
ತಮಟೆ ಸದ್ದಿಗೆ ಹೆಜ್ಜೆ ಹಾಕದವರೆ ಇಲ್ಲ, ಅದರ ರಿದಂಗೆ ತಾನಾಗೆ ಕೀ ಕೊಟ್ಟವರಂತೆ ಕಾಲುಗಳು ಕುಣಿಯಲು ಶುರು ಮಾಡುತ್ತವೆ. ಅದೇ ರೀತಿ ಇಲ್ಲೊಬ್ಬರು ಅಂಕಲ್ ಮಾಡಿದ ಡಾನ್ಸ್‌ಗೆ ತಮಟೆ ಬಡಿಯುವವರು ಕೂಡ ಸುಸ್ತಾಗಿದೆ. ಕೈ ಕಾಲು ಸೊಂಟ ಎನ್ನದೇ ದೇಹದ ಪ್ರತಿ ಭಾಗವನ್ನು ಕುಣಿಸುತ್ತಾ ವಕ್ರ ವಕ್ರವಾಗಿ ಅಂಕಲ್ ಡಾನ್ಸ್ ಮಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋ ನೋಡಿದ ಜನ ಹಲವು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದು ಅಂಕಲ್ ಡಾನ್ಸ್ ಮೂಲಕ ನೀಡಿದ ಮನೋರಂಜನೆಯನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ.
ಒಂದೊಂದು ತಮಟೆಯ ರಿದಂಗೂ ಅಂಕಲ್ ಒಂದೊಂದು ರೀತಿಯಾಗಿ ತಮ್ಮ ಇಡೀ ದೇಹವನ್ನು ಬಳಸಿಕೊಂಡು ಡಾನ್ಸ್ ಮಾಡುತ್ತಿದ್ದಾರೆ. ಕಣ್ಣಿಗೆ ಕಪ್ಪು ಪ್ರೇಮಿನ ಕನ್ನಡಕ ಕಂದು ಬಣ್ನದ ಸೂಟು ನೀಲಿ ಬಣ್ಣದ ಬೂಟು ಹಾಕಿ ಟೈ ಕಟ್ಟಿ ಆಫೀಸರ್‌ಗಳಂತೆ ಸ್ಟೈಲಿಶ್ ಆಗಿ ರೆಡಿಯಾಗಿರುವ ಅಂಕಲ್‌ನ ಡಾನ್ಸ್ ಮಾತ್ರ ಪಕ್ಕಾ ಲೋಕಲ್, ಪಕ್ಕಾ ಟಪ್ಪಾಂಗುಚ್ಚಿ, ಗಣೇಶನ ಬಿಡುವ ವೇಳೆ ಸಣ್ಣ ಸಣ್ಣ ಹುಡುಗರು ಹೇಗೆ ಕುಣಿಯುತ್ತಾರೋ ಅದೇ ರೀತಿ ಅಂಕಲ್ ಕುಳಿತು ನಿಂತು ದೇಹವನ್ನು ಹೆಂಗೆಂಗೋ ತಿರುಗಿಸಿಕೊಂಡು ಡಾನ್ಸ್ ಮಾಡಿದ್ದು, ಈ ಅಂಕಲ್‌ನ ಡಾನ್ಸ್‌ಗೆ ತಮಟೆ ಬಡಿಯುವ ಯುವಕ ಫುಲ್ ಸುಸ್ತಾಗಿದ್ದಾನೆ.
