
ನವದೆಹಲಿ (ಮಾ.6): ಜನಪ್ರಿಯ ರ‍್ಯಾಪರ್ ಯೋ ಯೋ ಹನಿ ಸಿಂಗ್ ಅವರ ಇತ್ತೀಚಿನ ಹಾಡು 'ಮ್ಯಾನಿಯಕ್' ನಲ್ಲಿ ಅಶ್ಲೀಲತೆಯಿದೆ ಎಂದು ಆರೋಪಿಸಿದ್ದಾರೆ ಎಂದು ನಟಿ ನೀತು ಚಂದ್ರ ಪಾಟ್ನಾ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದಾರೆ. 'ಗರಂ ಮಸಾಲ' ಮತ್ತು 'ಟ್ರಾಫಿಕ್' ನಂತಹ ಹಿಂದಿ ಸಿನಿಮಾಗಳಿಂದ ಫೇಮಸ್ ಆಗಿರುವ 40 ವರ್ಷದ ನೀತು ಚಂದ್ರ, ಈ ಹಾಡು "ಬಹಿರಂಗ ಲೈಂಗಿಕತೆಯನ್ನು ಚಿತ್ರಿಸುತ್ತದೆ" ಮತ್ತು "ಮಹಿಳೆಯರನ್ನು ಕೇವಲ ಲೈಂಗಿಕ ವಸ್ತುಗಳಾಗಿ ತೋರಿಸಲಾಗಿದೆ" ಎಂದು ವಾದಿಸಿದ್ದಾರೆ. ಶಾಲೆಗೆ ಹೋಗುವ ಹುಡುಗಿಯರು ತಾವು ಅಸುರಕ್ಷಿತರೆಂದು ಭಾವಿಸುತ್ತಾರೆ. ಇದಲ್ಲದೆ, ಅಶ್ಲೀಲ ಹಾಡುಗಳನ್ನು ಹಾಡುವ ಗಾಯಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. ನೀತು ಚಂದ್ರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ಪವರ್ ಸಿನಿಮಾದಲ್ಲಿ 'ವೈ ವೈ' ಎನ್ನುವ ಐಟಂ ಸಾಂಗ್‌ನಲ್ಲಿ ಕುಣಿದಿದ್ದರು.
ಈ ಹಾಡು "ಅಶ್ಲೀಲತೆಯನ್ನು ಸಾಮಾನ್ಯೀಕರಿಸಲು ಭೋಜ್‌ಪುರಿ ಭಾಷೆಯನ್ನು" ಬಳಸುತ್ತದೆ ಮತ್ತು "ಮಹಿಳಾ ಸಬಲೀಕರಣವನ್ನು ಅಮಮಾನಿಸುತ್ತದೆ' ಎಂದು ಆರೋಪಿಸಿದ್ದಾರೆ. ಅರ್ಜಿಯಲ್ಲಿ 41 ವರ್ಷದ ಹಿರ್ದೇಶ್ ಸಿಂಗ್ ಅಕಾ ಹನಿ ಸಿಂಗ್ ಮತ್ತು ಗೀತರಚನೆಕಾರ ಲಿಯೋ ಗ್ರೆವಾಲ್ ಮತ್ತು ಭೋಜ್‌ಪುರಿ ಗಾಯಕರಾದ ರಾಗಿಣಿ ವಿಶ್ವಕರ್ಮ ಮತ್ತು ಅರ್ಜುನ್ ಅಜನಾಬಿ ಸೇರಿದಂತೆ ಹಾಡಿನ ಇತರ ಹೆಸರುಗಳನ್ನು ಉಲ್ಲೇಖಿಸಲಾಗಿದೆ.
ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಎರಡು ಭೋಜ್‌ಪುರಿ ಮತ್ತು ಮೈಥಿಲಿ ಚಲನಚಿತ್ರಗಳನ್ನು ಸಹ ನಿರ್ಮಿಸಿರುವ ನೀತು ಚಂದ್ರ, ಈ ಹಾಡನ್ನು ರಚನೆ ಮಾಡಿರುವವರು "ಸಾಹಿತ್ಯವನ್ನು ತಿದ್ದುಪಡಿ ಮಾಡಲು" ನಿರ್ದೇಶಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಮಾರ್ಚ್‌ನಲ್ಲಿ ಪಿಐಎಲ್ ವಿಚಾರಣೆಗೆ ಬರುವ ಸಾಧ್ಯತೆಯಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಅಮೀರ್ ಖಾನ್‌ರನ್ನೂ ಬಿಟ್ಟಿಲ್ಲ ಖಿನ್ನತೆ ಎನ್ನುವ ಮನೋವ್ಯಾಧಿ!
ಹನಿ ಸಿಂಗ್ ತಮ್ಮ ಹಾಡುಗಳಿಗೆ ಸಾಹಿತ್ಯದ ಆಯ್ಕೆಯ ಬಗ್ಗೆಯೂ ಈ ಹಿಂದೆ ವಿವಾದವನ್ನು ಎದುರಿಸಿದ್ದಾರೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 2023 ರಲ್ಲಿ ರ‍್ಯಾಪರ್ ವಿರುದ್ಧದ ಅರ್ಜಿಯನ್ನು "ನಿಷ್ಪರಿಣಾಮಕಾರಿ" ಎಂದು ಕರೆದು "ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳ" ಆರೋಪದ ಪ್ರಕರಣದಲ್ಲಿ ಅವರ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ತಿಳಿಸಿತ್ತು.
ಕುಡಿತದ ಚಟದಿಂದ ಬದುಕು ಹಾಳು ಮಾಡಿಕೊಂಡ ಟಾಪ್ 7 ಸೆಲಿಬ್ರಿಟಿಗಳಿವರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.