ಸುಹಾನಿ ಭಟ್ನಾಗರ್‌ ಸಾವಿಗೆ ಕಾರಣವಾದ Dermatomyositis ಯಾಕೆ ಡೇಂಜರಸ್‌, Know all about it

By Santosh Naik  |  First Published Feb 18, 2024, 4:12 PM IST

suhani bhatnagar dermatomyositis ದಂಗಲ್‌ ಸಿನಿಮಾದ ನಟಿ ಸುಹಾನಿ ಭಟ್ನಾಗರ್‌ ಫೆ.16 ರಂದು ನಿಧನರಾದರು. ಅವರಿಗೆ ತೀರಾ ಅಪರೂಪದ ಡರ್ಮಟೊಮಿಯೊಸಿಟಿಸ್ (dermatomyositis) ಕಾಯಿಲೆಯಿತ್ತು ಎಂದು ಅವರ ತಂದೆ ತಾಯಿ ಹೇಳಿದ್ದಾರೆ. ಇದು ಚರ್ಮ ದದ್ದುಗಳು ಹಾಗೂ ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗುತ್ತದೆ.



ಬೆಂಗಳೂರು (ಫೆ.18): ದಂಗಲ್‌ ಸಿನಿಮಾದಲ್ಲಿ ನಟಿಸಿದ್ದ ಸುಹಾನಿ ಭಟ್ನಾಗರ್‌ ತೀರಾ ಅಪರೂಪದ ಡರ್ಮಟೊಮಿಯೊಸಿಟಿಸ್ (dermatomyositis) ಎನ್ನುವ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು. ಕೊನೆಗೆ ಇದರಿಂದಾಗಿಯೇ ತಮ್ಮ 19ನೇ ವಯಸ್ಸಿಗೆ ಸಾವು ಕಂಡಿದ್ದಾರೆ ಎಂದು ಅವರ ತಂದೆ ತಿಳಿಸಿದ್ದಾರೆ. ಎರಡು ತಿಂಗಳ ಹಿಂದೆ ಸ್ವತಃ ಸುಹಾನಿ ಭಟ್ನಾಗರ್‌ ಅವರ ತಂದೆ ಈ ವಿಆರವನ್ನು ಮಾಧ್ಯಮಗಳಿಗೆ ತಿಳಿಸಿದ್ದರು. ಆರಂಭದಲ್ಲಿ ಕೈಗಳಲ್ಲಿ ಮಾತ್ರವೇ ಊತ ಕಾಣಿಸಿಕೊಂಡಿದ್ದರೆ, ನಂತರ ಇಡೀ ದೇಹಕ್ಕೆ ವ್ಯಾಪಿಸಿತ್ತು. ತುಂಬಾ ದೀರ್ಘಕಾಲದವರೆಗೆ ಸುಹಾನಿಗೆ ಇದ್ದ ಕಾಯಿಲೆಯ ಏನು ಅನ್ನೋದೇ ಯಾರಿಗೂ ಗೊತ್ತಾಗಿರಲಿಲ್ಲ. ಆದರೆ, 11 ದಿನಗಳ ಹಿಂದೆ ದೆಹಲಿಯ ಏಮ್ಸ್‌ಗೆ ದಾಖಲಿಸಿದಾಗ ಅಲ್ಲಿ ನಡೆದ ಪರೀಕ್ಷೆಯಲ್ಲಿ ಆಕೆಗೆ ಅಪರೂಪದ ಸ್ವಯಂ ನಿರೋಧಕ ಕಾಯಿಲೆ ಇರುವುದು ತಿಳಿದುಬಂದಿತ್ತು. ಈ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳಲು ಮೊದಲ ಹಂತವಾಗಿ ಸ್ಟೀರಾಯ್ಡ್ಸ್‌ ಪಡೆದುಕೊಂಡಿದ್ದರಿಂದ ಆಕೆಯ ಸ್ವಯಂ ರೋಗ ನಿರೋಧಕ ಶಕ್ತಿ ದುರ್ಬಲಗೊಂಡಿತ್ತು. ಇದರಿಂದಾಗಿ ಸೋಂಕು ಆಕೆಗೆ ತಗುಲಿದ್ದರಿಂದ ಶ್ವಾಸಕೋಶದ ಮೇಲೆ ಪರಿಣಾಮ ಬೀರಿತು. ಇದು ಉಸಿರಾಟದ ಸಮಸ್ಯೆಗೆ ಕಾರಣವಾಗಿ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಕೊನೆಗೆ ಸುಹಾನಿ ಸಾವು ಕಂಡಿದ್ದಾರೆ.

