯಲ್ಲಿರುವ ಮೊಬೈಲನ್ನೇ ಬಳಸಿ, ಅದರ ಡಯಲ್ ಪ್ಯಾಡ್ನಲ್ಲಿ ಮ್ಯೂಸಿಕ್ ನುಡಿಸುತ್ತಾನೆ. ಕೀಬೋರ್ಡ್‌ನಲ್ಲಿ ಸ್ವರಗಳ ಗುರುತನ್ನು ಮಾಡಿ ತನ್ನ ಮೊಬೈಲ್ ಡಯಲ್ ಪ್ಯಾಡ್ ಮೇಲೆ ಈವರೆಗೂ 100 ಕ್ಕಿಂತ ಹೆಚ್ಚು ಹಾಡುಗಳನ್ನು ನುಡಿಸಿದ್ದಾನೆ. ಆ ಪ್ರತಿಭಾನ್ವಿತ ಯುವ ಕಲಾವಿದ ಶ್ರೀರಾಮ್ ತೀರ್ಥಹಳ್ಳಿ.

ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದವರು. ರಾಘವೇಂದ್ರ ಹಾಗೂ ಶಶಿಕಲಾ ದಂಪತಿಯ ಪುತ್ರ. ಇವರು ಮೈಸೂರಿನ ವಿದ್ಯಾ ವಿಕಾಸ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಕಾಲೇಜಿನಲ್ಲಿ BE ಪದವಿ ಪಡೆದಿದ್ದಾರೆ. ಚಿಕ್ಕ ವಯಸ್ಸಿನಿಂದ ಸಂಗೀತದ ಮೇಲೆ ಅಪಾರ ಪ್ರೀತಿ, ಆಸಕ್ತಿ ಹೊಂದಿದ ಶ್ರೀರಾಮ್, ಭಕ್ತಿಗೀತೆ, ಚಿತ್ರಗೀತೆ, ಭಾವಗೀತೆ, ನಾಡಗೀತೆ ಹಾಗೂ ಬೇರೆ ಬೇರೆ ತರಹದ ಹಾಡುಗಳನ್ನು ಮೊಬೈಲ್​​  ಕೀಪ್ಯಾಡ್​​​ ಬಳಸಿಯೇ ನುಡಿಸುವುದರ ಮೂಲಕ ಸೋಶಿಯಲ್ ಮೀಡಿಯಾಗಳಲ್ಲಿ ಜನರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. 

Tap to resize

Latest Videos

Mukesh Gowda: ಹೊಂಗನಸು ಸೀರಿಯಲ್ ಆಂಗ್ರಿ ಯಂಗ್‌ ಮ್ಯಾನ್ ರಿಷಿ ಇವ್ರೇ ನೋಡಿ!

2018 ರಿಂದ ಈ ಪ್ರಯತ್ನವನ್ನು ಮಾಡುತ್ತಿರುವ ಶ್ರೀರಾಮ್​​, ತನ್ನ ಬಳಿ ಇದ್ದಂತಹ ರೆಡ್​​ಮೀ ಮೊಬೈಲ್ ಅನ್ನು ಬಳಸಿ ಅದರಲ್ಲಿ ಇರುವಂತಹ ವೈಶಿಷ್ಟತೆಯನ್ನು ಉಪಯೋಗಿಸಿಕೊಂಡು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾನೆ. ಮೊದಲಿಗೆ ರಂಗಿತರಂಗ ಚಿತ್ರದ ಒಂದು ಹಾಡನ್ನು ನುಡಿಸಿ ಪ್ರಯತ್ನಿಸಿದ ಈತ ಈಗ ನೂರಾರು ಹಾಡುಗಳನ್ನು ನುಡಿಸುವುದರ ಜೊತೆಗೆ ಕನ್ನಡ, ಹಿಂದಿ, ಇಂಗ್ಲೀಷ್ ಹಾಗೂ ಅನೇಕ ಭಾಷೆಯ ಹಾಡುಗಳನ್ನು ನುಡಿಸುತ್ತಾನೆ.  ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ  ಸಮಯದಲ್ಲಿ ಶ್ರೀರಾಮ ನುಡಿಸಿದ ನಾಡಗೀತೆ 'ಜಯ ಭಾರತ ಜನನಿಯ ತನುಜಾತೆ'  ಹಾಡಿನ ಡಯಲ್​ ಪ್ಯಾಡ್​  ಮ್ಯೂಸಿಕ್​​ ವಾಟ್ಸಪ್, ಇನ್ಸ್ಟಾಗ್ರಾಮ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. ಈವರೆಗೂ ನಾಡಗೀತೆಗೆ ಇನ್ಸ್ಟಾಗ್ರಾಮ್‌ನಲ್ಲಿ 23000 ಕ್ಕಿಂತಲೂ ಹೆಚ್ಚು ವಿಕ್ಷಣೇ ಕಂಡುಬಂದಿದೆ. 



