ಲಾಗಿನ್‌ ಐಡಿ ಕೊಟ್ಟಿದ್ದಕ್ಕೆ ಮಹುವಾ ಉಚ್ಛಾಟನೆಯಾದ್ರೆ, ದೇಶದ ಆಸ್ತಿ ಸ್ನೇಹಿತನಿಗೆ ಕೊಟ್ಟವನನ್ನು ಏನು ಮಾಡಬೇಕು?

By Santosh Naik  |  First Published Dec 14, 2023, 6:12 PM IST

ನಟ ಕಿಶೋರ್‌ ಕುಮಾರ್‌ ಮತ್ತೆ ಕಿಡಿಕಿಡಿಯಾಗಿದ್ದಾರೆ. ಲೋಕಸಭೆಯಿಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಉಚ್ಛಾಟನೆ ಮಾಡಿದ್ದಕ್ಕೆ ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಕಿಡಿಕಾರಿದ್ದಾರೆ.
 


ಬೆಂಗಳೂರು (ಡಿ.14): ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅತಿದೊಡ್ಡ ಟೀಕಾಕಾರರಾಗಿರುವ ನಟ ಹಾಗೂ ರಂಗಕರ್ಮಿ ಕಿಶೋರ್‌ ಕುಮಾರ್‌ ಮತ್ತೊಮ್ಮೆ ನರೇಂದ್ರ ಮೋದಿ ವಿರುದ್ಧ ಮಾತಿನ ಬಾಣ ಗುರಿ ಮಾಡಿದ್ದಾರೆ. ಪ್ರಶ್ನೆಗಾಗಿ ಹಣ ಕೇಸ್‌ನಲ್ಲಿ ಲೋಕಸಭೆಯ ನೈತಿಕ ಸಮಿತಿಯ ಶಿಫಾರಸಿನಂತೆ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರನ್ನು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅಮಾನತು ಮಾಡು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಕಿಶೋರ್‌ ಬರೆದುಕೊಂಡಿದ್ದು, ನಾಚಿಕೆಗೆಟ್ಟ ವಿಶ್ವಗುರುವಿನ ನವ ಭಾರತಕ್ಕೆ ಸ್ವಾಗತ ಎಂದು ಹೇಳಿದ್ದಾರೆ. ತಮ್ಮ ಲಾಗಿನ್‌ ಐಡಿ ಹಾಗೂ ಪಾಸ್‌ವರ್ಡ್‌ಅನ್ನು ಸ್ನೇಹಿತನಿಗೆ ಕೊಟ್ಟಿದ್ದಕ್ಕೆ ಮಹುನಾ ಮೊಯಿತ್ರಾ ಉಚ್ಛಾಟನೆ ಆಗಬಹುದಾದರೆ, ದೇಶದ ಆಸ್ತಿಯನ್ನು ಸ್ನೇಹಿತನಿಗೆ ಕೊಟ್ಟವನನ್ನು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕಿಶೋರ್‌ ಕುಮಾರ್‌ ಅವರ ಪೋಸ್ಟ್‌ಗೆ ಪರ ವಿರೋಧವಾಗಿ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಹೆಚ್ಚಿನವರು ನಿಮಗೆ ಅರ್ಥ ಆಗದೇ ಇರುವ ವಿಚಾರದಲ್ಲಿ ನೀವು ಪ್ರತಿಕ್ರಿಯೆ ನೀಡಲು ಹೋಗಬಾರದು ಎಂದು ಕಿಶೋರ್‌ ಕುಮಾರ್‌ಗೆ ಕಿವಿಮಾತು ಹೇಳಿದ್ದಾರೆ.
 

