ಗ್ರಾಮಕ್ಕೆ ಹೊಸ ಪ್ರಧಾನ್, ಫುಲೇರಾ ಪ್ರಪಂಚದ ಲವ್ ಸ್ಟೋರಿಯಲ್ಲಿ ಯೂ ಟರ್ನ್? ಎಲ್ಲಾನೂ ಅಲ್ಲೋಲಕಲ್ಲೋಲ!?

Published : Nov 25, 2026, 09:27 PM IST
Panchayat Season 5 Trailer

ಸಾರಾಂಶ

ನಿರ್ದೇಶಕ ಹಾಗೂ ಸಹ-ಸೃಷ್ಟಿಕರ್ತ ದೀಪಕ್ ಕುಮಾರ್ ಮಿಶ್ರಾ, 'ವೀಕ್ಷಕರಿಗೆ ಇಷ್ಟವಾದ ಸರಳತೆಯನ್ನು ಉಳಿಸಿಕೊಂಡೇ ಹೊಸ ಕಥೆಗಳನ್ನು ಹೇಳಲು ನಾವು ಬಯಸಿದ್ದೆವು. ಕಳೆದ ನಾಲ್ಕು ಸೀಸನ್‌ಗಳಲ್ಲಿ ಪಂಚಾಯತ್ ಭಾರತದ ಅಚ್ಚುಮೆಚ್ಚಿನ ಫ್ರಾಂಚೈಸಿಗಳಲ್ಲಿ ಒಂದಾಗಿ ಬೆಳೆದಿದೆ. ಫುಲೇರಾ ಪ್ರಪಂಚ ಮತ್ತು ಅಲ್ಲಿನ ಪಾತ್ರಗಳ ಮೇಲೆ ವೀಕ್ಷಕರು ತೋರಿದ ಪ್ರೀತಿಯಿಂದ ಈ ಪಯಣ ವಿಶೇಷವಾಗಿದೆ.

ಫುಲೇರಾ ಗ್ರಾಮದ ರಾಜಕೀಯ, ವೈಯಕ್ತಿಕ ಡ್ರಾಮಾ ಹಾಗೂ ಕಾಮಿಡಿಗಾಗಿ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್. 'ಪಂಚಾಯತ್' ಸೀಸನ್ 5ರ ಅಧಿಕೃತ ಟ್ರೇಲರ್ (Panchayat Season 5) ಅನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಜಿತೇಂದ್ರ ಕುಮಾರ್, ನೀನಾ ಗುಪ್ತಾ ಹಾಗೂ ರಘುಬೀರ್ ಯಾದವ್ ಈ ಹೊಸ ಅಧ್ಯಾಯದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.

ಗ್ರಾಮಕ್ಕೆ ಹೊಸ ಪ್ರಧಾನ್ ಬಂದ ನಂತರ ಫುಲೇರಾ ಹೇಗಿದೆ ಎಂಬುದನ್ನು ಟ್ರೇಲರ್ ತೋರಿಸುತ್ತದೆ. ರಘುಬೀರ್ ಯಾದವ್ ನಿರ್ವಹಿಸುತ್ತಿರುವ ಪ್ರಧಾನ್‌ಜಿ ಪಾತ್ರ ಅಧಿಕಾರ ಕಳೆದುಕೊಂಡ ನಂತರದ ಬದುಕಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಿರುತ್ತಾರೆ. ಇತ್ತ ಸಚಿವ್‌ಜಿ (ಜಿತೇಂದ್ರ ಕುಮಾರ್) ತನ್ನ ವೈಯಕ್ತಿಕ ಜೀವನ, ಸ್ನೇಹ ಹಾಗೂ ಹಳ್ಳಿಯ ಬದಲಾದ ರಾಜಕೀಯದ ನಡುವೆ ಒದ್ದಾಡುತ್ತಿರುತ್ತಾರೆ.

ಸಾನ್ವಿಕಾ ನಿರ್ವಹಿಸಿರುವ ರಿಂಕಿ ಹಾಗೂ ಸಚಿವ್‌ಜಿ ನಡುವಿನ ಸಂಬಂಧದಲ್ಲೂ ಈ ಸೀಸನ್‌ನಲ್ಲಿ ಬದಲಾವಣೆಗಳಾಗಲಿವೆ. ಇವರ ಲವ್ ಸ್ಟೋರಿಯಲ್ಲಿ ಹೊಸ ತಿರುವು ಇದೆ ಎನ್ನುವ ಸುಳಿವನ್ನು ಟ್ರೇಲರ್ ನೀಡಿದೆ. ದೀಪಕ್ ಕುಮಾರ್ ಮಿಶ್ರಾ ನಿರ್ದೇಶನದ ಈ ವೆಬ್ ಸಿರೀಸ್‌ನಲ್ಲಿ ನೀನಾ ಗುಪ್ತಾ, ಸುನೀತಾ ರಾಜ್ವರ್, ಫೈಜಲ್ ಮಲಿಕ್, ಚಂದನ್ ರಾಯ್, ದುರ್ಗೇಶ್ ಕುಮಾರ್ ಮತ್ತು ಅಶೋಕ್ ಪಾಠಕ್ ಕೂಡ ಇದ್ದಾರೆ.

