ನಟ ದರ್ಶನ್ ಅವರ ವೃತ್ತಿಬದುಕಿಗೆ ದೊಡ್ಟ ತಿರುವು ನೀಡಿದ ಕಲಾಸಿಪಾಳ್ಯ ಚಿತ್ರದ ನಿರ್ದೇಶಕ ಓಂ ಪ್ರಕಾಶ್ ರಾವ್, ದರ್ಶನ್ ಅವರ ಇಂದಿನ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಅದರೊಂದಿಗೆ ದರ್ಶನ್ ಹಾಗೂ ನಿಕಿತಾ ತುಕ್ರಾಲ್ ವಿಚಾರದ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ.
ಬೆಂಗಳೂರು (ಜೂ.25): ನಟ ದರ್ಶನ್ ಅವರ ಸಿನಿಮಾ ಜೀವನದಲ್ಲಿ 2004ರಲ್ಲಿ ದೊಡ್ಡ ತಿರುವು ನೀಡಿದ ಕಲಾಸಿಪಾಳ್ಯ ಚಿತ್ರದ ನಿರ್ದೇಶಕ ಓಂ ಪ್ರಕಾಶ್ ರಾವ್ ಮಾತನಾಡಿದ್ದಾರೆ. 2004 ರಿಂದ 2011ರವರೆಗೂ ದರ್ಶನ್ ಅವರ ಆಪ್ತ ವಲಯದ ಸ್ನೇಹಿತರದಲ್ಲಿ ಗುರುತಿಸಿಕೊಂಡಿದ್ದ ಓಂಪ್ರಕಾಸ್ ರಾವ್, ಕಲಾಸಿಪಾಳ್ಯ ಅಲ್ಲದೆ ದರ್ಶನ್ ಜೊತೆ ಅಣ್ಣಾವ್ರು, ಅಯ್ಯ, ಮಂಡ್ಯ, ಯೋಧ ಹಾಗೂ ಪ್ರಿನ್ಸ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಯೋಧ ಹಾಗೂ ಪ್ರಿನ್ಸ್ ಚಿತ್ರದಲ್ಲಿ ದರ್ಶನ್‌ಗೆ ಜೋಡಿಯಾಗಿ ನಟಿ ನಿಕಿತಾ ತುಕ್ರಾಲ್ ಕಾಣಿಸಿಕೊಂಡಿದ್ದರು. ಇಂದು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ವೇಳೆ ದರ್ಶನ್ ಅವರ ಹಿಟ್ ಸಿನಿಮಾಗಳ ನಿರ್ದೇಶಕ ಓಂ ಪ್ರಕಾಶ್ ಮಾತನಾಡಿದ್ದು, ದರ್ಶನ್‌ರಿಂದ ಇಂಥ ಕೃತ್ಯ ನಡೆಯಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದರ್ಶನ್ ತುಂಬಾ ಒಳ್ಳೆ ವ್ಯಕ್ತಿ ಜಂಟಲ್ ಮ್ಯಾನ್. ಯಾವ ವಿಷಯವನ್ನು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ದರ್ಶನ್ ಜೊತೆ ನಾನು ತುಂಬಾ ಆಪ್ತವಾಗಿ ಇದ್ದೆ. ಏಕ್ ಮಾರ್ ದೋ ತುಕುಡಾ ಅನ್ನೋ ಕ್ಯಾರೆಕ್ಟರ್ ಆತನದ್ದು ಎಂದು ಹೇಳಿದ್ದಾರೆ.