ಕಿಶೋರ್‌ ಕುಮಾರ್‌ ಅವರ ಫೇಸ್‌ಬುಕ್‌ ಪೋಸ್ಟ್‌:
ನಾಚಿಕೆಗೆಟ್ಟ ವಿಶ್ವಗುರುವಿನ ನವ ಭಾರತಕ್ಕೆ ಸ್ವಾಗತ. ತಾನು ಮಾಡುತ್ತಿರುವ ಕುಕೃತ್ಯಗಳು ಜಗತ್ತಿಗೆ ಕಾಣುತ್ತಿರುವುದನ್ನು ತಿಳಿದೂ ಮುಂದುವರೆಸುವುದು ಭಂಡತನ, ನಾಚಿಕೆಗೇಡಿತನದ ಪರಾಕಾಷ್ಟೆ. 
ವಿಶ್ವದ ಅತಿ ದೊಡ್ಡ ಸ್ಕ್ಯಾಮ್ ಗಾರ ಎಂದು ಆರೋಪ ಹೊತ್ತ, ನೀತಿ ಆಯೋಗದ ವರದಿಯ ಪ್ರಕಾರ ಯೋಗ್ಯತೆಯೇ ಇಲ್ಲದೇ ಇದ್ದರೂ ಬರೀ ವಿಶ್ವಗುರುವಿಗೆ ತನ್ನ ಏರೋಪ್ಲೇನು ಹತ್ತಿಸಿ ದೇಶದ ಬಹುಪಾಲು ಆಸ್ತಿಯನ್ನು ತನ್ನದಾಗಿಸಿಕೊಂಡ ಅದಾನಿ ವಿರುದ್ಧ ಹಿಂಡನ್ಬರ್ಗ್ ಆರೋಪ ಮತ್ತು ಅದರ ಹಲವು ಸಾಕ್ಷಿಗಳು ಹೊರ ಬಂದು ವರ್ಷವೇ ಕಳೆದರೂ ಕಮಕ್ ಕಿಮಕ್ಕನ್ನದ, ರೈತರನ್ನು ಆತಂಕವಾದಿಗಳೆಂದು ಕರೆದು ಅವರ ಮೇಲೆ ಜೀಪು ಹತ್ತಿಸಲು ತನ್ನ ಮಗನಿಗೆ ಕುಮ್ಮಕ್ಕು ಕೊಟ್ಟ ಗೃಹರಾಜ್ಯ ಸಚಿವ ಟೇನಿ ಬಗ್ಗೆ 2 ವರ್ಷವಾದರೂ ಮಾತಾಡದೇ ಕೈಕಟ್ಟಿ ಕೂತ, ವಿಶ್ವ ಪ್ರಸಿದ್ಧ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಬ್ರಿಜ್ ಭೂಷಣನ ಕೂದಲೂ ಅಲ್ಲಾಡಿಸಲಾಗದ,  ನಾಚಿಕೆಯೇ ಇಲ್ಲದ ಸರ್ಕಾರ ಮೋದಾನಿಯ ಜೋಡಿಯ ಬಣ್ಣ ಬಯಲು ಮಾಡಿದ್ದಕ್ಕೆ, ಆಧಾರವೇ ಇಲ್ಲದ ಆರೋಪದ ನೆಪದಲ್ಲಿ ಬಂಗಾಳದ ದಿಟ್ಟ ಮಹಿಳಾ ಸಂಸದೆ ಮಹುವಾ ಮೊಯಿತ್ರಾರನ್ನು ನಂಬಲಸಾಧ್ಯ ವೇಗದಲ್ಲಿ ಉಚ್ಛಾಟನೆ ಮಾಡಿಬಿಡುತ್ತದೆ …  ಲಾಗಿನ್ ಐಡಿ ಪಾಸ್ವರ್ಡ್ ಸ್ನೇಹಿತನಿಗೆ ಕೊಟ್ಟದ್ದಕ್ಕೆ ಸಂಸತ್ತಿನಿಂದ ಉಚ್ಛಾಟನೆಯಾಗಬಹುದಾದರೆ….    ದೇಶದ ಆಸ್ತಿಗಳನ್ನೆಲ್ಲಾ ಗೆಳೆಯನಿಗೆ ಕೊಟ್ಟ ವಿಶ್ವಗುರುವನ್ನೇನು ಮಾಡಬೇಕು?
ನೋಡಿ ಮೊಯಿತ್ರಾಜೀ ಕಲಿಯಿರಿ ನಮ್ಮ ವಿಶ್ವಗುರುವಿನಿಂದ … ಉಚ್ಛಾಟನೆಯಾಗದೆ ಗೆಳೆಯರಿಗೆ ಲಾಭ ಮಾಡಿಕೊಡುವುದು ಮತ್ತು ಗೆಳೆಯರಿಂದ ಲಾಭ ಪಡೆಯುವುದು ಹೇಗೆ ಎಂದು..

