ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಡಿವೋರ್ಸ್ ಹಾಗೂ ಕೊಲೆ ಕೇಸ್ ಸುದ್ದಿಯದೇ ಕಾರುಬಾರು. ಇದೀಗ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಯಲ್ಲಿದ್ದು, ಕ್ಷಣಕ್ಷಣಕ್ಕೂ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ.
ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಡಿವೋರ್ಸ್ ಹಾಗೂ ಕೊಲೆ ಕೇಸ್ ಸುದ್ದಿಯದೇ ಕಾರುಬಾರು. ಈ ತಿಂಗಳು ಏಳರಂದು (07 ಜೂನ್ 2024) ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಆಗಿದ್ದು ಗೊತ್ತೇ ಇದೆ. ಅದೇ ದಿನ ದೊಡ್ಮನೆ ನಟ ಯುವ ರಾಜ್‌ಕುಮಾರ್ ಸಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಯಲ್ಲಿದ್ದು, ಕ್ಷಣಕ್ಷಣಕ್ಕೂ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಜೊತೆಗೆ, ಜನಸಾಮಾನ್ಯರು ಕೂಡ ಈ ಬಗ್ಗೆ ಮಾತನಾಡತೊಡಗಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿ ಇರುವುದು ಗೊತ್ತಿದೆ. ಕೊಲೆ ಕೇಸಿನ ಮುಖ್ಯ ಆರೋಪಿ ಹಾಗೂ ನಟ ದರ್ಶನ್ ಸ್ನೇಹಿತೆ ನಟಿ ಪವಿತ್ರಾ ಗೌಡ ಕೂಡ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಒಟ್ಟೂ 13 ಜನರನ್ನು ಪೊಲೀಸ್ ವಿಚಾರಣೆಗೆ ಒಳಪಡಿಸಲಾಗಿದೆ. ಕಾನೂನು ಪ್ರಕಾರ ಅವರಿಗೆಲ್ಲ ಅದೇನು ಶಿಕ್ಷೆ ಆಗಬೇಕೋ ಅದು ಆಗುತ್ತದೆ. ಆದರೆ, ಈ ಬಗ್ಗೆ ಜನಸಾಮಾನ್ಯರು ಅದೇನು ಮಾತನಾಡುತ್ತಿದ್ದಾರೆ ಗೊತ್ತೇ?
ರಿಯಲೀ ಅದೊಂದೇ ಕಾರಣ, ನಮ್ಮಿಬ್ಬರ ಡಿವೋರ್ಸ್‌ಗೆ ಮತ್ತೇನೂ ಕಾರಣವಿರಲಿಲ್ಲ; ಚಂದನ್ ಶೆಟ್ಟಿ
ನಟ ದರ್ಶನ್ ಮದುವೆಯಾದ ಹೆಂಡತಿಯಿಂದ ದೂರವಿದ್ದು ಸ್ನೇಹಿತೆ ಜೊತೆ ಬಾಳುತ್ತಿದ್ದರೆ ಅದು ಅವರ ವೈಯಕ್ತಿಕ ಜೀವನ, ಅವರಿಷ್ಟ. ಅದಕ್ಕೆ ಸಂಬಂಧ ಪಟ್ಟವರಲ್ಲಿ ತಕರಾರು ಇದ್ದರೆ ಅದನ್ನು ಕಾನೂನಿನ ಪ್ರಕಾರ ಬಗೆಹರಿಸಿಕಳ್ಳಬಹುದು. ಇನ್ನು, ದರ್ಶನ್ ತನ್ನ ಸ್ನೇಹಿತೆಗೆ ತಮ್ಮದೇ ಅಭಿಮಾನಿಯೊಬ್ಬ ಅಶ್ಲೀಲ ಮೆಸೇಜ್ ಮಾಡುತ್ತಿದ್ದರೆ ಸುಮ್ಮನೇ ಇರಬೇಕಾಗಿಯೂ ಇಲ್ಲ. ಆದರೆ, ಅದನ್ನು ನಟ ದರ್ಶನ್ ಸ್ವತಃ ಹ್ಯಾಂಡಲ್ ಮಾಡಬೇಕಿತ್ತಾ? ಈ ದೇಶದಲ್ಲಿ ಪೊಲೀಸ್, ಕೋರ್ಟ್, ಕಾನೂನು ಎಲ್ಲವೂ ಇವೆ. ಆ ಬಗ್ಗೆ ನಟ ದರ್ಶನ್ ಅವರಿಗೆ ಜ್ಞಾನ ಇಲ್ಲವೇ?
