ನಟ ಸುಶಾಂತ್‌ ಸಾವಿನ ಬಳಿಕ ಕಾರ್ಮಿಕನಿಗೆ ನೂರಾರು ಕರೆ: ಏನಿದು ಟ್ವಿಸ್ಟ್? ಯಾರಾತ?

Published : Jul 08, 2020, 08:18 AM ISTUpdated : Jul 08, 2020, 09:04 AM IST
ನಟ ಸುಶಾಂತ್‌ ಸಾವಿನ ಬಳಿಕ ಕಾರ್ಮಿಕನಿಗೆ ನೂರಾರು ಕರೆ: ಏನಿದು ಟ್ವಿಸ್ಟ್? ಯಾರಾತ?

ಸಾರಾಂಶ

ನಟ ಸುಶಾಂತ್‌ ಸಾವಿನ ಬಳಿಕ ಕಾರ್ಮಿಕನಿಗೆ ನೂರಾರು ಕರೆ| ಇದು ತಮಾಷೆಯಲ್ಲ... ಹಾಗಾದ್ರೆ ಏನಿದು ಟ್ವಿಸ್ಟ್? ಆ ಕಾರ್ಮಿಕ ಯಾರು? ಇಲ್ಲಿದೆ ವಿವರ

ಮುಂಬೈ(ಜು.08): ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಯ ಬಳಿಕ ಮಧ್ಯ ಪ್ರದೇಶದ 20 ವರ್ಷದ ಕಾರ್ಮಿಕನೊಬ್ಬನಿಗೆ ನಿರಂತರ ಫೋನ್‌ ಕರೆಗಳು ಬರುತ್ತಿವೆಯಂತೆ. ಇದರಿಂದ ರೋಸಿಹೋದ ಆತ ಪೊಲೀಸರಿಗೆ ದೂರು ನೀಡಿದ್ದಾನೆ.

24 ಗಂಟೆಯಲ್ಲಿ 4.3 ಮಿಲಿಯನ್ ಲೈಕ್ಸ್ ಪಡೆದ 'ದಿಲ್ ಬೇಚಾರಾ'; ಸುಶಾಂತ್ ಖುಷಿ ಪಡಲಿದ್ದಾನೆ!

ಅಷ್ಟಕ್ಕೂ ಆತನಿಗೆ ಫೋನ್‌ ಕರೆಗಳು ಬರಲು ಕಾರಣವೆಂದರೆ, ಸುಶಾಂತ್‌ ಪ್ರೇಯಸಿ ಎನ್ನಲಾದ ಅಂಕಿತಾ ಲೋಖಂಡೆ ಹೆಸರಿನಲ್ಲಿ ರಚಿಸಿದ್ದ ಫೇಸ್‌ಬುಕ್‌ ಪೇಜ್‌. ಈ ಪೇಜ್‌ನಲ್ಲಿ ಕಾರ್ಮಿಕನ ಫೋನ್‌ ನಂಬರ್‌ ನಮೂದಾಗಿದೆ. ಅಂಕಿತಾ ಲೋಖಂಡೆ ಫೇಸ್‌ಬುಕ್‌ ಪೇಜ್‌ಗೆ 40 ಸಾವಿರ ಹಿಂಬಾಲಕರಿದ್ದು, ಇಂದೋರ್‌ನೊಂದಿಗೆ ನಟಿಗೆ ನಂಟಿದೆ.

ಬ್ಯಾಡ್ ಕಮೆಂಟ್ ಸುರಿಮಳೆ, ಸೋಶಿಯಲ್ ಮೀಡಿಯಾದಿಂದ ಕಾಲ್ಕಿತ್ತ ಆಲಿಯಾ ಅಮ್ಮ

ಸುಶಾಂತ್‌ ಆತ್ಮಹತ್ಯೆಯ ಬಳಿಕ ಅನೇಕರು ಫೋನ್‌ ಮಾಡಿ ಅಂಕಿತಾ ಮೇಲಿನ ತಮ್ಮ ಕೋಪವನ್ನು ತೋಡಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್‌ ಪೇಜ್‌ನಲ್ಲಿ ಕಾರ್ಮಿಕನ ಫೋನ್‌ ನಂಬರ್‌ ಬಂದಿದ್ದು ಹೇಗೆ ಎಂಬ ಬಗ್ಗೆ ಪೊಲೀಸರೂ ತಲೆ ಕೆಡಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?