Tap to resize

Latest Videos

ಡಿಸೆಂಬರ್‌ 12 ರಂದು ಕಿಶೋರ್‌ ಶೇರ್‌ ಮಾಡಿಕೊಂಡಿರುವ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ' ನಟನೊಬ್ಬನಿಗೆ ಎಲ್ಲ ವಿಷಯ ಅರ್ಥ ಆಗಬೇಕು ಅಂತ ರೂಲ್ ಇಲ್ಲ. ಅರ್ಥ ಆಗದೆ ಇರೋ ವಿಷಯಕ್ಕೆ ಪ್ರತಿಕ್ರಿಯೆ ಕೊಡಬಾರದು. ವಿಷಯದ ಬಗ್ಗೆ ಅವಗಾಹನೆ ಇಲ್ಲದಿದ್ದಾಗ ಮುಚ್ಕೊಂಡಿರಬೇಕು. ನಿಮ್ಮ ಅಭಿಪ್ರಾಯ ಅಮೂಲ್ಯ, ಯಾರಾದರೂ ಕೇಳಿದರೆ ಕೊಡಿ.' ಎಂದು ಶ್ರೀನಿವಾಸ ಪಶುಪತಿ ಎನ್ನುವವರು ಪೋಸ್ಟ್‌ ಮಾಡಿದ್ದಾರೆ. 'ಆದರೂ ಈ ಅದಾನಿ ಮಾಡಿದ್ದು ತಪ್ಪು.. ಷೇರು ಮಾರುಕಟ್ಟೆಯಲ್ಲಿ ಏರು ಪೇರು ಸಾಮಾನ್ಯ ಆದರೆ ಏಕ್ದಂ ಮೇಲಕ್ಕೆ, ಎಲ್ಲವೂ ಎಲ್ಲಿಂದಲೋ ತನ್ನದೇ ದುಡ್ಡನ್ನು ಹಾಕಿ manipulate ಮಾಡುತ್ತಿರುವುದು ಗೊತ್ತಾಗುತ್ತದೆ . ಸೆಬಿ ಕಣ್ಣಿಗೆ ಕಾಣುವುದಿಲ್ಲ ಎಂದು ತನಿಖೆ ಒಪ್ಪಿಸಿದಾಗಲೆ ಗೊತ್ತಾಯಿತು ಕ್ಲೀನ್ ಚಿಟ್ ಸಿಗುತ್ತದೆ ಎಂದು. ಅಮಾಯಕ ಹೂಡಿಕೆದಾರರು ಈ ಮೋಸಕ್ಕೆ ಹೋಗುತ್ತಿದ್ದಾರೆ ಎನ್ನುವುದು ಬೇಸರ . ದೇಶದ ಬಗ್ಗೆ ಅಭಿಮಾನ ನಿಜ ಮತ್ತು ಇರುತ್ತದೆ. ಆದರೆ ಅದಾನಿ ಅಂತಹ ವ್ಯಕ್ತಿಗಳ ಮೋಸ ಹೊರಗೆ ಬೀಳುವ ಸಮಯ ಬರುತ್ತದೆ.. ಖಂಡಿತ' ಎಂದು ಕಿಶೋರ್‌ ಅವರ ಪೋಸ್ಟ್‌ ಪರವಾಗಿ ಕಾಮೆಂಟ್‌ ಮಾಡಿದ್ದಾರೆ.

ನಟ ಕಿಶೋರ್‌ ಪೋಸ್ಟ್‌ 'ಪನೌತಿಯಿಂದ ಸೋಲುವುದು ಎಷ್ಟು ಸುಳ್ಳೋ, ಜೈಶ್ರೀರಾಮ್‌ನಿಂದ ಗೆಲ್ಲುವುದು ಅಷ್ಟೇ ಸುಳ್ಳು..'

' ನೆನ್ನೆ ಬೆಳಗಾವಿ ಜಿಲ್ಲೆಯಲ್ಲಿ ಒಬ್ಬ ಮಹಿಳೆಯನ್ನ ವಿವಸ್ತ್ರ ಮಾಡಿದ್ದಾರೆ.... ಇದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣವಾಗುತ್ತ ..!? ಹಾಕೋ ಮತ್ತೆ ಅದರ ಬಗ್ಗೆ ಪೋಸ್ಟು ಬಕಿಟ್ಟಿಡಿಯುವ ಗುಲಾಮ' ಎಂದು ಬೆಳಗಾವಿ ಕೇಸ್‌ನಲ್ಲಿ ಕಿಶೋರ್‌ ಕುಮಾರ್‌ ಸುಮ್ಮನಿರುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಟ್ವಿಟರ್ ಸಸ್ಪೆಂಡ್ ಆದದ್ದು ದೈವದ ಬಗ್ಗೆ ಬರೆದ ಪೋಸ್ಟ್‌ನಿಂದಲ್ಲ; ಊಹಾಪೋಹಗಳಿಗೆ ನಟ ಕಿಶೋರ್ ಬ್ರೇಕ್

 

click me!