ಶೆಡ್‌ನಲ್ಲಿ ಕೂಡಿಹಾಕಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಡುವಾಗ ನಟ ದರ್ಶನ್ ಹೇಳಿದ್ದೇನು?
ರೇಣುಕಾಸ್ವಾಮಿ ಎಂಬ ಅಭಿಮಾನಿ ತಮ್ಮ ಸ್ನೇಹಿತೆ ಪವಿತ್ರಾ ಗೌಡಗೆ ಕೆಟ್ಟಕೆಟ್ಟ ಮೆಸೇಜ್ ಕಳುಹಿಸುತ್ತಿದ್ದರೆ ಸಾಕ್ಷಿ ಸಮೇತ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದರೆ ಮುಗಿಯಿತು. ಮುಂದಿನ ಕೆಲಸವನ್ನು ಅವರು ನೋಡಿಕೊಳ್ಳುತ್ತಾರೆ. ನಟ ದರ್ಶನ್ ಸ್ವತಃ ಕಾನೂನನ್ನು ಕೈಗೆತ್ತಿಕೊಳ್ಳುವ ಅವಶ್ಯಕತೆ ಏನಿದೆ? ಪೊಲೀಸ್ ಕಂಪ್ಲೇಂಟ್ ಕೊಟ್ಟರೆ ಸುದ್ದಿಯಾಗಿ ಬಿಡುತ್ತದೆ ಎಂಬ ಭಯವೇನಾದರೂ ಇದ್ದರೆ ಅದು ಮೂರ್ಖತನದ ಪರಮಾವಧಿ. ಏಕೆಂದರೆ, ಒಬ್ಬ ಸ್ಟಾರ್ ನಟ ಏನು ಮಾಡಿದರೂ ಸುದ್ದಿ ಆಗಿಯೇ ಆಗುತ್ತದೆ.
ಕೋಟಿ ಚಿತ್ರದ ತಾರಾಬಳಗ ಹೇಳ್ತಿರೋದೇನು? ಸತ್ಯ ಗೊತ್ತಾಗೋದಕ್ಕೆ ಕೆಲವೇ ದಿನ ಬಾಕಿ!
ಕಂಪ್ಲೇಂಟ್ ಕೊಟ್ಟು ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸುದ್ದಿಯಾಗಿದ್ದರೆ ಸಾಕಿತ್ತು. ಆದರೆ, ಕಾನೂನನ್ನು ತಾವೇ ಕಂಟ್ರೋಲ್‌ಗೆ ತೆಗೆದುಕೊಂಡು ಈಗ 'ಕೊಲೆಗಾರ' ಎಂಬ ಆರೋಪ ಹೊತ್ತುಕೊಳ್ಳುವ ಅಗತ್ಯವಿತ್ತೇ? ನಟ ದರ್ಶನ್ ಯಾವತ್ತೂ ಅದನ್ನೇ ಯಾಕೆ ಮಾಡುತ್ತಾರೆ. ಸ್ಟಾರ್ ನಟರಾಗಿದ್ದು, ಜವಾಬ್ದಾರಿಯುತ ನಡವಳಿಕೆ ಇರಬೇಕಲ್ಲವೇ? ಸೈಬರ್ ಕ್ರೈಂ ಪೊಲೀಸ್ ಕೆಲಸವನ್ನು ನಟ ದರ್ಶನ್ ತಾವೇ ಮಾಡಿ ಈಗ ಕೊಲೆ ಕೇಸಿನಲ್ಲಿ ವಿಚಾರಣೆ ಎದುರಿಸುತ್ತಿರುವುದು ನಿಜವಾಗಿಯೂ ಹುಂಬತನ' ಎನ್ನುತ್ತಿದ್ದಾರೆ ಹಲವರು.