ಡಿ-ಪಿಕ್ಚರ್ಸ್, ರಿಷಬ್ ಶೆಟ್ಟಿ ಮುಡಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿಯ ಗರಿ!

By Suvarna News  |  First Published Jan 10, 2020, 1:12 PM IST

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಗಿದೆ. ಯಾರಿಗೆ ಯಾವ ಪ್ರಶಸ್ತಿ ಬಂದಿದೆ? ಇಲ್ಲಿದೆ ಫುಲ್ ಲಿಸ್ಟ್
 


ಬೆಂಗಳೂರು (ಜ.10): 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಮೇಘನಾ ರಾಜ್ 'ಇರುವುದೆಲ್ಲವ ಬಿಟ್ಟು' ಚಿತ್ರದ ಅಭಿನಯನಕ್ಕೆ ಬೆಸ್ಟ್ ನಟಿ ಪ್ರಶಸ್ತಿಗೆ ಭಾಜನರಾದರೆ, ಅತ್ಯುತ್ತಮ ನಟ 'ಅಮ್ಮನ ಮನೆ' ಚಿತ್ರಕ್ಕೆ ರಾಘವೇಂದ್ರ ರಾಜ್‌ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 

2017 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

Latest Videos

ಮೊದಲ ಅತ್ಯುತ್ತಮ ಚಿತ್ರ ಎಂದು ಡಿ ಪಿಕ್ಟರ್ಸ್‌ ನಿರ್ಮಾಣ ಹಾಗೂ ಶ್ರೀ ದಯಾಳ್ ಪದ್ಮನಾಭನ್‌ ಅವರ ನಿರ್ದೇಶನದ 'ಆ ಕರಾಳ ರಾತ್ರಿ' ಚಿತ್ರಕ್ಕೆ ದೊರಕಿದೆ. ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ 'ಸಂತಕವಿ ಕನಕದಾಸರ ರಾಮಧಾನ್ಯ ಚಿತ್ರಕ್ಕೆ ದೊರಕಿದೆ. ಅತ್ಯುತ್ತಮ ಮನರಂಜನಾ ಚಿತ್ರ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಆಗಿದ್ದು ರಿಷಬ್ ಶೆಟ್ಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರತಿಷ್ಠಿತ ಪ್ರಶಸ್ತಿಗಳಾದ ಡಾ. ರಾಜ್‌ಕುಮಾರ್ ಪ್ರಶಸ್ತಿಯನ್ನು ಶ್ರೀ ಜೆ.ಕೆ ಶ್ರೀನಿವಾಸ್ ಮೂರ್ತಿ ಅವರಿಗೆ ದೊರಕಿದೆ. ಡಾ. ವಿಷ್ಣುವರ್ಧನ್ ಪ್ರಶಸ್ತಿಯನ್ನು ಶ್ರೀ ಬಿ.ಎಸ್ ಬಸವರಾಜು ಅವರ ಮುಡಿಗೇರಿದೆ. ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಶ್ರೀ ಪಿ. ಶೇಷಾದ್ರಿ ಪಡೆದುಕೊಂಡಿದ್ದಾರೆ.ಈ ವಿಜೇತರಿಗೆ 5 ಲಕ್ಷ ರೂ.ನಗದು ಬಹುಮಾನ ಹಾಗೂ ಚಿನ್ನ ಒಳಗೊಂಡಿದೆ. 

ಶ್ರೀ ಪಿ.ಹೆಚ್.ವಿಶ್ವನಾಥ್, ಚಲನಚಿತ್ರ ನಿರ್ದೇಶಕರು ಮತ್ತು ಶ್ರೀ ಮಾರ್ಸ್ ಸುರೇಶ್, ಚಲನಚಿತ್ರ ವಿತರಕರು ಹಾಗೂ ಶ್ರೀ ರವೀಂದ್ರಭಟ್, ಕಾರ್ಯನಿರ್ವಾಹಕ ಸಂಪಾದಕರು, ಪ್ರಜಾವಾಣಿ ಇವರು ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿದ್ದು, ವಾರ್ಷಿಕ ಪ್ರಶಸ್ತಿಯೊಂದಿಗೆ ಜೀವಮಾನ ಸಾಧನೆ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದ್ದಾರೆ.  

