18 ಲಕ್ಷದ ಬೈಕ್‌ನಲ್ಲಿ ನಟಿಯನ್ನು ಕೂರಿಸ್ಕೊಂಡು ಹೊರಟ ಕೋಟ್ಯಧಿಪತಿ ನಿಖಿಲ್‌ ಕಾಮತ್‌, ಆದ್ರೆ, ಬೈಕ್‌ಗೆ ಇನ್ಶುರೆನ್ಸೇ ಇಲ್ಲ!

By Santosh Naik  |  First Published Aug 19, 2024, 2:39 PM IST

ಝೆರೋಧಾ ಸಹ-ಸಂಸ್ಥಾಪಕ 37 ವರ್ಷದ ನಿಖಿಲ್ ಕಾಮತ್, ಕಳೆದ ವಾರ ಮುಂಬೈನಲ್ಲಿ ಗೆಳತಿ ಎನ್ನಲಾಗಿರುವ ಬಾಲಿವುಡ್‌ ನಟಿ ರಿಯಾ ಚಕ್ರವರ್ತಿಯೊಂದಿಗೆ ಬೈಕ್‌ ಸವಾರಿ ಮಾಡಿರುವ ವಿಡಿಯೋ ವೈರಲ್‌ ಆಗಿತ್ತು.



ಮುಂಬೈ (ಆ.19): ಜೀರೋಧಾ ಸಹಸಂಸ್ಥಾಪಕ 37 ವರ್ಷದ ನಿಖಿಲ್‌ ಕಾಮರ್‌ ಕಳೆದ ವಾರ ಮುಂಬೈನಲ್ಲಿ ತಮ್ಮ ಐಷಾರಾಮಿ ಬೈಕ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರ ಗೆಳತಿ ಎನ್ನಲಾಗಿರುವ ನಟಿ ರೇಹಾ ಚಕ್ರವರ್ತಿ ಜೊತೆ ಮುಂಬೈ ರಸ್ತೆಯಲ್ಲಿ ರೈಡ್‌ ಮಾಡಿರುವ ವಿಡಿಯೋ ವೈರಲ್‌ ಆಗಿದ್ದವು. ಕೋಟ್ಯಧಿಪತಿಯಾಗಿರುವ ನಿಖಿಲ್‌ ಕಾಮತ್‌ ಬೈಕ್‌ನಲ್ಲಿ ತಿರುಗಾಡ್ತಾರೆ ಅಂದ್ರೆ ಸೋಶಿಯಲ್‌ ಮೀಡಿಯಾ ಮಂದಿ ಸುಮ್ಮನಿರಬೇಕಲ್ಲ. ಆ ಬೈಕ್‌ನ ಕುಲ-ಗೋತ್ರ ಎಲ್ಲಾ ತೆಗೆದಿದ್ದಾರೆ. ಈ ವೇಳೆ ನಿಖಿಲ್‌ ಕಾಮತ್‌ ಅವರ ಬೈಕ್‌ನ ಇನ್ಶುರೆನ್ಸ್‌ ಎಕ್ಸ್‌ಪೈರಿ ಆಗಿ ವರ್ಷ ಕಳೆದಿದೆ ಅನ್ನೋದು ಗೊತ್ತಾಗಿದೆ. ಎರಡು ದಿನಗಳ ಹಿಂದೆ ವೈರಲ್ ಆದ ವೀಡಿಯೊಗಳಲ್ಲಿ, ನಿಖಿಲ್ ಕಾಮತ್ ಬಾಂದ್ರಾದಲ್ಲಿ ಸುಜುಕಿ ಇಂಟ್ರುಡರ್ ವಿಜಡ್‌ಆರ್‌ 1800 ಝಡ್‌ಎಲ್‌2 ಬೈಕ್‌ಅನ್ನು ಅನ್ನು ಓಡಿಸುತ್ತಿರುವುದು ಕಂಡುಬಂದಿದೆ. ಜಾಕೆಟ್ ಮತ್ತು ಶಾರ್ಟ್ಸ್ ಧರಿಸಿ, ಹೆಲ್ಮೆಟ್ ಮತ್ತು ಫೇಸ್ ಮಾಸ್ಕ್ ಧರಿಸಿ ಅವರು ರೈಡ್‌ಗೆ ಬಂದಿದ್ದರು. ಈ ವೇಳೆ ಬೈಕ್‌ನ ಹಿಂದೆ ಕುಳಿತಿದ್ದ ರಿಯಾ ಚಕ್ರವರ್ತಿಯೊಂದಿಗೆ ಅವರು ಚಾಟ್‌ ಮಾಡುತ್ತಿರುವುದು ಕಂಡಿದೆ.

