ತೀವ್ರ ಅನಾರೋಗ್ಯ, ಚಿಕಿತ್ಸೆಗೂ ಹಣವಿಲ್ಲ; ಹಿರಿಯ ನಟನ ಬೆನ್ನಿಗೆ ನಿಂತ ಜಗ್ಗೇಶ್

By Suvarna News  |  First Published Feb 19, 2020, 11:24 AM IST

ಕನ್ನಡದ ಖ್ಯಾತ ನಟ ಕಿಲ್ಲರ್ ವೆಂಕಟೇಶ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಅವರ ನೆರವಿಗೆ ಜಗ್ಗೇಶ್ ನಿಂತಿದ್ದಾರೆ. 


ಬೆಂಗಳೂರು (ಫೆ. 19): ಕನ್ನಡದ ಖ್ಯಾತ ಫೋಷಕ ನಟ ಕಿಲ್ಲರ್ ವೆಂಕಟೇಶ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸಾವು- ಬದುಕಿನ ನಡುವೆ ಹೋರಾಡುತ್ತಿರುವ ವೆಂಕಟೇಶ್‌ರನ್ನು ಜಗ್ಗೇಶ್ ಭೇಟಿ ಮಾಡಿ ಅವರ ಪರಿಸ್ಥಿತಿ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.  ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿದ್ದಾರೆ ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ. 

ಕಲಾವಿದರು ಕಷ್ಟದಲ್ಲಿರಬಾರದು, ಅಂಧ ಗಾಯಕಿಯರಿಗೆ ಜಗ್ಗೇಶ್ ಸೂರಿನ ವಾಗ್ದಾನ

Tap to resize

Latest Videos

 

250 ಕನ್ನಡ ಚಿತ್ರ ನಟಿಸಿದ ಮಿತ್ರ
ಕಿಲ್ಲರ್ ವೆಂಕಟೇಶ ಇಂದು ಲಿವರ್ ವೈಫಲ್ಯದಿಂದ ಸಾವು ಬದುಕಿನ ಹೋರಾಟ!ಇವನ ವಿಷಯವೆ ನಾನು ಚಂದನವನ ಅವಾರ್ಡ್ ವೇದಿಕೆಲ್ಲಿ ಮಾತಾಡಿದ್ದು!
ನನ್ನ ಕೈಲಾದ ಸಹಾಯಮಾಡಿ ಇವನ ಉಳಿಸಿಕೊಳ್ಳುಲು ಯತ್ನಿಸುತ್ತಿರುವೆ!
ತುಂಬಾ ದುಃಖವಾಯಿತು ಹಿರಿಯಕಲಾವಿದರ ಸ್ಥಿತಿಕಂಡು!
ರಾಯರೆ ಕಾಪಾಡಬೇಕು ಇಂಥ ಕಲಾವಿದರ..ಹರಿಓಂ pic.twitter.com/i7qg9ZQ6Vk

— ನವರಸನಾಯಕ ಜಗ್ಗೇಶ್ (@Jaggesh2)

ಜಗ್ಗೇಶ್ ಟ್ವೀಟ್‌ಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದು ಡಿಸಿಎಂ ಅಶ್ವತ್ ನಾರಾಯಣ್, ಆರೋಗ್ಯ ಸಚಿವ ಶ್ರೀರಾಮುಲು ವೆಂಕಟೇಶ್ ಅವರ ಆರೋಗ್ಯ ವಿಚಾರಿಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. 

ಧನ್ಯವಾದಗಳು ಮಂತ್ರಿ ಶ್ರೀರಾಮುಲು pa jagadish ಹಾಗು Ramesh ಗೆ..ವಿಕ್ಟೋರಿಯಾ ಆಸ್ಪತ್ರೆ dr.girish ಹಾಗು ಉ.ಮುಖ್ಯಮಂತ್ರಿ ಅಶ್ವಥ್ನಾರಾಯಣ್ ರವರಿಗೆ..
ನನ್ನ ಕರೆಗೆ ಸ್ಪಂಧಿಸಿ ಸರಿರಾತ್ರಿಯಲ್ಲಿ ನಲ್ಲಿ ತಪಾಸಣೆ ಶುಶೃಷೆಮಾಡುತ್ತಿದ್ದಾರೆ..!
ಸ್ನೇಹಕಕ್ಕಾಗಿ ನನ್ನ ಅಳಿಲು ಪ್ರಯತ್ನ..ಹರಿಓಂ https://t.co/dQWuvchD5o

— ನವರಸನಾಯಕ ಜಗ್ಗೇಶ್ (@Jaggesh2)

ಕಿಲ್ಲರ್ ವೆಂಕಟೇಶ್ ಒಂದು ಕಾಲದ ಬಹು ಬೇಡಿಕೆ ನಟ.  ಪೋಷಕ ಪಾತ್ರಕ್ಕೂ ಸೈ, ಖಳನಟನ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದ ನಟ. ಸುಮಾರು 250 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.  ಜಗ್ಗೇಶ್ ಜೊತೆ 'ರಣಧೀರ' ಚಿತ್ರದಲ್ಲಿಯೂ ನಟಿಸಿದ್ದಾರೆ. 

 

click me!