ಸೋಷ್ಯಲ್ ಮೀಡಿಯಾಗಳಲ್ಲಿ ಅಂಬಾನಿ ಕುಟುಂಬದ ಮಕ್ಕಳ ಪ್ರೊಫೈಲ್ ಸಿಗಲಾರದು. ಆದರೆ ಅವರು ತಾವು ಇನ್ಸ್ಟಾದಲ್ಲಿದ್ದು, ಪ್ರೈವೆಸಿ ಕಾಪಾಡಿಕೊಳ್ಳುತ್ತಿದ್ದಾರೆ. ಇಶಾ ಅಂಬಾನಿ ಇದಕ್ಕೆ ಕೊಟ್ಟ ಕಾರಣ ಇಲ್ಲಿದೆ..
ಇಶಾ ಅಂಬಾನಿ ತಮ್ಮ ಜೀವನದ ಅತ್ಯುತ್ತಮ ಘಟ್ಟವನ್ನು ಅನುಭವಿಸುತ್ತಿದ್ದಾರೆ. ಆಕೆಯ ವ್ಯಾಪಾರ ಕಲ್ಪನೆಗಳು ಮತ್ತು ತನ್ನ ತಂದೆ ಮುಖೇಶ್ ಅಂಬಾನಿ ಅವರ ವ್ಯವಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಉತ್ಸಾಹವು ಸುದ್ದಿ ಮಾಡುತ್ತಿದೆ.
ಇಶಾ ಅಂಬಾನಿ ಪ್ರಸಿದ್ಧ ವಾಣಿಜ್ಯೋದ್ಯಮಿ ಮಾತ್ರವಲ್ಲ, ಈಗೀಗ ತಮ್ಮನ್ನು ದೊಡ್ಡ ಫ್ಯಾಶನ್ ಐಕಾನ್ ಆಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಎರಡು ಮಕ್ಕಳ ತಾಯಾದ ನಂತರದಲ್ಲಿ ಇಶಾ ಫಿಟ್ನೆಸ್ ಹಾಗೂ ಫ್ಯಾಶನ್ ಪಯಣ ಆದರ್ಶಪ್ರಾಯವಾಗಿದೆ.
ಇಶಾ ಅಂಬಾನಿಯ ಒಂದೊಂದು ಫೋಟೋಗಳೂ ನ್ಯಾನೋ ಸೆಕೆಂಡುಗಳಲ್ಲಿ ವೈರಲ್ ಆಗುತ್ತಿವೆ. ಆದರೆ, ಅವರ ಪ್ರೊಫೈಲ್ ಹುಡುಕಿದರೆ ನಿಮಗದು ಸಿಗಲಾರದು. ಅವರೇಕೆ ಇನ್ಸ್ಟಾಗ್ರಾಂನಲ್ಲಿ ತಮ್ಮ ಪ್ರೊಫೈಲನ್ನು ಪಬ್ಲಿಕ್ ಮಾಡಿಕೊಂಡಿಲ್ಲ ಎಂಬುದಕ್ಕೆ ಸ್ವತಃ ಇಶಾ ಉತ್ತರ ಹೇಳಿದ್ದಾರೆ.
ಇಶಾ ಅವರು ಇನ್‌ಸ್ಟಾಗ್ರಾಮ್ ಅನ್ನು ಶೀಘ್ರದಲ್ಲೇ ಸಾರ್ವಜನಿಕಗೊಳಿಸುತ್ತಾರೆಯೇ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಇಶಾ 'ನಾನು ಪ್ರಾಮಾಣಿಕವಾಗಿ ಅಂತರ್ಮುಖಿಯಾಗಿದ್ದೇನೆ ಮತ್ತು ನನ್ನ ಖಾಸಗಿ ಜೀವನವನ್ನು ನಾನು ಕಾಪಾಡುತ್ತೇನೆ. ಒಂದು ದಿನದಲ್ಲಿ ನಾನು ಏನು ತಿನ್ನುತ್ತೇನೆ ಅಥವಾ ನಾನು ಯಾರನ್ನು ಭೇಟಿಯಾಗುತ್ತಿದ್ದೇನೆ ಎಂಬುದರ ಕುರಿತು ಪೋಸ್ಟ್ ಮಾಡುವುದು ಯಾರಿಗಾದರೂ ಆಸಕ್ತಿದಾಯಕವಾಗಿದೆ ಎಂದು ನನಗೆ ಅನಿಸುವುದಿಲ್ಲ' ಎಂದು ಉತ್ತರಿಸಿದ್ದಾರೆ.
ಇಶಾ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ಕುಟುಂಬದ ಉತ್ತರಾಧಿಕಾರಿಯಾಗಿದ್ದಾರೆ, ಆದರೂ ಅವರು ತಮ್ಮ ಅವಳಿ ಮಕ್ಕಳಾದ ಆದಿಯ ಶಕ್ತಿ ಮತ್ತು ಕೃಷ್ಣನ ತಾಯಿ ಪಾತ್ರದಲ್ಲಿ ಅಪಾರ ಹೆಮ್ಮೆ ಪಡುವುದಾಗಿ ತಿಳಿಸಿದ್ದಾರೆ. 'ಈ ಎರಡು ಪುಟ್ಟ ಮಕ್ಕಳು ಎಲ್ಲಿ ಏನು ಮಾಡುತ್ತಿದ್ದಾರೆ ಎಂದು ನಾನು ಯಾವಾಗಲೂ ಯೋಚಿಸುತ್ತೇನೆ ಮತ್ತು ಅವರು ಚೆನ್ನಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ. ಸದಾ ಮಕ್ಕಳ ವಿಷಯದಲ್ಲಿ ತನ್ನ ಪಾತ್ರ ಸರಿಯಾಗಿ ನಿಭಾಯಿಸುತ್ತಿದ್ದೇನೆಯೇ ಎಂಬ ಅನುಮಾನ ಕಾಡುತ್ತದೆ ಎಂದಿದ್ದಾರೆ.
ಇಶಾ ಅಂಬಾನಿ ಪ್ರಸಿದ್ಧ ಉದ್ಯಮಿ ಆನಂದ್ ಪಿರಾಮಲ್ ಅವರನ್ನು ವಿವಾಹವಾಗಿದ್ದಾರೆ ಮತ್ತು 2022ರಲ್ಲಿ ಅವರು ತಮ್ಮ ಅವಳಿ ಮಕ್ಕಳನ್ನು ಪಡೆದಿದ್ದಾರೆ.