ಸೋಶಿಯಲ್ ಮೀಡಿಯಾ ಬಳಕೆದಾರರು ಬೈಕ್‌ನ ಲೈಸೆನ್ಸ್ ಸಂಖ್ಯೆಯನ್ನು ಗಮನಿಸಿ ಇಡೀ ಬೈಕ್‌ನ ಜಾತಕ ಹೊರತೆಗೆದಿದ್ದಾರೆ. ಬೈಕ್‌ನ ವಿಮೆ ಕಳೆದ ವರ್ಷ ಮುಗಿದಿದೆ ಎಂದು ಎಕ್ಸ್‌ನಲ್ಲಿ ಯೂಸರ್‌ ಒಬ್ಬರು ಬರೆದಿದ್ದಾರೆ. ಮುಂಬೈನಲ್ಲಿ ನಿಖಿಲ್‌ ಕಾಮತ್‌ ಈ ಬೈಕ್‌ಅನ್ನು ರೆಂಟ್‌ಗೆ ಪಡೆದುಕೊಂಡಿರಬಹುದು ಎನ್ನುವ ಪ್ರಶ್ನೆ ಕೇಳಿದ ಮತ್ತೊಬ್ಬ ಯೂಸರ್‌ಗೆ, ಇದು ನಿಖಿಲ್‌ ಕಾಮತ್‌ ಅವರ ಮಾಲೀಕತ್ವದಲ್ಲೇ ಇರುವ ಬೈಕ್‌ ಎಂದು ತಿಳಿಸಿದ್ದಾರೆ. ಅದಲ್ಲದೆ, ಆದಷ್ಟು ಶೀಘ್ರವಾಗಿ ಬೈಕ್‌ನ ಇನ್ಶುರೆನ್ಸ್‌ ಪಾವತಿ ಮಾಡುವಂತೆ ತಿಳಿಸಿದ್ದಾರೆ.

VZR 1800 ZL2 ಇಂಟ್ರುಡರ್ ಸುಜುಕಿಯ ಇಂಟ್ರುಡರ್ ಸರಣಿಯ ಅಡಿಯಲ್ಲಿ ಬರುವ ಶಕ್ತಿಶಾಲಿ ಮೋಟಾರ್‌ಸೈಕಲ್ ಆಗಿದ್ದು, ಅದರ ಕ್ರೂಸರ್ ಬೈಕ್‌ಗಳಿಗೆ ಹೆಸರುವಾಸಿಯಾಗಿದೆ. ಕೆಲವು ಮಾರುಕಟ್ಟೆಗಳಲ್ಲಿ ಸುಜುಕಿ ಇಂಟ್ರುಡರ್ M1800R ಎಂದೂ ಕರೆಯಲ್ಪಡುತ್ತದೆ. ಈ ಮಾಡೆಲ್‌ನ ಬೈಕ್‌ಅನ್ನು ಈಗ ಭಾರತದಲ್ಲಿ ಸ್ಥಗಿತ ಮಾಡಲಾಗಿದೆ. ಭಾರತದಲ್ಲಿ ಎಕ್ಸ್‌ಶೋರೂಮ್‌ನಲ್ಲಿ₹15.95 ಲಕ್ಷದಿಂದ ₹16.45 ಲಕ್ಷಗಳ ನಡುವೆ ಇದೆ. ಆನ್-ರೋಡ್ ಬೆಲೆ ₹18 ಲಕ್ಷವನ್ನು ಮುಟ್ಟುತ್ತದೆ. ಕಾರ್‌ಇನ್‌ಫೋ ಆ್ಯಪ್‌ ಒದಗಿಸಿದ ಮಾಹಿತಿಯ ಪ್ರಕಾರ ಕಾಮತ್‌ ಅವರು 2012ರ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ಬೈಕ್‌ ನೋಂದಣಿ ಮಾಡಿದ್ದಾರೆ. ಇದರ ವಿಮೆ ಜುಲೈ 2023 ರಲ್ಲಿ ಕೊನೆಗೊಂಡಿದೆ.

ಬಜೆಟ್‌ ಡೇ ಎಂದು ಫೋಟೋ ಹಂಚಿಕೊಂಡ ನಿಖಿಲ್‌ ಕಾಮತ್‌, ಜನ ನೋಡಿದ್ದೇ ಬೇರೆ!

Tap to resize

Latest Videos

undefined

ನಿಖಿಲ್ ಕಾಮತ್ ಬ್ರೋಕರೇಜ್ ಸಂಸ್ಥೆಯ ಝೆರೋಧಾ ಸಹ ಸಂಸ್ಥಾಪಕರಾಗಿದ್ದಾರೆ. ಅವರು ಮತ್ತು ಅವರ ಸಹೋದರ ನಿತಿನ್ ಕಾಮತ್ 2010 ರಲ್ಲಿ Zerodha ಅನ್ನು ಸ್ಥಾಪಿಸಿದರು, ಅದರ ನಂತರ ನಿಖಿಲ್ ಕಾಮತ್ ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಆದರು. 37 ವರ್ಷ ವಯಸ್ಸಿನ ನಿಖಿಲ್‌ ಕಾಮತ್‌, 2020 ರಲ್ಲಿ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ಟ್ರೂ ಬೀಕನ್ ಸಹ-ಸ್ಥಾಪಿಸಿದ್ದಾರೆ. ಝೆರೋಧಾ ಮತ್ತು ಟ್ರೂ ಬೀಕನ್‌ನಲ್ಲಿ ಅವರ ಪಾತ್ರಗಳ ಜೊತೆಗೆ, ಅವರು ಜನಪ್ರಿಯ ಪಾಡ್‌ಕ್ಯಾಸ್ಟ್ ಅನ್ನು ಸಹ ಹೋಸ್ಟ್ ಮಾಡುತ್ತಾರೆ.

ಆದಾಯದ ಬಹುಪಾಲು ದಾನ ಮಾಡುವ ನಿರ್ಧಾರ ಮಾಡಿದ ಜಿರೋಧಾ ಸಂಸ್ಥಾಪಕ ನಿಖಿಲ್‌ ಕಾಮತ್‌!

 

click me!