* ಸ್ವಾಮಿ ನಿತ್ಯಾನಂದನ ಬಗ್ಗೆ ನಟಿಯಿಂದ ಶಾಕಿಂಗ್ ಹೇಳಿಕೆ
* ನಿತ್ಯಾನಂದನೆಂದರೆ ನನಗಿಷ್ಟ, ಅವರನ್ನೇ ಮದುವೆಯಾಗುತ್ತೇನೆ
* ನಟಿ ಪ್ರಿಯಾ ಆನಂದ್ ಹೇಳಿಕೆ ವೈರಲ್
ಬೆಂಗಳೂರು(ಜು.09): ಅತ್ಯಾಚಾರ ಆರೋಪ ಎದುರಿಸುತ್ತಿರುವ, ಪ್ರಸ್ತುತ ಲ್ಯಾಟಿನ್ ಅಮೆರಿಕ ದೇಶವಾದ ಈಕ್ವೆಡಾರ್‌ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿ ತನ್ನದೇ 'ಕೈಲಾಸ' ಹೆಸರಿನ ದೇಶ ಸ್ಥಾಪಿಸಿ ಚರ್ಚೆಯಲ್ಲಿರುವ ನಿತ್ಯಾನಂದ ಸ್ವಾಮಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಈ ಬಾರಿ ಕನ್ನಡದ ಚಿತ್ರನಟಿಯೊಬ್ಬರು ನೀಡಿರುವ ಹೇಳಿಕೆಯಿಂದ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು ಪುನೀತ್ ರಾಜ್‌ಕುಮಾರ್ ಸಿನಿಮಾ ರಾಜಕುಮಾರ ಹಾಗೂ ಜೇಮ್ಸ್‌ನಲ್ಲಿ ನಾಯಕಿ ನಟಿಯಾಗಿದ್ದ ಪ್ರಿಯಾ ಆನಂದ್ ನಿತ್ಯಾನಂದನ ಕುರಿತಾಗಿ ನೀಡಿರುವ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆಡ ನೀಡಿದ ಸಂದರ್ಶನದಲ್ಲಿ ಮಾತನಾಡಿದ ದಕ್ಷಿಣ ಭಾರತದ ಜನಪ್ರಿಯ ನಟಿ ಪ್ರಿಯಾ ಆನಂದ್ ತಾನು ನಿತ್ಯಾನಂದ ಸ್ವಾಮಿಯನ್ನು ಮದುವೆಯಾಗಲು ಬಯಸುತ್ತೇನೆ. ನಿತ್ಯಾನಂದ ಸ್ವಾಮಿ ಬಗ್ಗೆ ಅದೆಷ್ಟೇ ವಿವಾದಗಳಿದ್ದರೂ ಸಾವಿರಾರು ಭಕ್ತರು ಪೂಜಿಸುತ್ತಾರೆ. ನಾನು ಅವರನ್ನು ಮದುವೆಯಾದರೆ, ನಾನು ನನ್ನ ಹೆಸರನ್ನು ಸಹ ಬದಲಾಯಿಸಬೇಕಾಗಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಇನ್ನು ನಿತ್ಯಾನಂದ ಸ್ವಾಮಿ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಸತ್ತಿದ್ದಾರೆ ಎಂಬ ವದಂತಿ ಕೇಳಿ ಬಂದ ಬೆನ್ನಲ್ಲೇ ಪ್ರಿಯಾ ಆನಂದ್ ಇಂತಹುದ್ದೊಂದು ಹೇಳಿಕೆ ನೀಡಿರುವುದು ಭಾರೀ ಅಚ್ಚರಿಗೆ ಕಾರಣವಾಗಿದೆ.
Nithyananda health ಬಿಡದಿ ನಿತ್ಯಾನಂದನಿಗೆ ಅನಾರೋಗ್ಯ, ಸಾವಿನ ವದಂತಿ ತಳ್ಳಿ ಹಾಕಿದ ಕೈಲಾಸ!
ಪ್ರಿಯಾ ಆನಂದ್ ಈ ಕಾಮೆಂಟ್ ಅಂತರ್ಜಾಲದಲ್ಲಿ ವೈರಲ್
ಪ್ರಿಯಾ ಆನಂದ್ ಅವರ ಈ ಕಾಮೆಂಟ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಆಕೆ ಜೋಕ್ ಹೇಳುತ್ತಿದ್ದಾರೆ ಎಂದು ಹಲವರು ಹೇಳುತ್ತಿದ್ದರೂ ಪ್ರಿಯಾ ಆನಂದ್ ಮಾತ್ರ ಇನ್ನೂ ಸ್ಪಷ್ಟನೆ ನೀಡಿಲ್ಲ.ನಿತ್ಯಾನಂದ ಸ್ವಾಮಿ ಭಾರತದಿಂದ ಪರಾರಿಯಾಗಿದ್ದಾರೆ. ಅತ್ಯಾಚಾರ ಮತ್ತು ಅಪಹರಣದ ಆರೋಪವಿದೆ. ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳು ನಡೆಯುತ್ತಿವೆ.ಅಲ್ಲದೆ ತಮ್ಮದೇ ಆದ ಕೈಲಾಸ ಎಂಬ ಹೊಸ ದ್ವೀಪ ರಾಷ್ಟ್ರವನ್ನು ರಚಿಸಿರುವುದಾಗಿ ಘೋಷಿಸಿದರು.
ಇನ್ನು ಪ್ರಿಯಾ ಆನಂದ್ ಬಗ್ಗೆ ಹೇಳುವುದಾದರೆ ತಮಿಳು ಮತ್ತು ತೆಲುಗಿನ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2009 ರಲ್ಲಿ ತಮಿಳು ಚಿತ್ರ ವಾಮನನ್ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ, ಅವರು ರಾಣಾ ದಗ್ಗುಬಾಟಿ ಅವರೊಂದಿಗೆ ತೆಲುಗು ಸಿನಿಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಇದಲ್ಲದೆ, ಅವರು 2012 ರಲ್ಲಿ ಹಿಂದಿ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ಜನಪ್ರಿಯ ಸಿನಿಮಾ ಇಂಗ್ಲಿಷ್-ವಿಂಗ್ಲಿಷ್‌ನಲ್ಲೂ ಅವರು ಕಾಣಿಸಿಕೊಂಡಿದ್ದಾರೆ
ಬಿಡದಿ ನಿತ್ಯಾನಂದ ಆಶ್ರಮದಿಂದ ಮಲೇಷ್ಯಾ ಪ್ರಜೆ ನಾಪತ್ತೆ
ಸುಶಾಂತ್ ಜೊತೆ ಮಾ ನೀಲ್ಲ ಟ್ಯಾಂಕ್ ಎಂಬ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ ಪ್ರಿಯಾ ಆನಂದ್. ಈ ವೆಬ್ ಸರಣಿಯನ್ನು ವರುಡು ಕವಲೇನು ಖ್ಯಾತಿಯ ನಿರ್ದೇಶಕಿ ಲಕ್ಷ್ಮಿ ಸೌಜನ್ಯ ನಿರ್ದೇಶಿಸಿದ್ದಾರೆ. ಈ ವೆಬ್ ಸರಣಿಯು ಜುಲೈ 15 ರಿಂದ ಜೀ5 ನಲ್ಲಿ ಪ್ರಸಾರವಾಗಲಿದೆ.