ಬೆಂಗಳೂರಿನಲ್ಲೇ ಫಿಲಂ ಸಿಟಿ; ಆದರೆ ರೋರಿಚ್‌ ಎಸ್ಟೇಟ್‌ನಲ್ಲಲ್ಲ!

By Kannadaprabha NewsFirst Published Nov 18, 2019, 10:44 AM IST
Highlights

ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳೂ ಫಿಲಂ ಸಿಟಿ ಸ್ಥಾಪನೆ ಘೋಷಣೆ ಮಾಡುತ್ತವೆ. ಆದರೆ, ಕಾರ್ಯರೂಪಕ್ಕೆ ಬರುವುದಿಲ್ಲ. ಅಲ್ಲದೆ, ಬಹುತೇಕ ಮುಖ್ಯಮಂತ್ರಿಗಳು ಅದನ್ನು ತಮ್ಮ ಸ್ವ ಕ್ಷೇತ್ರದಲ್ಲಿ ನಿರ್ಮಾಣ ಮಾಡಲು ಆಸಕ್ತಿ ತೋರುತ್ತಾರೆ. ಇದು ತಪ್ಪು ಎಂದು ಹೇಳುವುದು ಕೂಡ ಕಷ್ಟ. ಆದರೆ, ನಾವು ಫಿಲಂ ಸಿಟಿಯನ್ನು ಬೆಂಗಳೂರಿನಲ್ಲೇ ಆರಂಭಿಸುತ್ತೇವೆ: ದಿಸಿಎಂ ಅಶ್ವತ್‌ ನಾರಾಯಣ್ 

ಬೆಂಗಳೂರು (ನ. 18): ಚಿತ್ರನಗರಿ ನಿರ್ಮಾಣಕ್ಕೆ ಹಾಲಿ ಗುರುತಿಸಿರುವ ಸ್ಥಳದಲ್ಲಿ ಪರಿಸರದ ಕೆಲವು ನಿಯಮಗಳು ಅಡ್ಡಿ ಬರುತ್ತಿರುವುದರಿಂದ ಹೊಸ ಸ್ಥಳ ಹುಡುಕುತ್ತಿರುವುದಾಗಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ ನಾರಾಯಣ್ ಅವರು ಹೇಳುವ ಮೂಲಕ ತಾತಗುಣಿಯಲ್ಲಿರುವ ಖ್ಯಾತ ಕಲಾವಿದ ರೋರಿಚ್‌ ಮತ್ತು ದೇವಿಕಾ ರಾಣಿ ಎಸ್ಟೇಟ್‌ನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ‘ಚಿತ್ರನಗರಿ’ ಯೋಜನೆಯನ್ನು ರಾಜ್ಯ ಸರ್ಕಾರ ಕೈ ಬಿಟ್ಟಿರುವುದಾಗಿ ತಿಳಿಸಿದ್ದಾರೆ.

ಬಿಗ್ ಬಾಸ್ ವಿನ್ನರ್ ಇವರೆ, 5ನೇ ವಾರ ಮನೆಯಿಂದ ಹೊರಬಂದ ಜೈಜಗದೀಶ್ ಭವಿಷ್ಯ

ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮರಣೋತ್ತರವಾಗಿ ನಟ ಅಂಬರೀಷ್‌ ಅವರಿಗೆ ನೀಡಿದ ‘ಪದ್ಮಭೂಷಣ ಡಾ.ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ’ಯನ್ನು ಸುಮಲತಾ ಅಂಬರೀಷ್‌ ಅವರಿಗೆ ಪ್ರದಾನ ಮಾಡಿ ಮಾತನಾಡಿದ ಅವರು, ಹಾಲಿ ಗುರುತಿಸಿರುವ ಸ್ಥಳದಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಪರಿಸರದ ಕೆಲವು ನಿಯಮಗಳು ಅಡ್ಡಿ ಬರುತ್ತಿರುವುದರಿಂದ ಹೊಸ ಸ್ಥಳದ ಹುಡುಕಾಟದಲ್ಲಿದ್ದೇವೆ ಎಂದರು.

ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳೂ ಫಿಲಂ ಸಿಟಿ ಸ್ಥಾಪನೆ ಘೋಷಣೆ ಮಾಡುತ್ತವೆ. ಆದರೆ, ಕಾರ್ಯರೂಪಕ್ಕೆ ಬರುವುದಿಲ್ಲ. ಅಲ್ಲದೆ, ಬಹುತೇಕ ಮುಖ್ಯಮಂತ್ರಿಗಳು ಅದನ್ನು ತಮ್ಮ ಸ್ವ ಕ್ಷೇತ್ರದಲ್ಲಿ ನಿರ್ಮಾಣ ಮಾಡಲು ಆಸಕ್ತಿ ತೋರುತ್ತಾರೆ. ಇದು ತಪ್ಪು ಎಂದು ಹೇಳುವುದು ಕೂಡ ಕಷ್ಟ. ಆದರೆ, ನಾವು ಫಿಲಂ ಸಿಟಿಯನ್ನು ಬೆಂಗಳೂರಿನಲ್ಲೇ ಆರಂಭಿಸುತ್ತೇವೆ. ಇದಕ್ಕೆ ಸೂಕ್ತವಾದ ಸ್ಥಳದ ಹುಡುಕಾಟ ನಡೆಸಲಾಗುತ್ತಿದೆ. ಹಾಲಿ ಗುರುತಿಸಿರುವ ಸ್ಥಳದಲ್ಲಿ ಪರಿಸರದ ಕೆಲವು ನಿಯಮಗಳು ಅಡ್ಡಿ ಬರುತ್ತಿರುವುದರಿಂದ ಹೊಸ ಸ್ಥಳದ ಹುಡುಕಾಟದಲ್ಲಿದ್ದೇವೆ. ಸಾಧ್ಯವಾದಷ್ಟುಬೇಗ ಸ್ಥಳ ಅಂತಿಮ ಮಾಡಿ ನಿರ್ಮಾಣ ಕಾರ್ಯ ಆರಂಭಿಸುತ್ತೇವೆ. ಇದಕ್ಕಾಗಿ ಸಾಕಷ್ಟುಖಾಸಗಿ ಕಂಪನಿಗಳು ಮುಂದೆ ಬಂದಿವೆ. ನಾವು ಅವರಿಗೆ ಸ್ಥಳ ನೀಡಬೇಕಿದೆ ಎಂದರು.

