
ಬೆಂಗಳೂರು (ನ.15): ದೃಶ್ಯ ಎಂಬ ಕನ್ನಡದ ಖತರ್ನಾಕ್ ಯುವನಟಿಯೊಬ್ಬಳು ಕೊಟ್ಟ ಸಾಲವನ್ನು ವಾಪಾಸು ಕೇಳಿದ ವ್ಯಕ್ತಿ ಹತ್ಯೆಗೆ ಸುಪಾರಿ ಕೊಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಅಯೋಗ್ಯ ಚಿತ್ರದ ಸಹನಟಿ ದೃಶ್ಯ ವಿರುದ್ಧ ಜೀವಹರಣ ಮಾಡಲು ಪ್ರಯತ್ನಿಸಿದ ಆರೋಪ ಕೇಳಿಬಂದಿದ್ದು, ಹಣ ಕೊಟ್ಟಿದ್ದನ್ನು ವಾಪಸ್ ಕೇಳಿದ್ದಕ್ಕೆ ಹುಡುಗರನ್ನು ಬಿಟ್ಟು ಹತ್ಯೆಗೆ ಮುಂದಾಗಿದ್ದಾರೆನ್ನಲಾಗಿದೆ.
'ಗುಪ್ತಾಂಗ ಎಲ್ಲ ಮುಟ್ಟಂಗಿಲ್ಲ' ನಾಗಿಣಿ ಗರಂ ಆಗಿದ್ದು ಯಾರ ಮೇಲೆ?
ಬಲಮುರಿ ಸಮೀಪ ರಾಜೇಶ್ ಮೇಲೆ ನಾಲ್ವರಿಂದ ಹಲ್ಲೆಯಾಗಿತ್ತು. ಈ ವೇಳೆ ರಾಜೇಶ್ ದೇಹವನ್ನು ರೇಜರ್ನಿಂದ ಕೊರೆದು ಹಾಕಲಾಗಿತ್ತು. ಈ ವೇಳೆ 'ದೃಶ್ಯ ಬಳಿ ಹಣ ಕೇಳ್ತೀಯಾ' ಎಂದು ಹಲ್ಲೆ ನಡೆಸುವವರು ಕೂಗಾಡಿರುವುದಾಗಿ ರಾಜೇಶ್ ದೂರಿನಲ್ಲಿ ತಿಳಿಸಿದ್ದಾರೆ. ಗಾಯಗೊಂಡ ರಾಜೇಶ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು.
ಉದ್ಯಮಿ ರಾಜೇಶ್ ಎಂಬಾತ ದೃಶ್ಯಳಿಗೆ ಹಣ ನೀಡಿದ್ದನಂತೆ. ಕೊಟ್ಟ ಹಣ ವಾಪಾಸು ಕೊಡುವಂತೆ ರಾಜೇಶ್ ಕೇಳಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಬಳಿಕ ಹಣ ಕೇಳಿದ ರಾಜೇಶ್ ಮುಗಿಸುವಂತೆ ದೃಶ್ಯ ತಮ್ಮ ಹುಡುಗರಿಗೆ ಸುಪಾರಿ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ನಟಿ ದೃಶ್ಯ ವಿರುದ್ಧ ನ.13 [ಮಂಗಳವಾರ] ಮೈಸೂರಿನ ಕೆಆರ್ಎಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ದೃಶ್ಯ ಮತ್ತು ಆಕೆಯ ತಂದೆ ನಾಪತ್ತೆಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.