ಕಾಂಡಮ್‌ ಜಾಹೀರಾತಿಗೆ ಫಿಲ್ಮ್‌ ಫೀಲ್ಡ್‌ನಿಂದ ಇವರಿಬ್ಬರೇ ಬೆಸ್ಟ್‌ ಎಂದ ಮ್ಯಾನ್‌ಫೋರ್ಸ್ ಮಾಲೀಕ!

Published : Mar 07, 2025, 09:55 PM ISTUpdated : Apr 09, 2025, 01:22 PM IST
ಕಾಂಡಮ್‌ ಜಾಹೀರಾತಿಗೆ ಫಿಲ್ಮ್‌ ಫೀಲ್ಡ್‌ನಿಂದ ಇವರಿಬ್ಬರೇ ಬೆಸ್ಟ್‌ ಎಂದ ಮ್ಯಾನ್‌ಫೋರ್ಸ್ ಮಾಲೀಕ!

ಸಾರಾಂಶ

ಮ್ಯಾನ್‌ಫೋರ್ಸ್‌ ಕಾಂಡಮ್‌ಗಳ ರಾಯಭಾರಿಯಾಗಿ ಕಾರ್ತಿಕ್‌ ಆರ್ಯನ್‌ರನ್ನು ಆಯ್ಕೆ ಮಾಡಲು ಕಾರಣವನ್ನು ರಾಜೀವ್‌ ಜುನೇಜಾ ಬಹಿರಂಗಪಡಿಸಿದ್ದಾರೆ. ಲೈಂಗಿಕ ಸಂಭೋಗದಲ್ಲಿ ಒಪ್ಪಿಗೆಯ ಮಹತ್ವದ ಬಗ್ಗೆ ಯುವಕರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದ್ದೇವೆ ಎಂದಿದ್ದಾರೆ.  

