ಬಾಲಿವುಡ್‌ನ ಪ್ರಖ್ಯಾತ ಸಿನಿಮಾ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಚೆಕ್ ಬೌನ್ಸ್ ಕೇಸ್‌ನಲ್ಲಿ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರ ಬೆನ್ನಲ್ಲಿಯೇ ಇದು ನನ್ನ ಮೇಲೆ ಹಾಕಿರುವ ಸುಳ್ಳು ಕೇಸ್ ಎಂದು ಸಿನಿಮಾ ನಿರ್ಮಾಪಕ ಹೇಳಿದ್ದಾರೆ.
ಮುಂಬೈ (ಫೆ.17): ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕ ರಾಜಕುಮಾರ್ ಸಂತೋಷಿಗೆ ಜಾಮ್‌ನಗರ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸನ್ನಿ ಡಿಯೋಲ್, ಪ್ರೀತಿ ಜಿಂಟಾ ಅಭಿನಯದ ಲಾಹೋರ್ 1947 ಸಿನಿಮಾದ ಮೂಲಕ ಮರಳಿ ನಿರ್ದೇಶನ ಸಾಹಕ್ಕೆ ಇಳಿದಿರುವ ರಾಜ್‌ಕುಮಾರ್ ಸಂತೋಷಿ ವಿರುದ್ಧ ಪ್ರಮುಖ ಕೈಗಾರಿಕೋದ್ಯಮಿ ಚೆಕ್ ಬೌನ್ಸ್ ಕೇಸ್ ದಾಖಲಸಿದ್ದರು. ಪ್ರಮುಖ ಕೈಗಾರಿಕೋದ್ಯಮಿ ಮತ್ತು ಶಿಪ್ಪಿಂಗ್ ಕಂಪನಿಯ ಮಾಲೀಕರಾಗಿರುವ ವ್ಯಕ್ತಿಗೆ ರಾಜ್‌ಕುಮಾರ್ ಸಂತೋಷಿ 10 ಲಕ್ಷ ರೂಪಾಯಿ ಮೌಲ್ಯದ 10 ಚೆಕ್‌ಗಳನ್ನು ನೀಡಿದ್ದರು. ಆದರೆ, ಎಲ್ಲಾ ಚೆಕ್‌ಗಳು ಬೌನ್ಸ್ ಆಗಿದ್ದರಿಂದ ಕಾನೂನು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ದೂರುದಾರನಾಗಿರುವ ಜಾಮ್‌ನಗರ ಮೂಲದ ಕೈಗಾರಿಕೋದ್ಯಮಿ ಹಾಗೂ ಶಿಪ್ಪಿಂಗ್ ದೈತ್ಯ ಅಶೋಕ್ ಲಾಲ್‌ಗೆ ರಾಜ್‌ಕುಮಾರ್ ಸಂತೋಷಿ 10 ಲಕ್ಷ ರೂಪಾಯಿಗಳ 10 ಚೆಕ್‌ಗಳನ್ನು ನೀಡಿದ್ದರು. ಒಟ್ಟಾರೆಯಾಗಿ 1 ಕೋಟಿ ರೂಪಾಯಿಯ ಪ್ರಕರಣದಲ್ಲಿ ರಾಜ್‌ಕುಮಾರ್ ಸಂತೋಷಿಗೆ ಶಿಕ್ಷೆಯಾಗಿದೆ ಎಂದು ಉದ್ಯಮಿ ಪರ ವಕೀಲ ಪೀಯುಷ್ ಭೋಜಾನ ಶನಿವಾರ ತಿಳಿಸಿದ್ದಾರೆ. ಚಿತ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ರಾಜ್‌ಕುಮಾರ್ ಸಂತೋಷಿಗೆ ಅಶೋಕ್ ಲಾಲ್ 1 ಕೋಟಿ ರೂಪಾಯಿ ನೀಡಿದ್ದರು.