 

ಬೆಂಗಳೂರಿನಲ್ಲಿ ಪದ್ಮಭೂಷಣ ಡಾ|ಬಿ. ಸರೋಜದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ-2019 ರಲ್ಲಿ ಪಾಲ್ಗೊಂಡೆ. 2018-19ನೇ ಸಾಲಿನ ಪ್ರಶಸ್ತಿ ಪುರಸ್ಕೃತರಾದ (ಮರಣೋತ್ತರ) ಡಾ|ಅಂಬರೀಷ್‌ರವರ ಪ್ರಶಸ್ತಿಯನ್ನು ಶ್ರೀಮತಿ ರವರು ಸ್ವೀಕರಿಸಿದರು. ಅಂಬರೀಷ್‌ರವರು ಮಾಡಿದ ಅದ್ಭುತ ಕಲಾಸೇವೆಯ ಮೂಲಕ ಅವರು ಇಂದಿಗೂ ನಮ್ಮೊಂದಿಗಿದ್ದಾರೆ. pic.twitter.com/utbMXHlUGa

— Dr. Ashwathnarayan C. N. (@drashwathcn)

ಅಂಬರೀಷ್‌ ಅವರು ಬದುಕಿದ್ದ ಸಂದರ್ಭದಲ್ಲಿ ಚಿತ್ರರಂಗ, ಕಾವೇರಿ ವಿಚಾರ ಸೇರಿದಂತೆ ಸಾಕಷ್ಟುಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸಿದ್ದರು. ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಗೆಲ್ಲುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸಂಸದೆ ಸುಮಲತಾ ಅಂಬರೀಷ್‌ ಮಾತನಾಡಿ, ಅವರು ನಮ್ಮೊಂದಿಗೆ ಇಲ್ಲದ ಸಂದರ್ಭದಲ್ಲಿ ಅವರ ಪರವಾಗಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ಕಷ್ಟದ ಕೆಲಸ. ನಾನು ಅಂಬರೀಷ್‌ ಅವರನ್ನು ಭೇಟಿ ಮಾಡಿದ ದಿನಕ್ಕೆ 35 ವರ್ಷವಾಗುತ್ತಿದೆ. ಅವರ ಜತೆಗೆ ಮೊದಲ ಸಿನಿಮಾ ಮಾಡುವಾಗ ಸಾಕಷ್ಟುಭಯ ಇತ್ತು. ಇಬ್ಬರ ಸ್ವಭಾವದಲ್ಲಿಯೂ ಸಾಕಷ್ಟುವ್ಯತ್ಯಾಸವಿತ್ತು. ಆದರೆ, ಅವರು ಮನಸ್ಸು ಅಷ್ಟೇ ಮೃದು ಎಂಬುದು ನನಗೆ ಅರ್ಥವಾಯಿತು. 27 ವರ್ಷ ಅವರೊಂದಿಗೆ ಸಂಸಾರ ಮಾಡಿದ್ದೇನೆ. ಅವರಂತಹ ವ್ಯಕ್ತಿತ್ವವನ್ನು ಬೇರೆ ವ್ಯಕ್ತಿಯಲ್ಲಿ ಕಾಣಲು ಸಾಧ್ಯವಿಲ್ಲವೆಂದರು.

ನಟ ಅಭಿಷೇಕ್‌ಗೌಡ, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌.ಸುರೇಶ್‌ ಮತ್ತಿರರು ಇದ್ದರು.

ಅಂಬಿ ನನಗೆ ತಮ್ಮ ಇದ್ದಂತೆ. ನನ್ನೊಂದಿಗೆ ಸಾಕಷ್ಟುತಮಾಷೆ ಮಾಡುತ್ತಿದ್ದ. ಅವನು ಇಲ್ಲದ ಕ್ಷಣ ನೆನಪಿಸಿಕೊಳ್ಳಲು ಕಷ್ಟ. ಹೆಣ್ಣುಮಕ್ಕಳಿಗೆ ಸೀಮಿತವಾಗಿದ್ದ ಈ ಪ್ರಶಸ್ತಿಯನ್ನು ಗಂಡು ಮಕ್ಕಳಿಗೆ ನೀಡುವಂತೆ ಅಂಬಿ ಹೇಳಿದ್ದ. ಇಂದು ಅವನಿಗೆ ನೀಡುತ್ತಿದ್ದೇನೆ.

- ಡಾ.ಬಿ.ಸರೋಜಾದೇವಿ, ಹಿರಿಯ ಕಲಾವಿದೆ

click me!