ಫಿಲ್ಮ್‌ಗಳ ಹೊರತಾಗಿ ಪ್ರಪಂಚದಾದ್ಯಂತ ಅನೇಕ ಸೆಲೆಬ್ರಿಟಿಗಳಿಗೆ ಆದಾಯದ ಮತ್ತೊಂದು ಮೂಲವೆಂದರೆ ಜಾಹೀರಾತು ಒಪ್ಪಂದಗಳು. ಪ್ರತಿ ವರ್ಷ, ನಟರು ಯಾವ ಚಿತ್ರಗಳಿಗೆ ಸಹಿ ಹಾಕಬೇಕೆಂದು ನಿರ್ಧರಿಸುವುದಲ್ಲದೆ, ಅವರು ಯಾವ ಬ್ರ್ಯಾಂಡ್‌ಗಳನ್ನು ಪ್ರತಿನಿಧಿಸಬೇಕೆಂದು ಕೂಡ ಆಯ್ಕೆ ಮಾಡುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಜಾಹೀರಾತಿನ ವಿಚಾರದಲ್ಲಿ ಸಿನಿಮಾ ನಟರು ಹೆಚ್ಚಿನ ಜವಾಬ್ದಾರಿ ಹೊಂದಿರುತ್ತಾರೆ. ಅವರು ಪ್ರತಿನಿಧಿಸುವ ಬ್ರ್ಯಾಂಡ್‌ಗಳು ಸೂಕ್ತ ಹಾಗೂ ವಿಶ್ವಾಸಾರ್ಹವಾಗಿರಬೇಕು ಎಂದು ಬಯಸುತ್ತಾರೆ. ಇನ್ನು ಬ್ರ್ಯಾಂಡ್‌ಗಳು ಕೂಡ ಹೀಗೆ ಯೋಚನೆ ಮಾಡುತ್ತದೆ. 2023ರಿಂದ ಬಾಲಿವುಡ್‌ನ ಹಾರ್ಟ್‌ಥ್ರೋಬ್‌ ಕಾರ್ತಿಕ್‌ ಆರ್ಯನ್‌ ಮ್ಯಾನ್‌ಫೋರ್ಸ್‌ ಕಾಂಡಮ್‌ಗಳ ಬ್ರ್ಯಾಂಡ್‌ ರಾಯಭಾರಿಯಾಗಿ ನೇಮಿಸಲಾಗಿದೆ.  ಮ್ಯಾನ್‌ಕೈಂಡ್ ಫಾರ್ಮಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ರಾಜೀವ್ ಜುನೇಜಾ, ಕಾರ್ತಿಕ್ ಅವರನ್ನು ಏಕೆ ಆಯ್ಕೆ ಮಾಡಲಾಗಿದೆ ಎಂಬುದನ್ನು ಈಗ ಬಹಿರಂಗಪಡಿಸಿದ್ದಾರೆ. ಬ್ರ್ಯಾಂಡ್‌ಗೆ ಇತರ ಯಾವ ತಾರೆಯರು ಸೂಕ್ತರು ಎಂಬುದನ್ನು ಸಹ ಅವರು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಪಾಡ್‌ಕಾಸ್ಟ್‌ ಒಂದರಲ್ಲಿ ಭಾಗವಹಿಸಿದ್ದ ರಾಜೀವ್‌ ಜುನೇಜಾ, ಸನ್ನಿ ಲಿಯೋನ್‌ ಬದಲು ಮ್ಯಾನ್‌ಫೋರ್ಸ್‌ಗೆ ಕಾರ್ತಿಕ್‌ ಆರ್ಯನ್‌ರನ್ನು ಆಯ್ಕೆ ಮಾಡಿದ್ದೇಕೆ ಅನ್ನೋದನ್ನು ತಿಳಿಸಿದರು. 'ಕಾರ್ತಿಕ್‌ ಆರ್ಯನ್‌ರನ್ನು ಆಯ್ಕೆ ಮಾಡಿದ ಏಕೈಕ ಕಾರಣವೇನೆಂದರೆ, ನಾವು ಒಮ್ಮೊಮ್ಮೆ ಪುರುಷರ ಒಳ ಹೊಕ್ಕಬೇಕಾಗುತ್ತದೆ' ಅದಕ್ಕಾಗಿ ಅವರನ್ನು ಆಯ್ಕೆ ಮಾಡಿದೆವು. ನಮ್ಮ ಪಾರ್ಟ್‌ನರ್‌ಷಿಪ್‌ ಮೂಲಕ, ಕಾರ್ತಿಕ್ ಮತ್ತು ಮ್ಯಾನ್‌ಫೋರ್ಸ್ ಲೈಂಗಿಕ ಸಂಭೋಗದಲ್ಲಿ ಒಪ್ಪಿಗೆಯ ಮಹತ್ವದ ಬಗ್ಗೆ ಯುವಕರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದ್ದಾರೆ.

ಇಲ್ಲಿಯವರೆಗೂ ನಿಮ್ಮ ಪ್ರಾಡಕ್ಟ್‌ನಲ್ಲಿ ಭಾಗಿಯಾದ ಯಾವ ನಟ-ನಟಿಯರನ್ನು ನೀವು ಈಗ ಆಯ್ಕೆ ಮಾಡಲು ಬಯಸುತ್ತೀರಿ ಅನ್ನೋ ಪ್ರಶ್ನೆಗೆ,'ಕಾಂಡಮ್‌ ಜಾಹೀರಾತಿಗಾಗಿಯೇ? ಯಾವುದಕ್ಕಾಗಿ? ಹಾಗಿದ್ರೆ ಜಾಹ್ನವಿ ಕಪೂರ್‌. ಆಕೆ ಅದ್ಭುತವಾಗಿ ಒಪ್ಪಿಕೊಳ್ಳುತ್ತಾರೆ. ಆಕೆ ಬೆಸ್ಟ್‌ ಚಾಯ್ಸ್‌ ಆಗೋದು ಗ್ಯಾರಂಟಿ' ಎಂದು ಹೇಳಿದ್ದಾರೆ.