ಮಧ್ಯಪ್ರದೇಶದ ಸೆಹೋರ್‌ನ ಹಳ್ಳಿಯೊಂದರಲ್ಲಿ ನವೆಂಬರ್ 23ರಂದು ನಡೆದ ಹೊರಾಂಗಣ ಕಾರ್ಯಕ್ರಮದಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಯಿತು. ಕಾಲ್ಪನಿಕ ಫುಲೇರಾ ಗ್ರಾಮದ ಚಿತ್ರೀಕರಣ ಕೂಡ ಇದೇ ಸ್ಥಳದಲ್ಲಿ ನಡೆಯುತ್ತದೆ. ಒಳಾಂಗಣ ಕಾರ್ಯಕ್ರಮ ಮಾಡುವ ಬದಲು, ಹಳ್ಳಿಯ ವಾತಾವರಣದಲ್ಲೇ ಟ್ರೇಲರ್ ಲಾಂಚ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು.

ಹೊಸ ಸೀಸನ್ ಬಗ್ಗೆ ಮಾತನಾಡಿದ ನಿರ್ದೇಶಕ ಹಾಗೂ ಸಹ-ಸೃಷ್ಟಿಕರ್ತ ದೀಪಕ್ ಕುಮಾರ್ ಮಿಶ್ರಾ, 'ವೀಕ್ಷಕರಿಗೆ ಇಷ್ಟವಾದ ಸರಳತೆಯನ್ನು ಉಳಿಸಿಕೊಂಡೇ ಹೊಸ ಕಥೆಗಳನ್ನು ಹೇಳಲು ನಾವು ಬಯಸಿದ್ದೆವು. ಕಳೆದ ನಾಲ್ಕು ಸೀಸನ್‌ಗಳಲ್ಲಿ ಪಂಚಾಯತ್ ಭಾರತದ ಅಚ್ಚುಮೆಚ್ಚಿನ ಫ್ರಾಂಚೈಸಿಗಳಲ್ಲಿ ಒಂದಾಗಿ ಬೆಳೆದಿದೆ. ಫುಲೇರಾ ಪ್ರಪಂಚ ಮತ್ತು ಅಲ್ಲಿನ ಪಾತ್ರಗಳ ಮೇಲೆ ವೀಕ್ಷಕರು ತೋರಿದ ಪ್ರೀತಿಯಿಂದ ಈ ಪಯಣ ವಿಶೇಷವಾಗಿದೆ. ಸರಣಿಯ ನೈಜತೆಯನ್ನು ಉಳಿಸಿಕೊಂಡೇ, ಈ ಪ್ರಪಂಚವನ್ನು ಬೆಳೆಸುವುದು ನಮ್ಮ ಪ್ರಯತ್ನವಾಗಿತ್ತು' ಎಂದು ಹೇಳಿದ್ದಾರೆ.

ದೀಪಕ್ ಕುಮಾರ್ ಮಿಶ್ರಾ, ಚಂದನ್ ಕುಮಾರ್ ಮತ್ತು ಅರುಣಾಭ್ ಕುಮಾರ್ ಸೇರಿ ಇದನ್ನು ಸೃಷ್ಟಿಸಿದ್ದು, ಚಂದನ್ ಕುಮಾರ್ ಕಥೆ ಬರೆದಿದ್ದಾರೆ. ದ ವೈರಲ್ ಫೀವರ್ (TVF) ಇದನ್ನು ನಿರ್ಮಿಸಿದೆ. ಉತ್ತರ ಪ್ರದೇಶದ ಕಾಲ್ಪನಿಕ ಗ್ರಾಮ ಫುಲೇರಾದಲ್ಲಿ ಪಂಚಾಯತ್ ಕಾರ್ಯದರ್ಶಿಯಾಗಿ ಕೆಲಸಕ್ಕೆ ಸೇರುವ ಎಂಜಿನಿಯರಿಂಗ್ ಪದವೀಧರ ಅಭಿಷೇಕ್ ತ್ರಿಪಾಠಿ ಸುತ್ತ ಈ ಕಥೆ ಸುತ್ತುತ್ತದೆ. ಮೊದಲ ಸೀಸನ್ 2020ರಲ್ಲಿ ಬಂದಿತ್ತು. 'ಪಂಚಾಯತ್ ಸೀಸನ್ 5' ಡಿಸೆಂಬರ್ 3ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೂರ್ಯಕಾಂತಿಯ ನಿಗೂಢ ಕತೆಗೂ ನಟ ರಮೇಶ್ ಅರವಿಂದ್‌ಗೆ ಏನು ಸಂಬಂಧ: ‘ದೈಜಿ’ ರಹಸ್ಯವೇನು?
ಶೃಂಗೇರಿ ಶಾರದಾ ಪೀಠದ ಮುಂದೆ ತ್ರಿಷಾ: ಫೋಟೋ ಜೊತೆ ನಟಿ ಬರೆದ ಆ ಒಂದು ಕ್ಯಾಪ್ಶನ್ ಏನು?