ಡರ್ಮಟೊಮಿಯೊಸಿಟಿಸ್ ಎಂದರೇನು?: ಡರ್ಮಟೊಮಿಯೊಸಿಟಿಸ್ ಒಂದು ಅಪರೂಪದ ಉರಿಯೂತದ ಕಾಯಿಲೆಯಾಗಿದ್ದು ಅದು ಸ್ನಾಯುಗಳು ಮತ್ತು ಚರ್ಮ ಎರಡನ್ನೂ ಪರಿಣಾಮ ಬೀರುತ್ತದೆ. ಇದು ಸ್ನಾಯು ದೌರ್ಬಲ್ಯ ಮತ್ತು ಚರ್ಮದ ದದ್ದುಗೆ ಕಾರಣವಾಗುತ್ತದೆ. ಇದನ್ನು ಅಪರೂಪದಲ್ಲಿ ಅಪರೂಪದ ಕಾಯಿಲೆ ಎಂದು ವರ್ಗೀಕರಿಸಲಾಗಿದೆ, ಜನಸಂಖ್ಯೆಯ ಒಂದು ಸಣ್ಣ ಶೇಕಡಾವಾರು ಮಾತ್ರ ಪರಿಣಾಮ ಬೀರುತ್ತದೆ. ಮೇಯೊ ಕ್ಲಿನಿಕ್ ಪ್ರಕಾರ, ಡರ್ಮಟೊಮಿಯೊಸಿಟಿಸ್‌ನ ಉಂಟಾಗಲು ಕಾರಣವೇನು ಅನ್ನೋದು ತಿಳಿದುಬಂದಿಲ್ಲ. ಆದರೆ ರೋಗವು ಸ್ವಯಂ ನಿರೋಧಕ ಶಕ್ತಿಯನ್ನು ಬಹಳವಾಗಿ ಕುಂಠಿತ ಮಾಡುತ್ತದೆ ಎನ್ನುವುದು ಸಾಮಾನ್ಯ ಲಕ್ಷಣವಾಗಿದೆ. ಇದರಿಂದಾಗಿ ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ನಿಮ್ಮ ದೇಹದ ಅಂಗಾಂಶಗಳ ಮೇಲೆಯೇ ದಾಳಿ ಮಾಡುತ್ತದೆ. ಜೆನೆಟಿಕ್ಸ್, ಸೋಂಕುಗಳು ಅಥವಾ ಕೆಲವು ಸೋಂಕುಕಾರಿತ ಅಂಶಗಳಿಗೆ ಒಡ್ಡಿಕೊಳ್ಳುವುದು ಡರ್ಮಟೊಮಿಯೊಸಿಟಿಸ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ರೋಗವು ಅಗತ್ಯವಾದ ಆನುವಂಶಿಕ ಮತ್ತು ಪರಿಸರ ಅಂಶಗಳ ವಿಶಿಷ್ಟ ಸಂಯೋಜನೆಯಿಂದಲೂ ಉಂಟಾಗಬಹುದು ಎನ್ನುತ್ತಾರೆ.

ಡರ್ಮಟೊಮಿಯೊಸಿಟಿಸ್‌ನ ಲಕ್ಷಣಗಳೇನು: ಡರ್ಮಟೊಮಿಯೊಸಿಟಿಸ್ ಸ್ನಾಯು ದೌರ್ಬಲ್ಯ, ಚರ್ಮದ ದದ್ದು, ಕೀಲು ನೋವು ಮತ್ತು ಆಹಾರ ಸೇವಿಸಲು ಸಮಸ್ಯೆ ಸೇರಿದಂತೆ ವಿಶಿಷ್ಟ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಸ್ನಾಯು ಮತ್ತು ಚರ್ಮರೋಗ ರೋಗಲಕ್ಷಣಗಳ ಸಂಯೋಜನೆಯಿಂದಾಗಿಯೇ ಕೆಲವೊಮ್ಮೆ ರೋಗನಿರ್ಣಯವನ್ನು ಕಷ್ಟಕರವಾಗಿಸುತ್ತದೆ.

Latest Videos

19 ವಯಸ್ಸಿಗೆ ಸಾವು ಕಂಡ ದಂಗಲ್‌ ನಟಿ ಸುಹಾನಿ ಭಟ್ನಾಗರ್‌ಗೆ ಇತ್ತು ವಿಚಿತ್ರ ರೋಗ, ಹೀಗಿರುತ್ತಾ ಈ ಕಾಯಿಲೆಯ ಲಕ್ಷಣ!

ಡರ್ಮಟೊಮಿಯೊಸಿಟಿಸ್ ಚಿಕಿತ್ಸೆ: ಡರ್ಮಟೊಮಿಯೊಸಿಟಿಸ್ ಯಾವುದೇ ಚಿಕಿತ್ಸೆ ಇಲ್ಲ. ಆದರೆ, ವಿವಿಧ ಚಿಕಿತ್ಸಾ ವಿಧಾನಗಳು ರೋಗಲಕ್ಷಣಗಳನ್ನು ಬೇಗನೇ ಕಂಡುಕೊಳ್ಳಲು ಸಹಾಯ ಮಾಡುತ್ತದೆ.ವೈದ್ಯಕೀಯ ಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಇಮ್ಯುನೊಸಪ್ರೆಸಿವ್ ಔಷಧಿಗಳು, ಫಿಸಿಕಲ್‌ ಥೆರಪಿ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ, ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್ (IVIG) ಚಿಕಿತ್ಸೆಯನ್ನು ಒಳಗೊಂಡಿರುತ್ತದೆ. ಈ ಕಾಯಿಲೆಯ ಚಿಕಿತ್ಸೆಯ ಸಂಕೀರ್ಣ. ಆದ್ದರಿಂದ ಚೇತರಿಕೆಯ ದಿನಗಳು ಕೂಡ ದೀರ್ಘವಾಗಿರುತ್ತದೆ ಎಂದು ಹೇಳಲಾಗಿದೆ.

Suhani Bhatnagar: ಆಮೀರ್‌ ಖಾನ್‌ 'ದಂಗಲ್‌' ನಟಿ ಸಾವು..ಔಷಧಿಯ ಅಡ್ಡ ಪರಿಣಾಮ ಕಾರಣ?

click me!