ಬಂದೇ ಬಿಡ್ತು ಕೆಜಿಎಫ್-2 ಫಸ್ಟ್ ಲುಕ್: ರಾಕಿ ಭಾಯ್ ಸ್ಟೈಲ್ ಸೂಪರ್

Published : Dec 21, 2019, 07:24 PM IST
ಬಂದೇ ಬಿಡ್ತು ಕೆಜಿಎಫ್-2 ಫಸ್ಟ್ ಲುಕ್: ರಾಕಿ ಭಾಯ್ ಸ್ಟೈಲ್ ಸೂಪರ್

ಸಾರಾಂಶ

ಕೆಜಿಎಫ್, ರಾಕಿ ಭಾಯ್ ಯಶ್  ಸಿನಿ ಜರ್ನಿಯಲ್ಲಿ ಮಹತ್ವದ ಮೈಲುಗಲ್ಲು ಸೃಷ್ಠಿಸಿದ ಸಿನಿಮಾ. ಈ ಸಿನಿಮಾದ ದಾಖಲೆ ಇನ್ನೂ ಯಾರೂ ಬ್ರೇಕ್ ಮಾಡಿಯೇ ಇಲ್ಲ.  ಆಗಲೇ ಕೆಜಿಎಫ್-2 ಚಿತ್ರ ಹೇಗಿದೆ...? ಯಶ್ ಲುಕ್ ಹೇಗಿರುತ್ತೆ...? ಎನ್ನುವ ಹಲವು ಕುತೂಹಲ ಪ್ರೇಕ್ಷಕರಲ್ಲಿ ಮೂಡಿಸಿದೆ. ಅದರಂತೆ ಇದೀಗ ಕೆ.ಜಿ.ಎಫ್​. ಚಾಪ್ಟರ್​-2  ಚಿತ್ರದ ಫಸ್ಟ್​ ಲುಕ್​ ಪೋಸ್ಟರ್ ರಿಲೀಸ್ ಆಗಿದೆ. ಕೆಜಿಎಫ್-2 ಚಿತ್ರದ ಫಸ್ಟ್ ಲುಕ್ ಹೇಗಿದೆ..? ಈ ಕೆಳಗಿನಂತಿದೆ ನೋಡಿ..

ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಮಾಜಿಕ ಜಾಲತಾಣಗಳಲ್ಲಿ ಬೇಜಾನ್ ಸೌಂಡ್ ಮಾಡ್ತಿದೆ. 

ವೀಕೆಂಡ್ ಶನಿವಾರವೇ ಚಿತ್ರದ ಹೊಂಬಾಳೆ ಪ್ರೋಡಕ್ಷನ್ ತನ್ನ ಅಧಿಕೃತ ಪೇಜ್ ಅಲ್ಲಿಯೇ ಕೆಜಿಎಫ್-2 ಫಸ್ಟ್ ಲುಕ್ ಬಿಟ್ಟಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೆ.ಜಿ.ಎಫ್-2, ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಐದೂ ಭಾಷೆಗಳಲ್ಲಿ ಪೋಸ್ಟರ್​ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಕೆಜಿಎಫ್‌-2 ನಲ್ಲಿ ದಾಖಲೆ ಬರೆಯುತ್ತಾರಾ ರಾಕಿ ಭಾಯ್? 

ಪೋಸ್ಟರ್​ನಲ್ಲಿ ವಿಶೇಷವಾಗಿ ಯಶ್​ ಸ್ಟೈಲಿಶ್​ ಲುಕ್​ ಜತೆಗೆ ಸಾಮ್ರಾಜ್ಯ ಮರುಸ್ಥಾಪನೆ(Rebuilding An Empire) ಎಂಬ ಅಡಿಬರಹ ಗಮನ ಸೆಳೆದಿದೆ. ಕೆ.ಜಿ.ಎಫ್​ ಚಾಪ್ಟರ್​-1 ಬಿಡುಗಡೆಯಾಗಿ ಇಂದಿಗೆ [ಡಿಸೆಂಬರ್ 21] ಒಂದು ವರ್ಷ ಕಳೆದಿದೆ. ಈ ಖುಷಿಗೆ ಕೆ.ಜಿ.ಎಫ್​ ಚಾಪ್ಟರ್-2 ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ ಎನ್ನಲಾಗ್ತಿದೆ.

1 ವರ್ಷದ ಖುಷಿ ಹಂಚಿಕೊಂಡ ರಾಕಿ ಭಾಯ್
ಕೆ.ಜಿ.ಎಫ್​ ಚಾಪ್ಟರ್​-1 ಬಿಡುಗಡೆಯಾಗಿ ಇಂದಿಗೆ [ಡಿಸೆಂಬರ್ 21] ಒಂದು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ತಮ್ಮ ಫೇಸ್ಬುಕ್ ನಲ್ಲಿ ಯಶ್​ ಖುಷಿ ಹಂಚಿಕೊಂಡಿದ್ದಾರೆ. ಜತೆಗೆ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ. 

ಕೆ.ಜಿ.ಎಫ್. ಚಾಪ್ಟರ್ 1 ಹೇಗೆ ನಿಮ್ಮನ್ನು ವಿಸ್ಮಮಯಗೊಳಿಸಿತು? ಈ ಚಿತ್ರದಿಂದ ನೀವು ಹೆಮ್ಮೆ ಪಟ್ಟಂತಹ ಘಟನೆ, ಘಳಿಗೆ ಇದ್ದರೆ ಅದು ಏನು? ಹಂಚಿಕೊಳ್ಳಿ ಎಂದು ಯಶ್​ ಕೇಳಿಕೊಂಡಿದ್ದಾರೆ. ನಿಮ್ಮ ಆ ಅದ್ಭುತ ಘಟನಾವಳಿಗಳನ್ನು, ಆ ನಿಮ್ಮ ಹೆಮ್ಮೆಯ ಕ್ಷಣಗಳನ್ನು ತಿಳಿದುಕೊಳ್ಳುವ ಕುತೂಹಲದಲ್ಲಿ ನಾನಿದ್ದೇನೆ ಎಂದು ಯಶ್​ ಬರೆದುಕೊಂಡಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾವ್ಯಾ ಉಳಿಸೋಕೆ ಚೈತ್ರಾಗಿಂತ ಕಳಪೆ ಉಸ್ತುವಾರಿ ಮಾಡಿದ ಗಿಲ್ಲಿ ನಟ! ಕಾವ್ಯಾಗೆ ಬಕೆಟ್ ಹಿಡಿಬೇಡವೆಂದ ವೀಕ್ಷಕರು!
Bigg Boss: ಸೂರಜ್ ಹೋದ್ಮೇಲೆ ಶುರುವಾಯ್ತು ರಾಶಿಕಾ ಎಂಟರ್‌ಟೈನ್‌ಮೆಂಟ್; ರಕ್ಷಿತಾ ಫುಲ್ ಸುಸ್ತು!