
ಬೆಂಗಳೂರು (ಫೆ. 18): ಕನ್ನಡ ಸಿನಿಮಾರಂಗದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಇಂದು ವಿಧಿವಶರಾಗಿದ್ದಾರೆ. ಸಾಕಷ್ಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಿಶೋರಿ ಬಲ್ಲಾಳ್ ಚಿಕಿತ್ಸೆ ಫಲಕಾರಿಯಾಗದೇ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
"
'ಇವಳೆಂತ ಹೆಂಡ್ತಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕಿಶೋರಿ ಬಲ್ಲಾಳ್ 75 ಕ್ಕೂ ಅಧಿಕ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ. ಕಹಿ, ಹನಿ ಹನಿ, ಸೂರ್ಯಕಾಂತಿ, ಅಕ್ಕತಂಗಿ, ನಮ್ಮಣ್ಣ, ಕೆಂಪೇಗೌಡ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ಮಾತ್ರವಲ್ಲದೇ ಬಾಲಿವುಡ್ ನಲ್ಲಿಯೂ ಅಭಿನಯ ಮಾಡಿದ್ದಾರೆ. ಶಾರೂಖ್ ಖಾನ್ ಜೊತೆ 'ಸ್ವದೇಶ್' ಚಿತ್ರದಲ್ಲಿ ನಟಿಸಿದ್ದರು.
ಕಿಶೋರಿ ಬಲ್ಲಾಳ್ ದಕ್ಷಿಣ ಕನ್ನಡ ಮೂಲದವರು. ಭರತನಾಟ್ಯ ಕಲಾವಿದ ಶ್ರೀಪತಿ ಬಲ್ಲಾಳರನ್ನು ವಿವಾಹವಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.