
ಬೆಂಗಳೂರು (ಫೆ.12): ಯೂಟ್ಯೂಬ್ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಅಶ್ಲೀಲ ಮಾತುಗಳನ್ನಾಡಿ ವಿವಾದಕ್ಕೆ ಈಡಾಗಿರುವ ಪ್ರಖ್ಯಾತ ಯೂಟ್ಯೂಬರ್ ಹಾಗೂ ಪಾಡ್‌ಕಾಸ್ಟರ್ ರಣವೀರ್ ಅಲ್ಲಾಬಾದಿಯಾ ಈಗ ವಿವಾದದ ಕೇಂದ್ರಬಿಂದು. ಅವರ ವಿರುದ್ಧ ವಿವಿಧ ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಾಗಿದ್ದು, ಸಂಸತ್‌ನಲ್ಲೂ ಈ ವಿಚಾರವಾಗಿ ಚರ್ಚೆಯಾಗುವ ಸಾಧ್ಯತೆ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನೋ ಹೆಸರಿನಲ್ಲಿ ಯೂಟ್ಯೂಬ್‌ನಲ್ಲಿ ಬಾಯಿಗೆ ಬಂದಂತೆ ಬೇಕಾಬಿಟ್ಟಿಯಾಗಿ ಮಾತನಾಡುವ ಹಲವು ಸ್ಟ್ಯಾಂಡ್‌ಅಪ್ ಕಮಿಡಿಯನ್‌ಗಳು, ಪಾಡ್‌ಕಾಸ್ಟರ್‌ಗಳು ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಕಲಿಯಬೇಕಾದ ಪಾಠ ಎನ್ನುವಂತೆ ಮುಂಬೈ ಪೊಲೀಸ್ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲು ಮಾಡಿದೆ. ಅಶ್ಲೀಲತೆಗೆ ಸಂಬಂಧಿಸಿದ ಕೃತ್ಯವನ್ನು ಸಾರ್ವಜನಿಕವಾಗಿ ಮಾಡಿದಲ್ಲಿ ಅದಕ್ಕೆ ಇರುವ ಶಿಕ್ಷೆಯ ಪ್ರಮಾಣವೇನು ಅನ್ನೋದನ್ನು ರಣವೀರ್ ಅಲ್ಲಾಬಾದಿಯಾ ಮೇಲೆ ಹಾಕಲಾಗಿರುವ ಕೇಸ್‌ನೊಂದಿಗೆ ವಿವರಿಸಲಾಗಿದೆ.
ರಣವೀರ್ ಮೇಲೆ ಹಾಕಲಾಗಿರುವ ಮೊದಲ ಕೇಸ್ ಐಪಿಸಿ 296. ಇದು ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ ಹಾಗೂ ಹಾಡುಗಳನ್ನು ಹಾಡಿದಲ್ಲಿ ಹಾಕುವ ಸೆಕ್ಷನ್ ಆಗಿದೆ. ಸಾರ್ವಜನಿಕ ಸ್ಥಳಗಳು ಸುರಕ್ಷಿತ ಮತ್ತು ಆಕ್ಷೇಪಾರ್ಹ ವಿಷಯಗಳಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಗುರಿಯಾಗಿದೆ. ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಅಶ್ಲೀಲ ಕೃತ್ಯ ಮಾಡಿದಲ್ಲಿ ಆತನಿಗೆ 3 ತಿಂಗಳ ಜೈಲು ಶಿಕ್ಷೆ ಹಾಗೂ 1 ಸಾವಿರದವರೆಗೆ ದಂಡ ವಿಧಿಸಬಹುದು. ಅಥವಾ ಎರಡನ್ನೂ ವಿಧಿಸಬಹುದು ಎಂದು ಸೆಕ್ಷನ್ ಹೇಳುತ್ತದೆ.
ಜನ್ಮತಾಳಿದ ಬಳಿಕ ಮತ್ತೆ ಎಂದಾದರೂ 'ಅದನ್ನ' ನೋಡಿದ್ದೀಯಾ ಎಂದಿದ್ದ ಅಪೂರ್ವ ಮಖೀಜಾಗೂ ಪೊಲೀಸ್ ಕ್ಲಾಸ್!
ಈತನ ವಿರುದ್ಧ ಹಾಕಲಾಗಿರುವ ಮತ್ತೊಂದು ಸೆಕ್ಷನ್ 67. ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಸ್ತುಗಳ ಪ್ರಸರಣದ ಬಗ್ಗೆ ಇದು ಚರ್ಚಿಸುತ್ತದೆ. ಐಟಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಮೊದಲ ಅಪರಾಧಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ. ನಂತರದ ಅಪರಾಧದ ಅಂದರೆ ಎರಡನೆಯ ಅಪರಾಧಕ್ಕೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ.
'ಅಪ್ಪ-ಅಮ್ಮನ ಸೆ** ನೋಡೋಕೆ ಇಷ್ಟಪಡ್ತೀರಾ?' ಬೀರ್ ಬೈಸೆಪ್ಸ್ ಕ್ರಿಯೇಟರ್ ರಣವೀರ್ ಮೇಲೆ ದೇಶಾದ್ಯಂತ ಆಕ್ರೋಶ!
2000 ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಇತರ ವಿಭಾಗ ಐಟಿ ಕಾಯ್ದೆ ಸೆಕ್ಷನ್ 67 ಎ ಅನ್ನೂ ಹಾಕಲಾಗಿದೆ. ಇದು ಎಲೆಕ್ಟ್ರಾನಿಕ್ ರೂಪದಲ್ಲಿ ಲೈಂಗಿಕವಾಗಿ ವಸ್ತುಗಳನ್ನು ಪ್ರಕಟಿಸುವ ಅಥವಾ ರವಾನಿಸುವ ಶಿಕ್ಷೆಯನ್ನು ವ್ಯವಹರಿಸುತ್ತದೆ. ಇದರ ಅಡಿಯಲ್ಲಿ ಅಪರಾಧಗಳನ್ನು ಜಾಮೀನು ರಹಿತ ಎಂದು ವರ್ಗೀಕರಿಸಲಾಗಿದೆ ಅಂದರೆ ಜಾಮೀನು ಸ್ವಯಂಚಾಲಿತವಾಗಿ ನೀಡಲಾಗುವುದಿಲ್ಲ. ಇದು ನ್ಯಾಯಾಂಗ ವಿವೇಚನೆಗೆ ಒಳಪಟ್ಟಿರುತ್ತದೆ. 67 ಎ ಅಡಿಯಲ್ಲಿ ಮೊದಲ ಶಿಕ್ಷೆಯು 10 ಲಕ್ಷ ರೂಪಾಯಿಗಳವರೆಗೆ ದಂಡ ಮತ್ತು 5 ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು ಎರಡನೇ ಅಥವಾ ನಂತರದ ಅಪರಾಧವು 10 ಲಕ್ಷ ರೂಪಾಯಿಗಳವರೆಗೆ ದಂಡ ಮತ್ತು 7 ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು. 67 ಎ ಅಡಿಯಲ್ಲಿ ರಣವೀರ್ ಅಲ್ಲಾಬಾದಿಯಾ ವಿರುದ್ಧ ದೂರುಗಳನ್ನು ದಾಖಲಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.