ಡಯಲ್​​ ಪ್ಯಾಡ್​ ಮ್ಯೂಸಿಕ್​: ಮೊಬೈಲ್​​​​ನಲ್ಲಿರುವ ಡಯಲ್​​ ಪ್ಯಾಡ್ 12 ಕೀ ಒಳಗೊಂಡಿರುತ್ತದೆ. ಪ್ರತಿಯೊಂದು ಕೀ ಒಂದೊಂದು ಸ್ವರಗಳ ನುಡಿಸಲು ಸಹಾಯ ಮಾಡುವುದರ ಜೊತೆಗೆ ಇದು C ಮೇಜರ್ ಸ್ಕೇಲ್ ಹೊಂದಿರುತ್ತದೆ. ಆ ಸ್ವರಗಳನ್ನು ಬಳಸಿ ಹೊಸ ಹೊಸ ಮ್ಯೂಸಿಕ್ ಅನ್ನು ಮಾಡಲಾಗುತ್ತದೆ. ಈ ಕೀಗಳನ್ನೇ ಬಳಸಿಕೊಂಡು ಶ್ರೀರಾಮ್​​  FM ಸ್ಟೇಷನ್ಸ್ ಗಳಾದ ರೇಡಿಯೋ ಮಿರ್ಚಿ, ಬಿಗ್ FM, ರೇಡಿಯೋ ಸಿಟಿಗಳ ಜಿಂಗಲ್ಸ್ ಮತ್ತು ರೇಡಿಯೋ ಮಿರ್ಚಿ RJ ಜಿಂಗಲ್ಸ್ ಮ್ಯೂಸಿಕ್ ಅನ್ನು ಮೊಬೈಲ್ ಪ್ಯಾಡ್‌ನಲ್ಲಿ ನುಡಿಸಿದ್ದಾರೆ.

ಕಾಂತಾರ - ಬ್ರಹ್ಮಾಸ್ತ್ರ ವಾರ್: ರಿಷಬ್ ಶೆಟ್ಟಿಗಿಂತ ರಣಬೀರ್ ಕಪೂರ್ ಬೆಸ್ಟ್‌ ಎಂದ ಓಟಿಟಿ ವೀಕ್ಷಕರು!

ಸ್ವರಾಭಿರಾಮನ ಸ್ವರಲೀಲೆ: ಜನಪ್ರಿಯ ಭಕ್ತಿ ಗೀತೆಗಳಾದ ಆತ್ಮ ರಾಮ ಆನಂದ ರಾಮಣ, ತುಂಗಾ ತೀರದಿ ನಿಂತ ಯತಿವರ, ನಮ್ಮಮ್ಮ ಶಾರದೇ, ಭಾಗ್ಯದ ಲಕ್ಷ್ಮೀ ಬಾರಮ್ಮ, ದಾಸನಾಗು ವಿಶೇಷನಾಗೂ ಮೊದಲಾದ ಹಾಡುಗಳನ್ನು ಡಯಲ್​ ಪ್ಯಾಡ್​​ನಲ್ಲಿ ಕೇಳುವುದೇ ಚೆಂದ. ರಘು ದೀಕ್ಷಿತ್​​​ರ ನೀನೇ ನೀನೆ, ಕಿರಿಕ್​ ಪಾರ್ಟಿಯ ಬೆಳಗೆದ್ದು ಯಾರ ಮುಖವಾ.. ಮೊದಲಾದ ಹಾಡುಗಳ ಡಯಲ್​ ಪ್ಯಾಡ್​ ಮ್ಯೂಸಿಕ್​ ವೈರಲ್​ ಆಗಿವೆ. ಶ್ರೀರಾಮ್​ರ ಈ ಹೊಸ ಪ್ರಯತ್ನ ಖ್ಯಾತ ಸಂಗೀತ ನಿರ್ದೇಶಕರಾದ ರಘು ದೀಕ್ಷಿತ್, ಆಲ್ ಓಕೆ, ವಾಸುಕಿ ವೈಭವ ಮೊದಲಾದವರ ಗಮನ ಸೆಳೆದಿದ್ದು, ಸೋಷಿಯಲ್​​ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಬೆನ್ನು ತಟ್ಟಿದ್ದಾರೆ.

click me!