ಆದರೆ, ಈ ಹಣವನ್ನು ಅವರಿಗೆ ತೀರಿಸಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ 10 ಲಕ್ಷ ರೂಪಾಯಿಯ ತಲಾ 10 ಚೆಕ್‌ಅನ್ನು ಅಶೋಕ್ ಲಾಲ್‌ಗೆ ನೀಡಿದ್ದರು. ನಿಗದಿತ ಸಮಯಕ್ಕೆ ಈ ಚೆಕ್‌ಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಿದಾಗ ಎಲ್ಲಾ ಚೆಕ್‌ಗಳೂ ಬೌನ್ಸ್ ಆಗಿದೆ ಎಂದು ಉದ್ಯಮಿ ತಿಳಿಸಿದ್ದಾರೆ. ಆ ಬಳಿಕ ಇದೇ ವಿಚಾರವಾಗಿ ರಾಜ್‌ಕುಮಾರ್ ಸಂತೋಷಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.
ಕೊನೆಗೆ, ಚಲನಚಿತ್ರ ನಿರ್ಮಾಪಕರೊಂದಿಗೆ ಸಂಪರ್ಕವನ್ನು ಸ್ಥಾಪಿಸುವ ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ ಅವರು ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ಮೊಕದ್ದಮೆ ಹೂಡಿದರು. ಶನಿವಾರ ನಡೆದ ಪ್ರಕರಣದ ವಿಚಾರಣೆ ವೇಳೆ, ಸಂತೋಷಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ, ಉದ್ಯಮಿಗೆ ನೀಡಬೇಕಾದ ಸಾಲದ ದುಪ್ಪಟ್ಟು ಮರುಪಾವತಿಯನ್ನು ಮಾಡುವಂತೆ ಹೇಳಿದೆ.
A Gujarat court in Jamnagar on 17 February sentenced filmmaker Rajkumar Santoshi to 2 years in jail in a cheque return case and directed him to pay ₹2 crore to the complainant, reported news agency PTI. The court has granted the filmmaker a 30-day stay to appeal the order. pic.twitter.com/63SHWvyXkq
— The Cheshire Cat (@C90284166)ಮತ್ತೆ ಬಂದೇ ಬಿಡ್ತು N1 ಕ್ರಿಕೆಟ್ ಅಕಾಡೆಮಿ ಪ್ರೆಸೆಂಟ್ TPL; ಟೆಲಿವಿಷನ್ ಪ್ರೀಮಿಯರ್ ಲೀಗ್ ಹವಾ ಶುರು!
ರಾಜ್‌ಕುಮಾರ್ ಸಂತೋಷಿ ಪ್ರಸ್ತುತ ಲಾಹೋರ್ 1947 ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅಮೀರ್ ಖಾನ್ ಪ್ರೊಡಕ್ಷನ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇದೇ ಮೊದಲ ಬಾರಿಗೆ ಸನ್ನಿ ಡಿಯೋಲ್, ರಾಜ್‌ಕುಮಾರ್ ಸಂತೋಷಿ ಹಾಗೂ ಅಮೀರ್ ಖಾನ್ ಸಿನಿಮಾಕ್ಕೆಆಗಿ ಜೊತೆಯಾಗಿದ್ದಾರೆ. ಅದಲ್ಲದೆ, ಅಮೀರ್‌ಖಾನ್ ಪ್ರೊಡಕ್ಷನ್‌ನ 17ನೇ ಸಿನಿಮಾ ಇದಾಗಿದೆ. ರಾಜ್‌ಕುಮಾರ್ ಸಂತೋಷಿ ಹಾಗೂ ಸನ್ನಿ ಡಿಯೋಲ್ ಈ ಹಿಂದೆ ಮೂರು ಬ್ಲಾಕ್‌ಬಸ್ಟರ್ ಸಿನಿಮಾಗಳಾದ ಘಾಯಲ್, ದಾಮಿನಿ ಹಾಗೂ ಘಾತಕ್‌ನಲ್ಲಿ ಜೊತೆಯಾಗಿದ್ದರು.
19 ವಯಸ್ಸಿಗೆ ಸಾವು ಕಂಡ ದಂಗಲ್ ನಟಿ ಸುಹಾನಿ ಭಟ್ನಾಗರ್‌ಗೆ ಇತ್ತು ವಿಚಿತ್ರ ರೋಗ, ಹೀಗಿರುತ್ತಾ ಈ ಕಾಯಿಲೆಯ ಲಕ್ಷಣ!