ಬಿಗ್ ಬಾಸ್ ಕನ್ನಡದ ಮನೆ ಪ್ರವೇಶಿಸುವ ಅಭ್ಯರ್ಥಿಗಳ ಪಟ್ಟಿ

Published : Dec 20, 2019, 02:55 PM IST
ಬಿಗ್ ಬಾಸ್ ಕನ್ನಡದ ಮನೆ ಪ್ರವೇಶಿಸುವ ಅಭ್ಯರ್ಥಿಗಳ ಪಟ್ಟಿ

ಸಾರಾಂಶ

ಅತ್ತ ಹಿಂದಿ ಬಿಗ್ ಬಾಸ್ ಶುರುವಾಗಿದ್ದರೆ ಇತ್ತ ಕನ್ನಡದ ಬಿಗ್ ಬಾಸ್ ಗೆ ವೇದಿಕೆ ನಿರ್ಮಾಣವಾಗಿದೆ. ಕಿಚ್ಚ ಸುದೀಪ್  ರ ಬಿಗ್ ಬಾಸ್ ಪ್ರೋಮೋ ಸಖತ್ತಾಗೆ ಓಡ್ತಿದೆ. ಹಾಗಾದರೆ ಈ ಬಾರಿ ಯಾರೆಲ್ಲ ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಪಡೆಯಲಿದ್ದಾರೆ? ಪಟ್ಟಿಯೊಂದು ಇಲ್ಲಿದೆ.

ಕನ್ನಡದ ಬಿಗ್ ಬಾಸ್ ಗೆ ಯಾರೆಲ್ಲ ಸೇರಲಿದ್ದಾರೆ ಎಂ ಕುತೂಹಲಕ್ಕೆ ತೆರೆ ಬೀಳುವ ಸಮಯ ಹತ್ತಿರವಾಗುತ್ತಿದೆ. ಬೆಂಕಿ ಬಿದ್ದು ಸುಟ್ಟು ಹೋಗಿದ್ದ ಮನೆಯನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದ್ದು ಭರಪೂರ ಮನರಂಜನೆಗೆ ವೇದಿಕೆ ಸಿದ್ಧವಾಗುತ್ತಿದೆ. ಸಂಭಾವ್ಯರ ಪಟ್ಟಿಯೂ ಇಲ್ಲಿದೆ.

1. ತುಳಸಿ ಪ್ರಸಾದ್: ಡಬ್ ಸ್ಮಾಶ್ ಹಾಡುಗಳ ಮೂಲಕ ಬೇಡದ ಪ್ರಚಾರ ಪಡೆದುಕೊಂಡ ತುಳಸಿ ಪ್ರಸಾದ್ ಮಾಡಿದ ಎಡವಟ್ಟುಗಳಿಗೆ ಸದ್ಯಕ್ಕೆ ಲೆಕ್ಕ ಇಲ್ಲ. ಆದರೆ ಬಿಗ್ ಬಾಸ್ ವೇದಿಕೆಗೆ ಈತ ಬರುತ್ತಾನೆ ಎಂಬ ಮಾಹಿತಿ.

  • ಸೋಶಿಯಲ್ ಮೀಡಿಯಾದಲ್ಲಿ ತುಳಸಿ ಪ್ರಸಾದನ ಹಸ್ತಮೈಥುನದ ವಿಕೃತಿ
  • 2. ಪ್ರೇಮ ಕುಮಾರಿ:  ಬಿಜೆಪಿ ನಾಯಕ, ಶಾಸಕ ಎಸ್.ಎ.ರಾಮದಾಸ್  ಅವರಿಗೆ ಮದುವೆ ದುಂಬಾಲು ಬಿದ್ದಿದ್ದ ಪ್ರೇಮ ಕುಮಾರಿ ಮನೆಯೊಳಗೆ ಕಾಲಿಡಲಿದ್ದಾರೆ.