ತಮಟೆ ಸದ್ದಿಗೆ ಸ್ವಲ್ಪವೂ ಅನ್ಯಾಯವಾಗದಂತೆ ಅಂಕಲ್ ತಮ್ಮ ಡಾನ್ಸ್ ಮೂಲಕ ನ್ಯಾಯ ಒದಗಿಸಿದ್ದು, ಅಂಕಲ್‌ನ ಡಾನ್ಸ್ ನೋಡಿದ ತಮಟೆಯ ಬಡಿಯುವ ಯುವಕನೂ ಕೂಡ ಫುಲ್ ಸ್ಪರ್ಧೆ ನೀಡಿದ್ದಾನೆ. ಅಂಕಲ್ ಜೊತೆ ಇನ್ನು ಕೆಲ ಹುಡುಗರು ಜೊತೆಗೆ ಕುಣಿಯುತ್ತಿದ್ದು, ಅವರು ಅಂಕಲ್ ಡಾನ್ಸ್ ಮುಂದೆ ಸೈಡ್ ಲೈನ್ ಆಗಿದ್ದಾರೆ. ಅಂದಹಾಗೆ ಈ ರೀತಿ ಡಾನ್ಸ್ ಮಾಡಿದವರು ವೃತ್ತಿಯಲ್ಲಿ ಡಾಕ್ಟರ್ ಎಂಬುದು ಅವರ ಪ್ರೊಫೈಲ್‌ನಿಂದ ತಿಳಿದು ಬರುತ್ತಿದೆ. dr_rais_meer_official ಎಂಬ ಇನ್ಸ್ಟಾ ಪೇಜನ್ನು ಹೊಂದಿರುವ ವೈದ್ಯ Dr Rais Meer ಅವರು ತಮ್ಮದೇ ಈ ಫನ್ನಿ ಡಾನ್ಸ್‌ನ ವೀಡಿಯೋವನ್ನು ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ತಮ್ಮ ಇನ್ಸ್ಟಾ ಪ್ರೊಫೈಲ್‌ನಲ್ಲಿ ಡಾಕ್ಟರ್ / ಫನ್ನಿ ವೀಡಿಯೋ ಕ್ರಿಯೇಟರ್ ಎಂದು ಪರಿಚಯಿಸಿಕೊಂಡಿರುವ ಈ ಡಾಕ್ಟರ್ ರಾಯೀಸ್ ಮೀರ್, ಒಂದು ಮಿಲಿಯನ್ ಫಾಲೋವರ್‌ಗಳನ್ನು ಪಡೆಯುವ ಗುರಿ ಹೊಂದಿದ್ದು, ಬಿಗ್‌ಬಾಸ್‌ಗೆ ಹೋಗುವ ಕನಸನ್ನು ಹೊಂದಿರುವುದಾಗಿ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ಅವರು ಪ್ರೊಫೈಲ್‌ನಲ್ಲಿ ನೂರಾರು ತಮಾಷೆಯ ವೀಡಿಯೋಗಳಿವೆ. ಇನ್ನು ಈ ಡಾನ್ಸ್ ವೀಡಿಯೋ ಶೇರ್ ಮಾಡಿದ ಅವರು ಡೋಲ್ ವಾಲಾಕೋ ಪರೇಶಾನ್ ಕರ್ದಿಯಾ (ತಮಟೆ ಬಡಿಯುವವನಿಗೆ ತೊಂದರೆ ಕೊಟ್ಟೆ) ಎಂದು ಬರೆದು ಈ ವೀಡಿಯೋ ಪೋಸ್ಟ್ ಮಾಡಿದ್ದಾರೆ. ನೋಡಿದ ನೆಟ್ಟಿಗರು ಹಲವು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅಂಕಲ್ ನೀವು ನನ್ನ ಮದುವೆಗೆ ಬರಬೇಕು ನಿಮ್ಮ ಡಾನ್ಸ್ ನನಗೆ ತುಂಬಾ ಇಷ್ಟವಾಯ್ತು ಎಂದು ಒಬ್ಬರು ಅವರಿಗೆ ಕಾಮೆಂಟ್‌ನಲ್ಲಿ ಅಹ್ವಾನಿಸಿದ್ದಾರೆ. ಈ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಅನೇಕರು ನಮ್ಮ ಮದುವೆಗೂ ಕರೆಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಅಂಕಲ್ ಡಾನ್ಸ್ ನೋಡಿ ಮಜಾ ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಇವರು ತಮಟೆ ಬಡಿಯುವವನಿಗೆ ಸ್ಪರ್ಧೆ ನೀಡುವಂತೆ ಸಖತ್ ಎನರ್ಜಿಯಿಂದ ಡಾನ್ಸ್ ಮಾಡಿದ್ದಾರೆ. ಅಂಕಲ್ ಡಾನ್ಸ್ ಬಗ್ಗೆ ನಿಮಗೇನಾನಿಸುತ್ತಿದೆ ಕಾಮೆಂಟ್ ಮಾಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.