ಪ್ರೆಗ್ನೆನ್ಸಿಯಲ್ಲೂ ಸೋನಂ ಕಪೂರ್‌ ಭರ್ಜರಿ ವ್ಯಾಯಾಮ, ವಿಡಿಯೋ ಹಂಚಿಕೊಂಡ ನಟಿ!

Published : Jul 10, 2022, 01:20 AM ISTUpdated : Jul 10, 2022, 01:35 AM IST
ಪ್ರೆಗ್ನೆನ್ಸಿಯಲ್ಲೂ ಸೋನಂ ಕಪೂರ್‌ ಭರ್ಜರಿ ವ್ಯಾಯಾಮ, ವಿಡಿಯೋ ಹಂಚಿಕೊಂಡ ನಟಿ!

ಸಾರಾಂಶ

* ಬಾಲಿವುಡ್‌ ನಟಿ ಸೋನಂ ಕಪೂರ್‌ ವಿಡಿಯೋ ವೈರಲ್ * ಪ್ರೆಗ್ನೆನ್ಸಿ ಸಮಯದಲ್ಲೂ ಭರ್ಜರಿ ವ್ಯಾಯಾಮ * ವರ್ಕೌಟ್‌ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡ ನಟಿ

ಮುಂಬೈ(ಜು.10): ನಟಿ ಸೋನಂ ಕಪೂರ್ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಈ ದಿನಗಳಲ್ಲಿ ನಟಿ ತನ್ನ ತಾಯ್ತನವನ್ನು ಆನಂದಿಸುತ್ತಿದ್ದಾರೆ. ಶೀಘ್ರದಲ್ಲೇ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಇನ್ನು ಇತ್ತೀಚೆಗಷ್ಟೇ ಅವರು ಇಟಲಿಯಲ್ಲಿ ತಮ್ಮ ಪತಿ ಆನಂದ್ ಅಹುಜಾ ಅವರೊಂದಿಗೆ ಸುಂದರವಾದ ಬೇಬಿಮೂನ್ ಆಚರಿಸಿದರು. ಏತನ್ಮಧ್ಯೆ, ಈಗ ಸೋನಂ ಅವರು ತಮ್ಮ ಮನೆಯಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇದರೊಂದಿಗೆ, ತಾನು ಹೆಚ್ಚಾಗಿ ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿಯೂ ತೋರಿಸಿಕೊಟ್ಟಿದ್ದಾರೆ. ಸೋನಮ್ ತಮ್ಮ ವೀಡಿಯೊವನ್ನು ಮರುಪೋಸ್ಟ್ ಮಾಡುತ್ತಾ ಗರ್ಭಧಾರಣೆ ಸಮಯದ ವ್ಯಾಯಾಮಗಳು ಎಂದು ಬರೆದಿದ್ದಾರೆ. ಇದೇ ವೇಳೆ ಅವರು ತಮ್ಮ ಆಹಾರದ ಒಂದು ದೃಶ್ಯವನ್ನೂ ಹಂಚಿಕೊಂಡಿದ್ದಾರೆ. ಜೊತೆಗೆ ಘರ್ ಕಾ ಖಾನಾ (ಮನೆಯೂಟ)' ಎಂದೂ ಬರೆದುಕೊಂಡಿದ್ದಾರೆ.

ಸೋನಂ ಕಪೂರ್ ಮನೆಯಲ್ಲಿ ಕಳ್ಳತನ; Rs 1.41 ಕೋಟಿ, ಚಿನ್ನಾಭರಣ ಕಳವು

ಈ ಹಿಂದೆ ಸೋನಂ ಕಪೂರ್ ಲಂಡನ್‌ನಿಂದ ಮುಂಬೈಗೆ ಮರಳಿದ್ದಾರೆ ಎಂಬ ಸುದ್ದಿ ಇತ್ತು. ಮುಂಬೈನಲ್ಲಿಯೇ ಆಕೆ ತನ್ನ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಮಾರ್ಚ್‌ನಲ್ಲಿ ತಾವು ಪ್ರೆಗ್ನೆಂಟ್‌ ಎಂಬ ವಿಚಾರ ಶೇರ್ ಮಾಡಿದ್ದರು. ಅವರು ತಮ್ಮ ಫೋಟೋಶೂಟ್‌ನ ಸುಂದರವಾದ ಫೋಟೋಗಳನ್ನು ಹಂಚಿಕೊಂಳ್ಳುತ್ತಾ 'ನಾಲ್ಕು ಕೈಗಳು ಎಂದು ಬರೆದಿದ್ದರು. 

