Punga Umesh Statement on Renukaswamy ದರ್ಶನ್ ಅವರ ವಿರುದ್ಧದ ಕೊಲೆ ಕೇಸ್‌ನಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವ ಬೆನ್ನಲ್ಲೇ, ಅವರ ಜಾಮೀನು ಅರ್ಜಿಯ ಕುರಿತು ಚರ್ಚೆಗಳು ಆರಂಭವಾಗಿವೆ. ದರ್ಶನ್ ಪರವಾಗಿ ಮಾತನಾಡಿರುವ ಸಹನಟ ಪುಂಗ ಉಮೇಶ್, ರೇಣುಕಾಸ್ವಾಮಿ ಕೊಲೆಯನ್ನು ಸಮರ್ಥಿಸಿಕೊಂಡು ವಿವಾದ ಸೃಷ್ಟಿಸಿದ್ದಾರೆ.
ಬೆಂಗಳೂರು (ಸೆ.4): ಕಿಲ್ಲಿಂಗ್ ಸ್ಟಾರ್ ದರ್ಶನ್‌ಗೆ ದಿನಗಳು ಕಳೆದ ಹಾಗೆ ಆತಂಕ ಶುರುವಾಗುತ್ತಿದೆ. ಈಗಾಗಲೇ ಅವರ ವಿರುದ್ಧ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 3991 ಪುಟಗಳ ಚಾರ್ಜ್‌ಶೀಟ್‌ಅನ್ನು 24ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ.ಇಲ್ಲಿಂದ ಅವರ ಜಾಮೀನು ಪಡೆಯುವ ಹೋರಾಟ ಆರಂಭವಾಗುತ್ತದೆಯಾದರೂ, ದರ್ಶನ್ ಪಾಲಿಗೆ ಅದು ಸುಲಭವಿಲ್ಲ. ಅದಕ್ಕೆ ಕಾರಣ, ಅವರ ಅಭಿಮಾನಿ ವರ್ಗ. ದರ್ಶನ್‌ಗೆ ಯಾವ ಕಾರಣಕ್ಕಾಗಿ ಜಾಮೀನು ನೀಡಬಾರದು ಎನ್ನುವ ನಿಟ್ಟಿನಲ್ಲಿ ಅವರ ಪರವಾಗಿ ಹೊರಗಡೆ ಮಾತನಾಡುತ್ತಿರುವ ವ್ಯಕ್ತಿಗಳ ಮಾಹಿತಿಗಳನ್ನೆಲ್ಲಾ ಕೋರ್ಟ್‌ಗೆ ತಿಳಿಸಲು ತನಿಖಾಧಿಕಾರಿಗಳು ಸಜ್ಜಾಗಿದ್ದಾರೆ. ದರ್ಶನ್ ಒಳಗೆ ಇರುವಾಗಲೇ ಅವರ ಕೃತ್ಯವನ್ನು ಸಮರ್ಥನೆ ಮಾಡಿಕೊಂಡು ಈ ರೀತಿ ಮಾತನಾಡುತ್ತಿದ್ದಾರೆ. ಹಾಗೇನಾದರೂ ದರ್ಶನ್‌ಗೆ ಜಾಮೀನು ನೀಡಿದಲ್ಲಿ ತಮ್ಮ ಅಭಿಮಾನಿಗಳಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎನ್ನುವ ವಾದವನ್ನು ಮುಂದಿಡಲು, ದರ್ಶನ್ ಪರವಾಗಿ ಮಾತನಾಡುತ್ತಿರುವ ಎಲ್ಲರ ಮಾಹಿತಿಗಳು, ಸುದ್ದಿಗಳನ್ನು ಕಲೆಹಾಕುತ್ತಿದ್ದಾರೆ. ಇದರ ನಡುವೆ ದರ್ಶನ್ ಅವರ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಸಹನಟ ಪುಂಗ ಉಮೇಶ್, ರೇಣುಕಾಸ್ವಾಮಿ ಕೃತ್ಯವನ್ನು ಸಮರ್ಥನೆ ಮಾಡಿಕೊಂಡು ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ದರ್ಶನ್ ಅವರಿಗೆ ಬಂದಿರುವ ಈ ಕಷ್ಟದ ಬಗ್ಗೆ ನೀವೇನು ಹೇಳುತ್ತೀರಿ ಎಂದು ಕರಿಯ ಚಿತ್ರದಲ್ಲಿ ದರ್ಶನ್ ಜೊತೆ ಅಭಿನಯಿಸಿದ್ದ ಪುಂಗ ಉಮೇಶ್‌ಗೆ ಕೇಳಲಾಗಿದೆ. ಇದಕ್ಕೆ ಅವರು, 'ಏನ್ ಕಷ್ಟ ಏನಿಲ್ಲ ಸರ್. ಪ್ರಪಂಚದಲ್ಲಿ ಯಾರೂ ಮಾಡಬಾರದ ತಪ್ಪೇನೂ ಇವರು ಮಾಡಿಲ್ಲ. ಏನ್ ಸಮಸ್ಯೆ ಆಗಿದೆ ಅನ್ನೋದನ್ನ ಹೇಳಿ. ಇಡೀ ಭಾರತ ದೇಶದಲ್ಲಿ ಈವರೆಗೂ ಒಂದೂ ಕೊಲೆನೂ ಆಗಿಲ್ವಾ? ಇವರೊಬ್ರೆ ಮಾಡಿರೋದಾ? ಇದನ್ನು ನೀವು ಹೇಳಿ. ಇವರೊಬ್ರೆ ಮಾಡಿರೋದಾ? ನನ್ನ ಪ್ರಶ್ನೆಗೆ ಉತ್ತರ ಹೇಳಿ. ಅಂಥಾ ಸತ್ಯ ಹರಿಶ್ಚಂದ್ರ ಎರಡೂವರೆ ವರ್ಷ ಮೂರು ವರ್ಷ ಅವನು ಕಷ್ಟಪಟ್ಟ. ರಾಮ ಮೂರು-ನಾಲ್ಕು ಮರ್ಡರ್‌ಗಳನ್ನು ಮಾಡಿದ. ವಾಲಿ, ಸುಗ್ರೀವ, ರಾವಣ ಎಲ್ಲರನ್ನೂ ಸಾಯಿಸಿದ. ರಾಮನಿಗೆ ಏನಾದ್ರೂ ಅಂದ್ರಾ. ಇವರು ಕೂಡ ಏನೋ ಒಂದು ಹೆಣ್ಣಿಗೆ ಅವಮಾನವಾಗಿದ್ದನ್ನ ಪ್ರಶ್ನಿಸಿದ್ದಾರೆ. ಭಾರತ ಮಾತೆ ಅಂತೀರಾ? ತಾಯಿ ಅಂತೀರಾ? ಹೆಣ್ಣನ್ನ ಪೂಜೆ ಮಾಡ್ಬೇಕು ಅಂತೀರಾ? ಒಂದು ಹೆಣ್ಣಿಗೆ ಅವಮಾನ ಆದ್ಮೇಲೆ ಅವನು ಹೋರಾಟ ಮಾಡ್ಬಾರ್ದಾ? ಅದನ್ನ ಕೇಳಬಾರದಾ?' ಎಂದು ಪುಂಗ ಉಮೇಶ್ ಹೇಳಿದ್ದಾರೆ.
ಇನ್ನು ಪುಂಗ ಉಮೇಶ್ ಮಾತನ್ನ ದರ್ಶನ್ ಅಭಿಮಾನಿಗಳು ಸಂಭ್ರಮಿಸ್ತಾ ಇದ್ದರೆ, ಯಾರಿಗೆ ಅವಮಾನವಾದರೂ ಅದನ್ನ ಕೇಳೋಕೆ ದೇಶದಲ್ಲಿ ಕಾನೂನು ಇದೆ ಎಂದು ಉತ್ತರ ನೀಡಿದ್ದಾರೆ. ಇದಕ್ಕೆ ಕಾಮೆಂಟ್ ಮಾಡಿರುವ ಹೆಚ್ಚಿನವರು , 'ಭಾರತ ದೇಶದಲ್ಲಿ ಯಾರು ಜೈಲಿಗೆ hogilwa? ದೇಶದಲ್ಲಿ ಯಾರು ಶಿಕ್ಷೆ ಅನುಭವಿಸಿಲ್ವ?' ಎಂದು ಬರೆದಿದ್ದಾರೆ.
ಕೂರಲು ಆಗ್ತಿಲ್ಲ, ನಿಲ್ಲೋಕು ಆಗ್ತಿಲ್ಲ, ಬಳ್ಳಾರಿಯಲ್ಲಿ ಬಾಸ್‌ಗೆ 'ಅದೇ..' ಬರ್ತಿಲ್ಲ: ಕೊನೆಗೂ ಸಿಕ್ತು ಸರ್ಜಿಕಲ್ ಚೇರ್!
'ಕೇಳ್ಬೋದಿತ್ತು ಯಾಕೆ ಮೆಸೇಜ್ ಮಾಡಿದೆ ಅಂತ ಕೊಲೆ ಮಾಡು ಅಂತ ಅಲ್ಲ ಸಾರ್. ದರ್ಶನ್ ಒಬ್ಬ celebraty ಅವನ್ನ ಎಷ್ಟೋ ಜನ ಫಾಲೋ ಮಾಡ್ತಾರೆ ಅವ್ರು ಏನ್ ಮಾಡ್ತಾರೋ ಅದನ್ನ ಫಾಲೋ ಮಾಡ್ತಾರೆ ಅದಕ್ಕೆ ಕೆಟ್ಟದನ್ನ ಕೆಟ್ಟದೆ ಅನ್ಬೇಕು ಹೊರತು ಸರಿ ಅಂತ ವಾದಿಸ್ಬರ್ದು ಅವಾಗ ನೀವು ಚೀಪ್ ಆಗ್ತಿರಿ'ಎಂದು ಪುಂಗ ಉಮೇಶ್‌ಗೆ ಸಲಹೆ ನೀಡಿದ್ದಾರೆ.
Repoters Dairy: ದರ್ಶನ್‌ಗೆ ಕಾಡುತ್ತಿದೆ ‘ದುರ್ಯೋಧನ ಗ್ರಹಣ’: ಇದೇಕೆ ಹೀಗೆ ಸಾಲು ಸಾಲು ಕಂಟಕ?