ನನ್ನ ಹಾಗೂ ದರ್ಶನ್ ನಡುವಿನ ಸ್ನೇಹ 2011ರಲ್ಲಿಯೇ ಕೊನೆಯಾಗಿ ಹೋಯ್ತು. ನಾನಿದ್ದಾಗ ದರ್ಶನ್ ಹೆಚ್ಚು ಕುಡಿಯುತ್ತಿರಲಿಲ್ಲ. ನಾನು ದರ್ಶನ್ ಜೊತೆ ಸೇರಿ ಎರಡು ಮೂರು ಬಾರಿ ಕುಡಿದುರಬಹುದಷ್ಟೇ. ದರ್ಶನ್ ಅವರ ಹತ್ತಿರ ಇದ್ದ ವ್ಯಕ್ತಿಗಳು ಅವರನ್ನ ಸರಿ ಮಾಡಬಹುದಿತ್ತು. ಖಂಡಿತಾ ನಾನಿದ್ದಿದ್ದರೆ ದರ್ಶನ್ ಗೆ ಈ ಸ್ಥಿತಿ ಬರುತ್ತಿರಲಿಲ್ಲ. ದರ್ಶನ್ ವಿಷಯದಲ್ಲಿ ನಡೆದ ಘಟನೆಗಳನ್ನ ಕೇಳಿದ್ರೆ ನೋಡಿದ್ರೆ ಆಶ್ಚರ್ಯ ಆಗುತ್ತಿದೆ ಎಂದು ಹೇಳಿದ್ದಾರೆ.
ನನ್ನ-ದರ್ಶನ್ ಸ್ನೇಹಕ್ಕೆ ನಿಖಿತಾ ಅಡ್ಡಿಯಾದ್ರು: ನಟಿ ನಿಕಿತಾ ಜೊತೆ ದರ್ಶನ್‌ಗೆ ಉತ್ತಮ ಸ್ನೇಹವಿತ್ತು. ಆದರೆ, ಅದನ್ನು ನಾನು ವಿರೋಧಿಸಿದೆ. ನಿಖಿತಾಗೆ ಈ ವಿಚಾರದಲ್ಲಿ ಬುದ್ದಿ ಹೇಳಿದೆ. ಆದರೆ ನಿಖಿತಾ ಮಾತ್ರ ದರ್ಶನ್ ಬಳಿ ನನ್ನ ಬಗ್ಗೆ ದೂರು ಹೇಳಿದರು. ಆ ನಂತರ ನನ್ನ ದರ್ಶನ್ ಸಂಬಂಧ ದೂರ ಆಯ್ತು. ನಿಖಿತಾ ವಿಷಯದಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ತೊಂದರೆ ಆಗುತ್ತಿದೆ ಅಂತ ಗೊತ್ತಾಯಿತು. ನಿರ್ಮಾಪಕರು ಇಡೀ ಚಿತ್ರರಂಗ ನಿಖಿತಾ-ದರ್ಶನ್ ಸಂಬಂಧದ ಬಗ್ಗೆ ಮಾತನಾಡಿತ್ತು. ನಿಖಿತಾಗೆ ದರ್ಶನ್ ರಿಂದ ದೂರವಾಗು ಎಂದೆ ಅಷ್ಟಕ್ಕೆ ದರ್ಶನ್ ನನ್ನ ಸ್ನೇಹ ಮುರಿದು ಬಿತ್ತು ಎಂದು ಹೇಳಿದ್ದಾರೆ.
ಪವಿತ್ರಾ ಗೌಡ ಬಗ್ಗೆ ಗೊತ್ತಿಲ್ಲ: ನಿಜಕ್ಕೂ ನನಗೆ ಪವಿತ್ರಾ ಗೌಡ ಯಾರು ಅಂತಾನೆ ಗೊತ್ತಿಲ್ಲ. ಟಿವಿ ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಬಗ್ಗೆ ನೋಡಿದೆ. ಅವರು ದರ್ಶನ್ ಜೀವನಕ್ಕೆ ಯಾಕೆ ಬಂದ್ರು ಅನ್ನೋದೇ ಗೊತ್ತಿಲ್ಲ. 2011ರಲ್ಲಿ ಪ್ರಿನ್ಸ್ ಸಿನಿಮಾ ರಿಲೀಸ್ ಆದ ಮೇಲೆ ದರ್ಶನ್ ನನ್ನ ಒಡನಾಟ ಕಟ್ ಆಯ್ತು. ನಿರ್ದೇಶಕರಿಗೆ ದರ್ಶನ್ ಹೊಡೆದಿದ್ದಾರೆ ಅಂತ ಕಿವಿಗೆ ಬಿದ್ದಿತ್ತು. ಹೊಡೆತ ತಿಂದವರು ಯಾಕೆ ಮಾತನಾಡುತ್ತಿಲ್ಲ. ನನ್ನ ಕಿವಿಗೂ ದರ್ಶನ್ ಗಲಾಟೆಗಳ ಬಗ್ಗೆ ಮಾಹಿತಿ ಬಿದ್ದಿದೆ ಎಂದು ಹೇಳಿದ್ದಾರೆ.
