
ಬೆಂಗಳೂರು (ನ.15): ಕನ್ನಡದ ಪ್ರಮುಖ ನಟಿ ಅವರನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗೋವಿಂದರಾಜನಗರ ಪೊಲೀಸರು ಶನಿವಾರ 44 ವರ್ಷದ ಉದ್ಯಮಿ ಹಾಗೂ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಅವರನ್ನು ಬಂಧಿಸಿದ್ದಾರೆ. ಗೋವಿಂದರಾಜನಗರ ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವದ ತಂಡವು ಶ್ರೀಲಂಕಾದಿಂದ ಬಂದಿಳಿದು ಹಿಂದಿರುಗುತ್ತಿದ್ದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರೆಡ್ಡಿಯನ್ನು ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮದ ಎದುರು ಮಾತನಾಡಿದ ಅರವಿಂದ್ ರೆಡ್ಡಿಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ. 'ನಾನು ಅವರಿಗೆ ಪೋನ್ ಮಾಡಿ ತೊಂದರೆ ಕೊಡ್ತಿದ್ದೇನೆ ಅಂತಾ ಆರೋಪ ಮಾಡಿದ್ದಾರೆ. ಆಕೆಯ ಫ್ರೆಂಡ್‌ಗೆ ಮತ್ತು ಆತನ ಪತ್ನಿಗೆ ನಾನು ಪತ್ರ ಕಳಿಸಿದ್ದೇನೆ ಎಂದೂ ಹೇಳಿದ್ದಾರೆ. 2023ರಲ್ಲಿ ನನಗೆ ನಟಿ ಪರಿಚಯ. ಶ್ರೀಲಂಕಾದ ಟೂರ್ನಮೆಂಟ್‌ನಲ್ಲಿ ನನಗೆ ಪರಿಚಯವಾಗಿದ್ದರು. ನಂತರ ನನಗೆ ಹಾಗೂ ನನ್ನ ಸ್ನೇಹಿತರಿಗೆ ಇವರು ಹತ್ತಿರವಾದರು'ಎಂದು ಹೇಳಿದ್ದರು.
ನಂತರ ನಮ್ಮಿಬ್ಬರ ನಡುವೆ ಲಿವ್ ಇನ್ ರಿಲೇಷನ್‌ಷಿಪ್ ಆರಂಭವಾಗಿತ್ತು. ಇವರು ತಾಂಜೇನಿಯಾಗೆ ಹುಡುಗನ ಜೊತೆ ಟ್ರಿಪ್ ಹೋಗಿದ್ದರು. ಆ ಹುಡುಗ ಮನೆಗೆ ಬಂದು ಹೋಗ್ತಾ ಇರೋದು ಗೊತ್ತಾಗಿತ್ತು. ಇದನ್ನು ಪ್ರಶ್ನೆ ಮಾಡಿದ ಬಳಿಕ ನಾವಿಬ್ಬರೂ ದೂರ ಆದೆವು. 2024ರಲ್ಲಿ ಅವರ ಫೋಟೋವನ್ನು ಅಶ್ಲೀಲವಾಗಿ ಪೋಸ್ಟ್ ಮಾಡಿದ್ದೇನೆ ಅಂತಾ ಆರೋಪ ಮಾಡಿದ್ದರು. ಆ ಫೋಟೋದಲ್ಲಿ ಯಾವುದೇ ತಪ್ಪು ಇದ್ದಿರಲಿಲ್ಲ. ಅವರ ಫ್ಯಾನ್ಸ್ ಕ್ಲಬ್ ಹಾಕಿದ್ದ ಫೋಟೋವನ್ನೇ ನಾನು ಇನ್ಸ್‌ಟಾದಲ್ಲಿ ಹಾಕಿದ್ದೆ ಎಂದು ಅರವಿಂದ್ ರೆಡ್ಡಿ ಹೇಳಿದ್ದಾರೆ.
ಇತ್ತೀಚೆಗೆ ನಾನು ಅವರ ಮನೆ ಮಾಲೀಕರಿಗೆ ಫೋಟೋ ಶೇರ್ ಮಾಡಿದ್ದೇನೆ ಅಂತಾ ಆರೋಪಿಸಿದ್ದಾರೆ. ಇದಕ್ಕಾಗಿ ಆರ್‌ಆರ್ ನಗರದ ಪೊಲೀಸರು ನೋಟಿಸ್ ಕೊಟ್ಟಿದ್ದರು. ಆಗ ನಾನು ಶ್ರೀಲಂಕಾದಲ್ಲಿದೆ. ಇವತ್ತು ಪೊಲೀಸ್ ಠಾಣೆಗೆ ಹೇಳಿಕೆ ಕೊಡಲು ಬಂದಿದ್ದೇನೆ. ಅಷ್ಟರ ವೇಳೆಗೆ ಎಲ್‌ಓಸಿ ಮಾಡಿ ನನ್ನನ್ನು ಠಾಣೆಗೆ ಕರೆತಂದರು. ಸ್ಟೇಷನ್ ಬೇಲ್ ಇದ್ದರೂ ಕೂಡ ಕೋರ್ಟ್ ಎದುರು ನಿಲ್ಲಿಸಿದರು. ಕೋರ್ಟ್ ಜಾಮೀನು ಕೊಟ್ಟಿದೆ ಎಂದರು.