    3. ಕುರಿ ಪ್ರತಾಪ್: ಮಜಾ ಟಾಕೀಸ್ ನಲ್ಲಿ ಬ್ಯುಸಿಯಾಗಿರುವ ಕುರಿ ಪ್ರತಾಪ್ ಪ್ರವೇಶ ಮಾಡಲಿದ್ದಾರೆ. ಬಿಗ್ ಬಾಸ್ ಮೂಲಕ ಮತ್ತಷ್ಟು ಜನಪ್ರಿಯತೆ ತಮ್ಮದಾಗಿರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

    4. ಶಾಲಿನಿ ಗೌಡ: ಕಳೆದ ಬಾರಿಯ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ 'ಟಕಿಲ' ಹಾಡಲ್ಲಿ ಸೊಂಟ ಬಳುಕಿಸಿರುವ ಚೆಲುವೆ ಶಾಲಿನಿ ಗೌಡ ಸಹ ಬಿಗ್ ಬಾಸ್ ಕಂಟೆಸ್ಟಂಟ್ ಆಗಬಹುದು.

    5. Rapid ರಶ್ಮಿ: ರಮ್ಮ ಶೋಗಳ ಮೂಲಕ, ನೇರ ಮಾತಿನ ಮೂಲಕ ಹೆಸರು ಮಾಡಿರುವ ಆರ್ ಜೆ Rapid ರಶ್ಮಿ ಬಿಗ್ ಬಾಸ್ ಮನೆ ಸೇರಬಹುದು.

    65ರ ಗುರು, 28ರ ಶಿಷ್ಯೆ, ಬಿಗ್ ಬಾಸ್‌ನಲ್ಲಿ ಪ್ರೀತಿ-ಪ್ರೇಮ-ಸಮಾಗಮ!ಮಾಡಬಹು

    6. ತಿಥಿ ಹುಡುಗ ಅಭಿಷೇಕ್: ತಿಥಿ ಚಿತ್ರದಲ್ಲಿ ಗಮನ ಸೆಳೆದು ನಂತರ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಅಭಿಷೇಕ್ ಎಚ್.ಎನ್. ಬಿಗ್ ಬಾಸ್ ಮನೆ ಸೇರಿದರೆ ಅಚ್ಚರಿ ಇಲ್ಲ.

    7. ಸುಮನ್ ರಂಗನಾಥ್: ಕನ್ನಡ ಚಿತ್ರರಂಗದಲ್ಲಿಯೇ ವಿಶಿಷ್ಟ ಸ್ಥಾನ ಪಡೆದುಕೊಂಡಿರುವ ನಟಿ ಸುಮನ್ ರಂಗನಾಥ್ ಮನೆ ಪ್ರವೇಶ ಮಾಡಬಹುದು.

    8. ಭಾವನಾ ರಾವ್: ಗಾಳಿಪಟ ಚಿತ್ರದಲ್ಲಿ ಗಮನ ಸೆಳೆದಿದ್ದ ನಟಿ ಭಾವನಾ ರಾವ್ ಅವರಿಗೂ ಬಿಗ್ ಬಾಸ್‌ ನಿಂದ ಆಫರ್ ಹೋಗಿದೆ ಎಂಬ ಮಾತು ಕೇಳಿಬಂದಿದೆ.

    ಇದಲ್ಲದೆ ಪ್ರಮುಖ ವಾಹಿನಿಯ ಟಿವಿ ನಿರೂಪಕರೊಬ್ಬರು ಮತ್ತು ಸಿನಿಮಾ ನಿರ್ದೇಶಕರಿಗೂ ಕರೆ ಹೋಗಿದ್ದು ಸಾಮಾನ್ಯ ಜನರ ಕೋಟಾದಲ್ಲಿ ಯಾರು ಪ್ರವೇಶ ಮಾಡುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

    PREV

    ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

    click me!

    Recommended Stories

    ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
    ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?