ಕೊಲೆ ಆರೋಪಿ ಪವಿತ್ರಾ ಗೌಡಗೆ ಮೇಕಪ್ ಮಾಡಿಕೊಳ್ಳಲು ಅವಕಾಶ ಕೊಟ್ಟ ಎಸ್‌ಐ ನೇತ್ರಾವತಿಗೆ ನೋಟಿಸ್
ದರ್ಶನ್‌ನ ನೋಡೋಕೆ ಹೋಗೋದಿಲ್ಲ: ನಾನು ದರ್ಶನ್ ಭೇಟಿ ಮಾಡೋಕೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಲ್ಲ. ಯಾವುದೇ ಕಾರಣಕ್ಕೂ ದರ್ಶನ್ ನ ಭೇಟಿ ಮಾಡೋದಲ್ಲ. ಪೊಲೀಸ್ ಇಲಾಖೆ ಮಾಡಿರೋ ಕೆಲಸ ಶ್ಲಾಘನೀಯ. ದರ್ಶನ್ ವಿಚಾರ ಇತಿಹಾಸದ ಪುಟಗಳಲ್ಲಿ ಉಳಿಯುತ್ತೆ. ಪವಿತ್ರಾ ಗೌಡ ಯಾರು ಎಲ್ಲಿಯವರು ಅಂತಾನೆ ಗೊತ್ತಿಲ್ಲ. ನಿಖಿತಾಗೆ ಬುದ್ದಿ ಹೇಳಿದಂತೆ ಪವಿತ್ರಾ ಗೌಡಗೆ ಬುದ್ದಿ ಹೇಳೋಕೆ ಹೋಗಲ್ಲ. ಅಂದಿನ ದರ್ಶನ್ ಶಾಂತ ಸ್ವಭಾವದ ನಟ. ಈಗಿನ ದರ್ಶನ್ ಹಾಗಿಲ್ಲ. ರೇಣುಕಾ ಸ್ವಾಮಿಯನ್ನ ದರ್ಶನ್ ಇಗ್ನೋರ್ ಮಾಡಬೇಕಿತ್ತು. ದರ್ಶನ್ ಗೆ ಕೋಪ ಬರೋ ಹಾಗೆ ಮಾಡಿದ್ದು ಯಾರೋ ಅವರೇ ಈ ಎಲ್ಲಾ ಘಟನೆಗೆ ಕಾರಣ ದರ್ಶನ್ ರ ಈ ಸ್ಥಿತಿಗೆ ಪವಿತ್ರಾ ಗೌಡ ಯಾಕೆ ಕಾರಣ ಆದ್ರು.? ಅವರೇ ಈ ವಿಚಾರದಲ್ಲಿ ತಿಳಿಸಬೇಕು ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.
ನಟ ದರ್ಶನ್ ಫ್ಯಾನ್ಸ್ ಮೇಲೆ ಬಿತ್ತು ಮತ್ತೊಂದು ಕೇಸ್; ಉಮಾಪತಿಗೌಡಗೆ ಬೆದರಿಕೆಯೊಡ್ಡಿದ್ದ ಅಭಿಮಾನಿ ಅರೆಸ್ಟ್