ಯಾರು ನಿಮ್ಮೊಂದಿಗೆ ದಾರಿಯ ಪ್ರತಿ ಹೆಜ್ಜೆ ಒಟ್ಟಿಗೆ ನಡೆಯುತ್ತಾರೋ ಅವರನ್ನು ಎತ್ತಿಕೊಳ್ಳಲು ಹೆಚ್ಚು ಕಾಯಲು ಆಗುವುದಿಲ್ಲ, ಬಹಳಷ್ಟು ಆತುರವಿರುತ್ತದೆ. ನಿಮ್ಮನ್ನು ಪ್ರೀತಿಯಿಂದ ಕುಟುಂಬ ನಿಮ್ಮನ್ನು ಸ್ವಾಗತಿಸಲು ಕಾಯುತ್ತಿದೆ ಎಂದಿದ್ದರು. 

ಇನ್ನು ಸೋನಂ ಕಪೂರ್ ಕೆಲಸದ ವಿಚಾರ ನೋಡುವುದಾದರೆ, ಅವರು 'ಬ್ಲೈಂಡ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊರೋನಾ ಹಾವಳಿ ಸಂದರ್ಭದಲ್ಲಿ ಈ ಚಲನಚಿತ್ರವನ್ನು ಸ್ಕಾಟ್ಲೆಂಡ್ನಲ್ಲಿ ಚಿತ್ರೀಕರಿಸಲಾಗಿತ್ತು. 

ಮೊದಲ ಮೂರು ತಿಂಗಳು ಅದೆಷ್ಟು ಕಠಿಣ: ಗರ್ಭಾವಸ್ಥೆಯ ಕಷ್ಟ ಹಂಚಿಕೊಂಡ ಸೋನಮ್

ಸೋನಂ, ಆನಂದ್ ಜೋಡಿ

ಬಾಲಿವುಡ್‌ನ (Bollywood) ಮೋಸ್ಟ್‌ ಸೆನ್ಸೇಷನಲ್ ಕಪಲ್ ಅಂದ್ರೆ ನಟಿ ಸೋನಮ್ ಕಪೂರ್ (Sonam Kapoor) ಮತ್ತು ಆನಂದ್ ಅಹುಜಾ (Anand Ahuja). ಸೋನಮ್‌ ತಂದೆ ಖ್ಯಾತ ನಟ ಅನಿಲ್ ಕಪೂರ್ (Anil Kapoor) ಆದರೂ ಯಾವುದೇ ಬ್ಯಾಕಪ್ ಇಲ್ಲದೇ ಫ್ಯಾಷನ್ ಲೋಕಕ್ಕೆ ಕಾಲಿಟ್ಟು, ಆನಂತರ ಚಿತ್ರರಂಗಕ್ಕೆ ಕಾಲಿಟ್ಟು ಅನೇಕ ಸೋಲುಗಳನ್ನು ಎದುರಿಸಿದ್ದರು. ಈ ನಡುವೆ ವಿಭಿನ್ನ ಔಟ್‌ಫಿಟ್‌ಗಳನ್ನು ಸೆಲೆಕ್ಟ್‌ ಮಾಡಿಕೊಂಡು, ಫ್ಯಾಷನ್ ಐಕಾನ್ (Fashion Icon) ಆಗಿ ಗುರುತಿಸಿಕೊಂಡ ಟಾಪ್ ನಟಿಯರ ಸ್ಥಾನದಲ್ಲಿ ಮಿಂಚುತ್ತಿದ್ದಾರೆ ಈ ನಟಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?