ಪೊಲೀಸ್ ಅಧಿಕಾರಿಗಳು ನನ್ನ ಕಥೆಯನ್ನೂ ಕೇಳಿದ್ದಾರೆ. ಪತ್ರ ಹಾಗೂ ಫೋಟೋ ಕಳಿಸಿದ್ದು ಯಾರು ಅನ್ನೋದು ನನಗಂತೂ ಗೊತ್ತಿಲ್ಲ. ಆರೋಪ ಬರೋಕೆ ಏನು ಕಾರಣ ಅನ್ನೋದು ಗೊತ್ತಿಲ್ಲ. ಸೈಮಾಗಾಗಿ ದುಬೈಗೆ, ತಾಂಜಾನಿಯಾಗೆ ಹೋಗಲು ಆಕೆಗೆ ನಾನೇ ಸ್ಪಾನ್ಸರ್ ಮಾಡಿದ್ದೆ. ಅವರು ನನ್ನ ಪಾರ್ಟ್‌ನರ್ ಆಗಿದ್ದ ಕಾರಣಕ್ಕೆ ಏನು ಬೇಕೋ ಎಲ್ಲವನ್ನೂ ಮಾಡುತ್ತಿದ್ದೆ. ಆದರೆ, ಅವರು ಬೇರೆ ಹುಡುಗನ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಈಕೆ ನನ್ನನ್ನು ಭೇಟಿಯಾಗಿದ್ದು 2023ರ ಮಾರ್ಚ್ 20 ರಂದು. 2024ರಲ್ಲಿ ನಾನು ಆಕೆಗೆ ಪೋರ್ಶೆ ಕಾರು ಕೊಡಿಸಿದ್ದೆ. ಆಕೆಯ ಹೆಸರಲ್ಲಿ ಕಸ್ಟಮೈಸ್ಡ್ ಮಾಡಿ ತರಿಸಿದ್ದೆ. ಆಕೆಗೆ ಗಿಫ್ಟ್ ಆಗಿ ನೀಡಿದ್ದೆ. ಅವರ ತಮ್ಮನ ಮದುವೆಗೆ ಅವರ ಮನೆ ಗೃಹಪ್ರವೇಶಕ್ಕೆ ಸಹಾಯ ಮಾಡಿದೆ. ಈಗ ನನ್ನ ಮೇಲೆ ಬೇಡವಾದ ಅಪವಾದ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಆಕೆಗೆ ಕೊಟ್ಟಿದ್ದ ಕಾರು ಈಗ ನನ್ನ ಬಳಿಯೇ ಇದೆ. ಸೈಟ್ ಮಾತ್ರ ಆಕೆಯ ಹೆಸರಲ್ಲಿ ಅಗ್ರಿಮೆಂಟ್ ಮಾಡಿ ನೋಂದಣಿ ಮಾಡಿದ್ದೇನೆ. ಹರ್ಷ ಅನ್ನೊರ ಅಕೌಂಟ್ ನಿಂದ ದುಡ್ಡು ಬಂದಿದೆ. ಐ ವಿಲ್ ಕಂ ಬ್ಯಾಕ್ ಅಂತ ಹೋದವಳು ಮತ್ತೆ ಬಂದಿಲ್ಲ. ಮಹಿಳಾ ಸ್ಟೇಷನ್ ಗೆ ಕರೆಸೋವರೆಗೂ ಆಕೆಯನ್ನು ನೋಡಿಲ್ಲ. ನನ್ನ ತಪ್ಪಿದ್ರೆ ನನಗೆ ಶಿಕ್ಷೆ ಆಗುತ್ತೆ.ಅವರ ತಪ್ಪಿದ್ರೆ ಅವರಿಗೆ ಶಿಕ್ಷೆ ಆಗತ್ತೆ. ಇದು ಮರೆತಿರೋ ಕಥೆ. ಮರೆತಿರೋ ಕಥೆ ಬಗ್ಗೆ ನಾನು ಯೋಚನೆ ಮಾಡಲ್ಲ. ಮತ್ತೊಬ್ಬರ ಜೊತೆ ಸಂಸಾರ ಮಾಡ್ತಿದ್ದಾರೆ ಅನ್ನೊ ವಿಚಾರ ಕಿವಿಗೆ ಬಿದ್ದು ದೂರ ಆದೆವು. ನಾನು ಕೌಂಟರ್ ಅಟ್ಯಾಕ್ ಮಾಡಲ್ಲ. ಸಾಬೀತು ಮಾಡಲು ಏನೇನು ದಾಖಲೆ ಬೇಕೋ ಅದನ್ನ ನಾನು ಕೊಡುತ್ತೇನೆ. 2024 ಜೂನ್ 10 & 11 ರಂದು ಮದುವೆ ಮಾಡ್ಕೋಬೇಕು ಅಂದುಕೊಂಡಿದ್ದೆವು. ಆದರೆ ಆಗಲಿಲ್ಲ ಎಂದು ಅರವಿಂದ್ ರೆಡ್ಡಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.