ನಟಿ, ಗಾಯಕಿ ಮಲ್ಲಿಕಾ ರಜಪೂತ್‌ ಶವವಾಗಿ ಪತ್ತೆ, ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ ಪೊಲೀಸ್‌!

By Santosh Naik  |  First Published Feb 13, 2024, 10:06 PM IST

35 ವರ್ಷದ ನಟಿ ಹಾಗೂ ಗಾಯಕಿಯ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉತ್ತರ ಪ್ರದೇಶದ ಕೋಟ್ವಾಲಿ ಪೊಲೀಸ್‌ ಠಾಣೆ ಪ್ರದೇಶದ ಸೀತಾಕುಂಡ್‌ನಲ್ಲಿರುವ ಆಕೆಯ ಮನೆಯ ಕೋಣೆಯಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 


ನವದೆಹಲಿ (ಫೆ.13):  ಗಾಯಕಿ ವಿಜಯ್ ಲಕ್ಷ್ಮಿ ಅಲಿಯಾಸ್ ಮಲ್ಲಿಕಾ ರಜಪೂತ್ ಅವರು ಮಂಗಳವಾರ ಇಲ್ಲಿನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 35 ವರ್ಷದ ಗಾಯಕಿಯ ಮೃತದೇಹ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸೀತಾಕುಂಡ್ ಪ್ರದೇಶದ ತನ್ನ ಮನೆಯ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಮನೆಯವರು ಮಲಗಿದ್ದ ಕಾರಣ ಯಾವಾಗ ಈ ಘಟನೆ ನಡೆದಿದೆ ಎನ್ನುವುದು ಇನ್ನೂ ಗೊತ್ತಾಗಲಿಲ್ಲ ಎಂದು ಮಲ್ಲಿಕಾ ತಾಯಿ ಸುಮಿತ್ರಾ ಸಿಂಗ್ ಹೇಳಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ತೋರುತ್ತದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಶ್ರೀರಾಮ್ ಪಾಂಡೆ ಹೇಳಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು.

2011ರಲ್ಲಿ ಬಿಡುಗಡೆಯಾಗಿದ್ದ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರ ಕ್ರೈ ಕಾಮಿಡಿ ಸಿನಿಮಾ ರಿವಾಲ್ವರ್‌ ರಾಣಿ ಚಿತ್ರದಲ್ಲಿ ಮಲ್ಲಿಕಾ ರಜಪೂತ್‌ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಅದರೊಂದಿಗೆ ಶಾನ್ ಅವರ ಯಾರಾ ತುಜೆ ಹಾಡಿನ ಮ್ಯೂಸಿಕ್ ವಿಡಿಯೋದಲ್ಲಿ ಕೂಡ ಮಲ್ಲಿಕಾ ಕಾಣಿಸಿಕೊಂಡಿದ್ದರು. 2016 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ್ದ ಈಕೆ, ಎರಡು ವರ್ಷಗಳ ಬಳಿಕ ತಮಗೆ ರಾಜಕೀಯ ಸಹವಾಸ ಸಾಕು ಎಂದು ತೊರೆದಿದ್ದರು. ಮನರಂಜನೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಇವರ ವೃತ್ತಿಜೀವನ ಹೆಚ್ಚಾಗಿ ಕ್ಲಿಕ್‌ ಆಗಿರಲಿಲ್ಲ. ಇದರಿಂದಾಗಿ ಅವರಯ ಆಧ್ಯಾತ್ಮದತ್ತ ವಾಲಿದ್ದರು. ಅವರು 2022 ರಲ್ಲಿ ಉತ್ತರ ಪ್ರದೇಶದ ಭಾರತೀಯ ಸವರ್ಣ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಮಲ್ಲಿಕಾ ಕಥಕ್ ನರ್ತಕಿ ತರಬೇತುದಾರರಾಗಿದ್ದರು ಮತ್ತು ಅವರ ನಂತರದ ವರ್ಷಗಳಲ್ಲಿ, ಅವರು ಹಲವಾರು ಕವಿತೆಗಳಲ್ಲಿ ತಮ್ಮದೇ ಆದ ಗಜಲ್‌ಗಳನ್ನು ಬರೆಯಲು ಮತ್ತು ಪ್ರದರ್ಶಿಸಲು ಪ್ರಾರಂಭಿಸಿದರು.

Tap to resize

Latest Videos

 

 

ಬೆಂಗಳೂರು: ಮದುವೆಯಾಗಿ ಎರಡೇ ವರ್ಷದಲ್ಲಿ ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ!

ಮಲ್ಲಿಕಾ ಅವರ ತಾಯಿ ಸುಮಿತ್ರಾ ಸಿಂಗ್, ಕುಟುಂಬದವರು ಮಲಗಿದ್ದ ಕಾರಣ ಆಕೆಯ ಸಾವು ಯಾವಾಗ ಸಂಭವಿಸಿತು ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಮೊದಲಿಗೆ ಕೋಣೆಯ ಬಾಗಿಲು ಮುಚ್ಚಿತ್ತು ಹಾಗೂ ಲೈಟ್‌ ಆನ್‌ ಆಗಿತ್ತು. ನಾನು ಮೂರು ಬಾರಿ ಆ ಕಡೆ ಹೋದಾಗಲು ಬಾಗಿಲು ತೆರೆದಿರಲಿಲ್ಲ. ಕೊನೆಗೆ ನಾನು ಕಿಟಕಿಯೊಂದ ನೋಡಿದಾಗ, ಆಕೆ ನಿಂತಿರುವಂತೆ ಕಂಡಿತ್ತು. ಬಳಿಕ ಬಾಗಿಲನ್ನು ಮುರಿದು ಒಳಹೊಕ್ಕಾಗ ನನ್ನ ಮಗಳು ನೇಣು ಹಾಕಿಕೊಂಡಿದ್ದಳು. ಬಳಿಕ ನನ್ನ ಪತಿಯನ್ನು ಕರೆದಿದ್ದೆ. ಆ ವೇಳೆಗಾಗಲೇ ಆಕೆ ತೀರಿ ಹೋಗಿದ್ದಳು ಎಂದಿದ್ದಾರೆ.

ಅವನಿಗಿತ್ತು ತನ್ನ ಹೆಂಡತಿಯನ್ನ ಕೊಂದ ಅನುಭವ..! ಸೂಸೈಡ್ ಅಂತ ಬಂದ್ರು, ಆದ್ರೆ ಅದು ಕೊಲೆ..!

click me!