2018 ನೇ ಸಾಲಿನ ರಾಜ್ಯ ಚಲನಚಿತ್ರವ ಪ್ರಶಸ್ತಿ ಘೋಷಣೆ:

ಮೊದಲ ಅತ್ಯುತ್ತಮ ಚಿತ್ರ - ಆ ಕರಾಳ ರಾತ್ರಿ

ಎರಡನೇ ಅತ್ಯುತ್ತಮ ಚಿತ್ರ - ರಾಮನ ಸವಾರಿ

ಮೂರನೇ ಅತ್ಯುತ್ತಮ ಚಿತ್ರ - ಒಂದಲ್ಲಾ ಎರಡಲ್ಲ

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ - ಸಂತಕವಿ ಕನಕದಾಸರ ರಾಮಧಾನ್ಯ

ಅತ್ಯುತ್ತಮ ಮನರಂಜನಾ ಚಿತ್ರ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

ಅತ್ಯುತ್ತಮ ಮಕ್ಕಳ ಚಿತ್ರ - ಹೂವು ಬಳ್ಳಿ

ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ - ಬೆಳಕಿನ ಕನ್ನಡಿ

ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ - ದೇಯಿ ಬೈದೇತಿ

ಉತ್ತಮ ನಟ - ರಾಘವೇಂದ್ರ ರಾಜಕುಮಾರ್ (ಅಮ್ಮನ ಮನೆ)

ಅತ್ಯುತ್ತಮ ನಟಿ - ಮೇಘನಾ ರಾಜ್ ( ಇರುವುದೆಲ್ಲವ ಬಿಟ್ಟು)

ಪೋಷಕ ನಟ - ಬಾಲಾಜಿ ಮನೋಹರ್ ( ಚೂರಿಕಟ್ಟೆ)

ಅತ್ಯುತ್ತಮ ಕತೆ - ಹರೀಶ್ ಎಸ್ (ನಾಯಿಗೆರೆ)

ಅತ್ಯುತ್ತಮ ಚಿತ್ರಕತೆ - ಪಿ. ಶೇಷಾದ್ರಿ ( ಮೂಕಜ್ಜಿಯ ಕನಸುಗಳು) 

ಅತ್ಯುತ್ತಮ ಸಂಭಾಷಣೆ - ಶಿರಿಷಾ ಜೋಷಿ (ಸಾವಿತ್ರಿಬಾಯಿ ಪುಲೆ)

ಅತ್ಯುತ್ತಮ ಕಲಾ ನಿರ್ದೇಶನ - ಶಿವಕುಮಾರ್ ಜೆ (ಕೆಜಿಎಫ್)

ಹಿನ್ನಲೆ ಗಾಯಕ - ಸಿದ್ಧಾರ್ಥ ಬೆಳ್ಮಣ್ಣು

ಅತ್ಯುತ್ತಮ ಬಾಲ ನಟ - ಮಾಸ್ಟರ್ ಅರ್ಯನ್

ಅತ್ಯುತ್ತಮ ಬಾಲ ನಟಿ - ಬೇಬಿ ಸಿಂಚನ

ಅತ್ಯುತ್ತಮ ಕಲಾ ನಿರ್ದೆಶನ - ಶಿವಕುಮಾರ್ ಜೆ

ಅತ್ಯುತ್ತಮ ಗೀತ ರಚನೆ - ಬರಗೂರು ರಾಮಚಂದ್ರಪ್ಪ

ಅತ್ಯುತ್ತಮ ಹಿನ್ನಲೆ ಗಾಯಕಿ - ಕಲಾವತಿ ದಯಾನಂದ

ಸಂಗೀತ ನಿರ್ದೇಶನ - ರವಿ ಬಸ್ರೂರ್

ಜನವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!