ಕಾರ್ತಿಕ್‌ ಆರ್ಯನ್‌ರ್ನು ಬಿಟ್ಟು ಬೇರೆ ಯಾವುದಾದರೂ ಪುರುಷ ನಟರನ್ನು ನಿಮ್ಮ ಜಾಹೀರಾತಿಗೆ ಸೆಲೆಕ್ಟ್‌ ಮಾಡುವುದಾದರೆ ಯಾರನ್ನು ಮಾಡುತ್ತೀರಿ ಅನ್ನೋ ಪ್ರಶ್ನೆಗೆ ರಣಬೀರ್‌ ಕಪೂರ್‌ ಎಂದು ಉತ್ತರಿಸಿದರು. ಇನ್ನು ಯುವಕರ ಟಾರ್ಗೆಟ್‌ ಮಾಡಲು ಕಿಲ್‌ನಿಂದ ಪ್ರಖ್ಯಾತರಾದ ಲಕ್ಷ್ಯರನ್ನು ಆಯ್ಕೆ ಮಾಡೋದಾಗಿ ತಿಳಿಸಿದರು. ಬಾಲಿವುಡ್‌ನ ಡೆಬ್ಯೂಟ್‌ ಸಿನಿಮಾದಲ್ಲಿ ಲಕ್ಷ್ಯ ಅವರ ನಟನೆಯನ್ನು ಮೆಚ್ಚಿದ್ದಾರೆ.

OMG, ಇದುವೇ ಭಾರತದ ಕಾಂಡೋಮ್ ರಾಜಧಾನಿ; ತಿಂಗಳಿಗೆ 36 ದೇಶಗಳಿಗೆ 1 ಕೋಟಿ ರಫ್ತು!

ಮ್ಯಾನ್‌ಕೈಂಡ್ ಫಾರ್ಮಾ ಮಾಲೀಕತ್ವದ ಮತ್ತೊಂದು ಉತ್ಪನ್ನವಾದ ಪ್ರೀಗಾ ನ್ಯೂಸ್ ಪ್ರೆಗ್ನೆನ್ಸಿ ಟೆಸ್ಟ್‌ ಕಿಟ್ ಬಗ್ಗೆ ಮಾತನಾಡಿದ ರಾಜೀವ್, ಪ್ರಸ್ತುತ ಬ್ರಾಂಡ್ ರಾಯಭಾರಿ ಅನುಷ್ಕಾ ಶರ್ಮಾ ಅವರನ್ನು ಶಿಸ್ತುಬದ್ಧ ಮತ್ತು ವೃತ್ತಿಪರ ವ್ಯಕ್ತಿ ಎಂದು ಹೇಳುವ ಮೂಲಕ ಆಕೆ ಪರಿಪೂರ್ಣ ಆಯ್ಕೆ ಎಂದರು. ಬ್ರ್ಯಾಂಡ್‌ಗೆ ಮುಂದಿನ ಉತ್ತಮ ಆಯ್ಕೆ ದೀಪಿಕಾ ಪಡುಕೋಣೆ ಎಂದು ರಾಜೀವ್ ಹೇಳಿದರು, ಅವರು ಕಳೆದ ವರ್ಷ ತಮ್ಮ ಮಗಳು ದುವಾ ಪಡುಕೋಣೆ ಸಿಂಗ್ ಅವರನ್ನು ಜಗತ್ತಿಗೆ ಸ್ವಾಗತಿಸಿದರು. ಅವರೊಂದಿಗೆ ಯಾವುದೇ ಸಹಿ ಮಾಡಿಲ್ಲ. ಬಹುಶಃ ಅವರು ಹೇಳುವಷ್ಟು ಹಣ ನಮಗೆ ನೀಡಲು ಸಾಧ್ಯವಾಗದಿರಬಹುದು ಎಂದಿದ್ದಾರೆ.

ವಿಶ್ವದ ಅತೀ ದುಬಾರಿ ಕಾಂಡೋಮ್‌ಗಿದೆ 200 ವರ್ಷದ ಇತಿಹಾಸ, ಬೆಲೆ 44,000 ರೂಪಾಯಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಇದು ನಿಜ.. 50 ಕೋಟಿ ಸಂಭಾವನೆಗೆ ಅರ್ಹ RGV ನಯಾಪೈಸೆ ಪಡೆಯದೇ ಹೀರೋ ಆಗ್ತಿದಾರೆ!