ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯದ ವ್ಯವಸ್ಥೆ ಇದೆ ಎಂಬ ವೈರಲ್ ಫೋಟೋ ಬಗ್ಗೆ ನಿರ್ದೇಶಕ ನಂದಕಿಶೋರ್ ಪ್ರತಿಕ್ರಿಯಿಸಿದ್ದಾರೆ. ಫೋಟೋ ನಕಲಿ ಎಂದ ಅವರು, ಜೈಲಿನಲ್ಲಿ ದರ್ಶನ್ ಅನುಭವಿಸುತ್ತಿರುವ ಮಾನಸಿಕ ಯಾತನೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಬೆಂಗಳೂರು (ಆ.26): ರೇಣುಕಾಸ್ವಾಮಿ ಎನ್ನುವ ಸಾಮಾನ್ಯ ವ್ಯಕ್ತಿಯನ್ನ ಅತ್ಯಂತ ಭೀಕರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ದರ್ಶನ್‌ಗೆ ಅದರ ಕಿಂಚಿತ್ತೂ ಪ್ರಾಯಶ್ಚಿತವಿಲ್ಲ. ಇನ್ನೊಂದೆಡೆ ಸರ್ಕಾರ ಕೂಡ ಕಿಲ್ಲಿಂಗ್ ಸ್ಟಾರ್‌ಗೆ ಜೈಲಿನಲ್ಲಿ ರಾಜಾತಿಥ್ಯದ ವ್ಯವಸ್ಥೆ ಮಾಡಿದೆ ಎನ್ನುವುದನ್ನು ಸಾಬೀತುಪಡಿಸುವಂಥ ಫೋಟೋ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ನಂದಕಿಶೋರ್, ಇದು ಫೇಕ್ ಫೋಟೋ ಆಗಿರುವ ಸಾಧ್ಯತೆ ಇದೆ ಎಂದು ಹೇಳುವ ಮೂಲಕ ದರ್ಶನ್ ಪರವಾಗಿ ಮಾತನಾಡಿದ್ದಾರೆ. ಇದು ಯಾವುದೋ ಒಂದು ಕ್ಷಣದ ಭಾಗವಷ್ಟೇ. ಅವರು ಒಳಗಡೆ ಯಾವ ಮನಸ್ಥಿತಿಯಲ್ಲಿ ಇದ್ದಾರೆ ಅನ್ನೋದೇ ಇಲ್ಲಿ ಮುಖ್ಯ. ಹಾಗಿದ್ರೆ ಅವರು ಆಳುತ್ತಿರುವ ಪೋಟೋ ತೆಗೆಯಲು ಸಾಧ್ಯವಾಗಿಲ್ವಾ? ಅವರು ಬೇಜಾರಲ್ಲಿ ಇರುವ ಪೋಟೋ ತೆಗೆಯಲು ಸಾಧ್ಯವಾಗಿಲ್ವಾ? ಅವರು ಮನೆಯಿಂದ ದೂರವಾಗಿ, ಮಗನಿಂದ ದೂರವಾಗಿ ಎಷ್ಟು ನೋವು ಅನುಭವಿಸುತ್ತಿರುತ್ತಾರೆ. ಸಾವಿರಾರು ಕೋಟ್ಯಾಂತರ ಜನ ಅವರಿಗೆ ಆಶೀರ್ವಾದ ಮಾಡುತ್ತಿರುವಾಗ ಆ ವ್ಯಕ್ತಿಗೆ ಏನು ಅನಿಸಬಹುದು ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ವಿಲ್ಸನ್ ಗಾರ್ಡನ್ ರೌಡಿಗಳ ಜೊತೆ ಕಾಣಿಸಿಕೊಂಡ ವಿಚಾರದಲ್ಲಿ ಮಾತನಾಡಿದ ನಂದಕಿಶೋರ್, ಅವರು ಇರುವ ಜಾಗ ಎಂಥದ್ದು ಅನ್ನೋದನ್ನ ಮೊದಲು ಅಲ್ಲಿ ಸಾಧು ಸಂತರು ಇರ್ತಾರಾ ಎಂದು ಪ್ರಶ್ನೆ ಹಾಕಿದ್ದಾರೆ.
ವಿಜಯಲಕ್ಷ್ಮಿಗಾಗಿ ಪವಿತ್ರಾ ಗೌಡರಿಂದ ದೂರಾದ್ರ ದರ್ಶನ್?: ಗಂಡ ಹೆಂಡತಿಯನ್ನು ಒಂದಾಗಿಸಿದ್ದು ಆ ಮರ್ಡರ್!
undefined
ಈಗ ಟೆಕ್ನಾಲಜಿ ಒಳಗೆ ಏನು ಬೇಕಾದ್ರ ಮಾಡಬಹುದು. ನಾನು ಇದನ್ನು ವೈಯಕ್ತಿಕವಾಗಿ ನಂಬೋದಿಲ್ಲ. ಜೈಲಲ್ಲಿ ಅಷ್ಟೊಂದು ಸೆಕ್ಯುರಿಟಿ ಮಧ್ಯದಲ್ಲಿ ಯಾರೋ ಇಬ್ಬರು ಕುಳಿತುಕೊಳ್ತಾರೆ ಏನೋ ಮಾಡುತ್ತಾರೆ ಅನ್ನೋದು ಸರಿಯಲ್ಲ. ಸರ್ಕಾರದಿಂದ ಅವರಿಗೆ ಬೆಡ್ ಊಟ ಕೊಟ್ಟಿಲ್ಲದೆ ಇರಬಹುದು. ಅವರು ಏನು ತಿನ್ನುತ್ತಿದ್ದಾರೆ ಏನು ಮಾಡ್ತಿದ್ದಾರೆ ಅಂತ ಗೊತ್ತಿಲ್ಲ. ಯಾರೋ ಒಬ್ಬರು ಕುಳಿತುಕೊಂಡ ತಕ್ಷಣ ಅವರಿಗೆ ರಾಜಾತಿಥ್ಯ ಕೊಟ್ಟಿದ್ದಾರೆ ಅನ್ನೋದು ಸರಿಯಲ್ಲ. AI ಟೆಕ್ನಾಲಜಿ ಬಂದ ಮೇಲೆ ಮಾರ್ಫಿಂಗ್ ಪೋಟೋ ಬರ್ತಿದೆ. ನಿಮಗೆ ಗೊತ್ತಿರುವಂತೆ ಎಷ್ಟೊಂದು ಮಾರ್ಫಿಂಗ್ ಪೋಟೋ ಬಂದಿದೆ. ನಮ್ಮ ಜೊತೆ ಇಲ್ಲದೆ ಇರುವ ನಾಯಕರ ಪೋಟೋ ಕೂಡ ಸಿನಿಮಾದಲ್ಲಿ ಹಾಕಬಹುದು. ನನ್ನ ಪ್ರಕಾರ ಇದು ಫೇಕ್ ಪೋಟೋ ಎಂದು ನಂದಕಿಶೋರ್ ಹೇಳಿದ್ದಾರೆ.
ಡಿಂಪಲ್ ಕ್ವೀನ್ ಜತೆ ದಾಸನ ರಹಸ್ಯ ಮಾತುಕತೆ: ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಅಭಿಮಾನಿಯ ಹುಚ್ಚಾಟ!